ಮೈಸೂರು: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಮೈಸೂರಿನ ದಟ್ಟಗಳ್ಳಿ (Dattagalli) ಹತ್ತಿರದ ಕೆಇಬಿ ಸಮುದಾಯ ಭವನದಲ್ಲಿ ಈ ಘಟನೆ ನಡೆದಿದೆ.ಬೆಮಲ್ ಮ್ಯಾನೇಜರ್ ಮೋಹನ್ (54) ಆತ್ಮಹತ್ಯೆ ಮಾಡಿಕೊಂಡವರು ಎನ್ನಲಾಗಿದೆ. ಮೈಸೂರಿನ (Mysuru) ಬೋಗಾದಿ ಬಳಿಯ ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿದ್ದ ಮೋಹನ್ ಎಂದಿನಂತೆ ಕೆಲಸಕ್ಕೆ ತೆರಳಿದ್ದರು.
ಆದರೆ, ಕೆಲಸದ ವೇಳೆಯೇ ದಟ್ಟಗಳ್ಳಿ ಬಳಿಯ ಕೆಇಬಿ ಸಮುದಾಯ ಭವನದ ವಾಚ್‌ಮ್ಯಾನ್ ಶೆಡ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕುವೆಂಪುನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








