ದೇಶದಲ್ಲಿ 19 ಲಕ್ಷ ದಾಟಿದ ಕೊರೋನಾ ಪೀಡಿತರ ಸಂಖ್ಯೆ
ಹೊಸದಿಲ್ಲಿ, ಅಗಸ್ಟ್ 6: ಕಳೆದ 24 ಗಂಟೆಗಳಲ್ಲಿ 56,282 ಹೊಸ ಕೊರೋನವೈರಸ್ ಪ್ರಕರಣಗಳು ಮತ್ತು 904 ಸಾವುಗಳು ಸಂಭವಿಸಿದ್ದು, ಭಾರತದಲ್ಲಿ ಒಟ್ಟು ಕೊರೋನಾ ಪೀಡಿತರ ಸಂಖ್ಯೆ 19,64,537 ಮತ್ತು 40,699 ಸಾವುಗಳಿಗೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ ಅಂಶಗಳು ಗುರುವಾರ ಬಹಿರಂಗಪಡಿಸಿವೆ.

ಪ್ರಸ್ತುತ, 5,95,501 ಪ್ರಕರಣಗಳು ಸಕ್ರಿಯವಾಗಿದ್ದು, 1,328,336 ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.ಕಳೆದ 24 ಗಂಟೆಗಳಲ್ಲಿ 6,64,949 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ಕೊರೋನವೈರಸ್ ಸಾಂಕ್ರಾಮಿಕ ರೋಗ ಹರಡಿದ ನಂತರ ಕಳೆದ ಆರು ತಿಂಗಳಲ್ಲಿ ಭಾರತದ ಆರು ಪ್ರಮುಖ ರಾಜ್ಯಗಳು ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ.
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳಿದ್ದು, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ದೆಹಲಿ ಮತ್ತು ಉತ್ತರ ಪ್ರದೇಶಗಳು ಅತಿ ಹೆಚ್ಚು ಸೋಂಕು ದಾಖಲಾಗಿರುವ ರಾಜ್ಯಗಳು
4,68,265 ಪ್ರಕರಣಗಳು ಮತ್ತು 16,476 ಸಾವುಗಳೊಂದಿಗೆ ಮಹಾರಾಷ್ಟ್ರವು ಅತಿ ಹೆಚ್ಚು ಹಾನಿಗೊಳಗಾದ ರಾಜ್ಯವಾಗಿದೆ. 2,73,460 ಪ್ರಕರಣಗಳು ಮತ್ತು 4,461 ಸಾವುಗಳೊಂದಿಗೆ ತಮಿಳುನಾಡು ಎರಡನೇ ಸ್ಥಾನದಲ್ಲಿದೆ.








