ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,116 – Saaksha Tv
ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಹೊಸದಾಗಿ 3,116 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ದಿನದ ಏರಿಕೆ ಪ್ರಮಾಣವು 0.41 ರಷ್ಟಿದ್ದು, ವಾರದ ಏರಿಕೆ ಪ್ರಮಾಣವು 0.50ರಷ್ಟಿದೆ. ಹಾಗೇ 5,559 ಜನರು ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣವು 98.71ರಷ್ಟಿದೆ. ಸಕ್ರೀಯ ಪ್ರಕರಣಗಳು 38,069 ಇದೆ. ಇದು ಶೇ 0.09 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಕೊರೊನಾಕ್ಕೆ 47 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಕಳೆದ 24 ಗಂಟೆಯಲ್ಲಿ 7,61,737 ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ಇಲ್ಲಿಯವರೆಗೆ 180.13 ಕೋಟಿ ಕೊರೊನಾ ಲಸಿಕೆಗಳನ್ನು ಹಾಕಲಾಗಿದೆ.









