ಸದ್ಯ ಜಗತ್ತಿನಾದ್ಯಂತ ಕೊರೊನಾನದ್ದೇ ಸದ್ದು.. ಕೊರೊನಾ ಎಂದ್ರೆ ಸಾಕು ಜನರು ನಿದ್ದೆಯಲ್ಲೂ ಬೆಚ್ಚಿಬೀಳುತ್ತಿದ್ದಾರೆ. ಈಗಾಗಲೇ ಈ ಕೊರೊನಾಸುರನ ಹೊಡೆತಕ್ಕೆ ಹಲವು ದೇಶಗಳು ಲಾಕ್ ಡೌನ್ ಆಗಿವೆ, ಆಗುತ್ತಿವೆ. ಈ ಮಧ್ಯೆ ಕೊರೊನಾ ಹುಟ್ಟಿನ ಬಗ್ಗೆ ಹಲವು ಅನುಮಾನಗಳು ಮೂಡುತ್ತಿದ್ದು, ಇದೀಗ ಈ ಪ್ರಶ್ನೆಗಳ ಸರಮಾಲೆ ಸೃಷ್ಠಿಯಾಗಿವೆ. ಅದಕ್ಕೆ ಕಾರಣ ನೆಟ್‌ಫ್ಲಿಕ್ಸ್ ನಲ್ಲಿ ಪ್ರಸಾರವಾದ ಸೌತ್ ಕೊರಿಯಾದ ಡ್ರಾಮಾ ಸಿರೀಸ್ ಮೈ ಸೀಕ್ರೆಟ್ ಟೆರಿಯಸ್ ನ ಮೊದಲ ಸೀಸನ್‌ನ ಎಪಿಸೋಡ್..
ಹೌದು..!ಸೋಶಿಯಲ್ ಮೀಡಿಯಾದಲ್ಲಿ ಕಳೆದೊಂದು ವಾರದಿಂದ ಈ ಸೀರಿಸ್ ನ ಒಂದು ಭಾಗ ಭಾರಿ ವೈರಲ್ ಆಗುತ್ತಿದೆ. ಆ ವಿಡಿಯೋ ನೋಡಿದವರ ತಲೆಯಲ್ಲಿ ಹೌದಾ.. ನಿಜಾನಾ.. ಇದು ಹೇಗೆ ಸಾಧ್ಯ..? ನಿಜಕ್ಕೂ ಕೊರೊನಾ ವೈರಸ್ ಹಿಂದಿರೋ ಕರಾಳ ಸತ್ಯ ಇದೇನಾ..? ಇಡೀ ಜಗತ್ತನ್ನೇ ಕಿರುಬೆರಳಲ್ಲಿ ಆಡಿಸ್ತಿರೋ ಕೊರೊನಾ ವೈರಸ್ ಹುಟ್ಟಿನ ಹಿಂದೆ ದೊಡ್ಡ ಷಡ್ಯಂತ್ರವೇ ಇದ್ಯಾ..? ಇಷ್ಟೊಂದು ಪ್ರಶ್ನೆಗಳು ಹರಿಡಾದ್ತಿವೆ.
ಏನಿದು ವಿಡಿಯೋ..?
ನೆಟ್‌ಫ್ಲಿಕ್ಸ್ ನಲ್ಲಿ ಪ್ರಸಾರವಾದ ಸೌತ್ ಕೊರಿಯಾದ ಡ್ರಾಮಾ ಸಿರೀಸ್ ಮೈ ಸೀಕ್ರೆಟ್ ಟೆರಿಯಸ್‌ನ ಮೊದಲ ಸೀಸನ್‌ನ ಎಪಿಸೋಡ್ ಒಂದು ಈಗ ವೈರಲ್ ಆಗ್ತಿದೆ. ಅದುವೇ ಎಪಿಸೋಡ್ 10. 2018ರಲ್ಲಿ ಪ್ರಸಾರವಾದ ವೆಬ್ ಸಿರೀಸ್ ಇದು. ಈ ಎಪಿಸೋಡ್‌ನಲ್ಲಿ ಬರುವ ಕೆಲ ಸೀನ್‌ಗಳಲ್ಲಿ ಕೊರೊನಾ ವೈರಸ್‌ನ ಉಲ್ಲೇಖ ಇದೆ. ಈ ವೈರಸ್ ಬಗ್ಗೆ, ಅದ್ರ ಹುಟ್ಟಿನ ಬಗ್ಗೆ, ಅದರ ಲಕ್ಷಣಗಳ ಬಗ್ಗೆ ಸಂಭಾಷಣೆ ಇದೆ.
ಸೀನ್ ನಂಬರ್ 1:
ಪಾತ್ರಧಾರಿ 1 -ನಾವು ಇದರ ಬಗ್ಗೆ ಮತ್ತಷ್ಟು ಸಂಶೋಧನೆ ಮಾಡಬೇಕಿದೆ.
ಪಾತ್ರಧಾರಿ 2 -ಆದ್ರೆ ಅದು ಕೊರೊನಾ ವೈರಸ್ ರೀತಿ ಕಾಣುತ್ತಿದೆ..!
ಪಾತ್ರಧಾರಿ 1 -ಕೊರೊನಾ..? ಎಂಇಆರ್ ಎಸ್
ಪಾತ್ರಧಾರಿ 2 -ಎಂಇಆರ್ ಎಸ್, ಎಸ್ ಎ ಆರ್ ಎಸ್, ಇವು ಸಾಮಾನ್ಯ ಜ್ವರಗಳಾಗಿದ್ವು. ಅವೆಲ್ಲವೂ ಒಂದು ವಿಧಕ್ಕೆ ಸೇರಿದ ಜ್ವರಗಳು. ಅವುಗಳ ಜೀನ್ ಇನ್ಫರ್ಮೇಶನ್ ಕೂಡ ಒಂದೇ ಆಗಿತ್ತು. ಆದ್ರೆ ಕೊರೊನಾ ವೈರಸ್ ರೆಸ್ಪಿರೇಟರಿ ಸಿಸ್ಟಂಗೆ ಅಟ್ಯಾಕ್ ಮಾಡುತ್ತೆ. 2015ರಲ್ಲಿ ಎಂಇಆರ್ ಎಸ್ ಸಾಂಕ್ರಾಮಿಕ ಕಾಯಿಲೆ ಬಂದಾಗ ಅದರ ಮರಣ ಪ್ರಮಾಣ 20% ಇತ್ತು.
ಪಾತ್ರಧಾರಿ 2 -ನಾನ್ ಹೇಳಿದ ಹಾಗೆ ಕೊರೊನಾ ರೂಪಾಂತರಗೊAಡ ವೈರಸ್. ಸಾವಿನ ಪ್ರಮಾಣ ಹೆಚ್ಚಾಗುವಂತೆ ಯಾರೋ ಅದನ್ನ ತಿರುಚಿದ್ದಾರೆ. ಇದರ ಮರಣ ಪ್ರಮಾಣ 90%.
ಪಾತ್ರಧಾರಿ 1 -90%..!!!
ಪಾತ್ರಧಾರಿ 2 -ಕೊರೊನಾ ಬಗ್ಗೆ ಅದಕ್ಕಿಂತಲೂ ಗಂಭೀರ ವಿಚಾರ ಏನು ಅಂದ್ರೆ ಈ ಕೊರೊನಾ ವೈರಸ್ ಬೆಳೆಯೋದಕ್ಕೆ 2 ರಿಂದ 14 ದಿನಗಳ ಸಮಯ ತೆಗೆದುಕೊಳ್ಳುತ್ತೆ. ಈ ವೈರಸ್ ಕಾಣಿಸಿಕೊಂಡ 5 ನಿಮಿಷಗಳಲ್ಲಿ ನೇರ ಶ್ವಾಸಕೋಶಕ್ಕೆ ಅಟ್ಯಾಕ್ ಮಾಡುವಂತೆ ರೂಪಿಸಲಾಗಿದೆ.
ಪಾತ್ರಧಾರಿ 1 -ಇದಕ್ಕೆ ಔಷಧ ಇಲ್ವಾ..?
ಪಾತ್ರಧಾರಿ 2 -ಈ ಸಮಯದಲ್ಲಿ ಈ ವೈರಸ್‌ಗೆ ಯಾವುದೇ ರೀತಿಯ ವ್ಯಾಕ್ಸಿನ್ ಲಭ್ಯವಿಲ್ಲ. ಅದನ್ನ ಅಭಿವೃದ್ಧಿಪಡಿಸೋದು ಕೂಡ ತುಂಬಾ ಕಷ್ಟ.
ಸೀನ್ ನಂಬರ್ 2:
ಪಾತ್ರಧಾರಿ 3 -ಮನುಷ್ಯನೇ ರೂಪಿಸಿದ ವೈರಸ್..?
ಪಾತ್ರಧಾರಿ 4 -ಹೌದು.
ಪಾತ್ರಧಾರಿ 3 -ಮರಣ ಪ್ರಮಾಣ..?
ಪಾತ್ರಧಾರಿ 4 -90%
ಪಾತ್ರಧಾರಿ 3 -ಅವ್ರು ಬಯೋಕೆಮಿಕಲ್ ಟೆರರಿಸ್ಟ್ ಅಟ್ಯಾಕ್‌ಗೆ ಪ್ಲ್ಯಾನ್ ಮಾಡ್ತಿದ್ದಾರೆ. ನಾವು ಸಮಯ ಮತ್ತು ಸ್ಥಳವನ್ನು ಫೈಂಡ್ ಔಟ್ ಮಾಡಬೇಕು.
ಸೀನ್ ನಂಬರ್ 3:
ಪಾತ್ರಧಾರಿ 5 -ನಾನು ಮನುಷ್ಯನ ದೇಹದ ಮೇಲಿನ ಟೆಸ್ಟ್ ನ ಪೂರ್ತಿ ಮಾಡಿದ್ದೇನೆ.
ಪಾತ್ರಧಾರಿ 6 -ಹೇಗಾಯ್ತು ಟೆಸ್ಟ್..?
ಪಾತ್ರಧಾರಿ 5 -ನಾವು ಜೆನೆರಿಕ್ ಮೆಟೀರಿಯಲ್‌ನ ಯಶಸ್ವಿಯಾಗಿ ಆತನ ದೇಹಕ್ಕೆ ಇಂಜೆಕ್ಟ್ ಮಾಡಿದ್ವಿ. ಕೋರ್ಸ್ ಪ್ರಾಜೆಕ್ಟ್ ನ ಸ್ಟಾರ್ಟ್ ಮಾಡೋಕೆ ಇದು ಸೂಕ್ತ ಸಮಯ.
ಇವಿಷ್ಟು ಪಾತ್ರಧಾರಿಗಳ ನಡುವೆ ಬರುವ ಸಂಭಾಷಣೆ.
ಅಚ್ಚರಿಯ ವಿಷಯ ಏನು ಅಂದ್ರೆ ಕೊರೊನಾ ವೈರಸ್ ಬಗೆಗಿನ ಭವಿಷ್ಯವಾಣಿಗಳು ಈ ಹಿಂದೆಯೇ ಕೆಲವು ಬಂದಿದ್ರೂ ಕೂಡ ಈ ವೆಬ್ ಸಿರೀಸ್‌ನಲ್ಲಿ ಹೇಳಿರುವ ಡೈಲಾಗ್‌ಗಳು ಕರಾರುವಕ್ಕಾಗಿವೆ. ಇದು ಯಾರದ್ದೋ ಷಡ್ಯಂತ್ರದ ಫಲ ಅನ್ನೋದನ್ನ ಸಿನಿಮಾ ಡೈಲಾಗ್ ನಲ್ಲಿ ಹೇಳಿದ್ರೂ ಕೊರೊನಾದ ಬಗ್ಗೆ ಹೇಳಿರೋ ಲಕ್ಷಣಗಳು 100ಕ್ಕೆ 100ರಷ್ಟು ಸತ್ಯ. ಇದು ಹೇಗೆ ಸಾಧ್ಯ..? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.








