ಕೋವಿಡ್ 3ನೇ ಅಲೆ ; ಊರಿನತ್ತ ಗುಳೆ ಹೊರಟ ರಾಜಧಾನಿ ಜನ Saaksha tv
ಬೆಂಗಳೂರು: ಒಮಿಕ್ರಾನ್ ಪ್ರಕರಣ ರಾಜ್ಯ ರಾಜಧಾನಿಯಲ್ಲಿ ಏರುತ್ತಲೇರಿವುದು ಜನರ ನಿದ್ದೆಗೆಡಸಿದೆ. ಅಲ್ಲದೇ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿದ್ದು ಸಿಲಕಾನ್ ಸಿಟಿ ಜನ ಭಯ ಬೀತರಾಗಿ ಊರು ಬಿಡುತ್ತಿದ್ದಾರೆ. ಈಗ ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ. ಆದರೆ ಮುಂದೆ ಲಾಕ್ ಡೌನ್ ಜಾರಿ ಮಾಡಿದರೆ ಹೇಗೆ ಬದುಕುವುದು ಎಂದು ರಾತ್ರೊ ರಾತ್ರಿ ತಮ್ಮ ಊರುಗಳತ್ತ ಗುಳೆ ಹೊರಟಿದ್ದಾರೆ.
ಈಗಾಗಲೇ ರಾಜ್ಯ ಸರಕಾರ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ, ಮುಂದೆ ಲಾಕ್ ಡೌನ್ ಮಾಡಿದರು ಮಾಡಬಹುದು. ಎರಡನೇ ಅಲೆಯಲ್ಲಿಯು ಕೂಡಾ ಸರಕಾರ ಇದೇ ರೀತಿ ಮಾಡಿತ್ತು, ಆಗ ಎಷ್ಟೊ ಜನರಿಗೆ ತಿಂಗಳುಗಟ್ಟಲೆ ಊಟ, ಬಟ್ಟೆಗು ಸಮಸ್ಯೆ ಉಂಟಾಗಿತ್ತು. ಮತ್ತೆ ಇದೇ ರೀತಿ ಆದರೆ ಜನರಿಗೆ ಬದುಕಲು ಅಸಾಧ್ಯ ಎಂದು ಜನರು ಊರಿನತ್ತ ಮುಖ ಮಾಡಿದ್ದಾರೆ.
ಇನ್ನೂ ಬೆಳಿಗ್ಗೆಯಿಂದಲೇ ನಗರದ ಟೋಲ್ ಗಳ ಬಳಿ ವಾಹನಗಳ ಸಾಲು ಸಾಲು ಕಂಡುಬಂದಿತ್ತು. ಸರ್ಕಾರದ ಮಾತುಗಳ ಮೇಲೆ ಜನರಿಗೆ ನಂಬಿಕೆ ಬರದಂತಾಗಿದೆ, ಲಾಕ್ ಡೌನ್ ಮಾಡಿದರೆ ಕೆಲಸ ಕಾರ್ಯ ಇರಲ್ಲ ಬಹಳಷ್ಟು ತೊಂದರೆ ಆಗುತ್ತದೆ. ಹೀಗಾಗಿಯೇ ಜನರು ಊರಿನತ್ತ ಹೊರಟಿದ್ದಾರೆ. ಈಗಾಗಲೇ ತಜ್ಞರು ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬಿರುತ್ತದೆ ಎಂದು ಎಚ್ಚರಿಕೆ ಕೂಡಾ ನೀಡಿದ್ದಾರೆ, ಹೀಗಾಗಿಯೇ ಜೀವ ಇದ್ದರೆ ಹೇಗಾದರು ಬದುಕಿಕೊಳ್ಳಬಹುದು ಎಂದು ಜನರು ನಗರಗಳಿಂದ ಹಳ್ಳಿಗಳಿಗೆ ಹೊರಟಿದ್ದಾರೆ