ನವದೆಹಲಿ : ಭಾರತದಲ್ಲಿ ಕಳೆದ ಮೂರು ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಹೆಮ್ಮಾರಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದೆ. ಇದರೊಂದಿಗೆ ಸದ್ಯ ಒಟ್ಟಾರೆ ಸೋಂಕಿತರ ಸಂಖ್ಯೆ 27,67,274ಕ್ಕೆ ತಲುಪಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ಪ್ರಕಾರ, ಕಳೆದ 24 ಗಂಟೇಲಿ ದೇಶದಾದ್ಯಂತ 64,531 ಹೊಸ ಪ್ರಕರಣ ದಾಖಲಾಗಿದೆ. 1092 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 27,67,274ಕ್ಕೆ ಹಾಗೂ ಒಟ್ಟು ಸಾವಿನ ಸಂಖ್ಯೆ 52,889ಕ್ಕೆ ಏರಿದೆ.
ಏತನ್ಮಧ್ಯೆ ದೇಶದ ಒಟ್ಟು 27,67,274 ಮಂದಿ ಸೋಂಕಿತರ ಪೈಕಿ ಒಂದೇ ದಿನ 59,903 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ದೇಶದಲ್ಲಿ ಒಟ್ಟಾರೆ ಗುಣಮುಖರ ಸಂಖ್ಯೆ 20,37,871ಕ್ಕೆ ತಲುಪಿದೆ. ಭಾರತದಲ್ಲಿ ಇನ್ನೂ 6,76,514 ಸಕ್ರಿಯ ಪ್ರಕರಣಗಳಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.








