ದೆಹಲಿ: ವಿಶ್ವದಾದ್ಯಂತ ಕೊರೊನಾ ಮಹಾಮಾರಿ ಮರಣಮೃದಂಗವನ್ನು ಬಾರಿಸುತ್ತಿದೆ. ಕ್ಷಿಪ್ರಗತಿಯಲ್ಲಿ ಈ ಹೆಮ್ಮಾರಿ ಹರಡುತ್ತಿದ್ದು, ಜನರ ಬದುಕನ್ನು ಬರ್ಬಾದ್ ಮಾಡಿಬಿಟ್ಟಿದೆ. ಹೀಗಾಗಿ ಬಹುತೇಕ ಎಲ್ಲಾ ಕ್ರೀಡಾಕೂಟಗಳನ್ನು ರದ್ದು ಮಾಡಲಾಗಿದೆ. ಆದ್ರೆ ಈವರೆಗೂ ಟೋಕಿಯೋದಲ್ಲಿ ನಿಗದಿಯಾಗಿರುವ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಪಂದ್ಯಾವಳಿಯನ್ನು ರದ್ದು ಮಾಡುವ ನಿರ್ಧಾರಕ್ಕೆ ಬಂದಿರಲಿಲ್ಲ. ಆದರೆ ಇದೀಗ ಪ್ರತಿಕೂಲ ಪರಿಸ್ಥಿತಿಯಿಂದಾಗಿ ಬೇರೆ ದಾರಿಯಿಲ್ಲದೆ, ಒಲಿಂಪಿಕ್ಸ್ ನ್ನ ಮುಂದಿನ ವರ್ಷಕ್ಕೆ ಮುಂದೂಡುವ ಸಾಧ್ಯತೆ ಇದೆ.
ಈ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಅಸೋಸಿಯೇಷನ್ ನ ಸದಸ್ಯ ಡಿಕ್ ಪೌಂಡ್ ಮಾಹಿತಿ ನೀಡಿದ್ದು, ” ಸಮಿತಿಯು ಈ ವರ್ಷದ ಜುಲೈ 24-ಆಗಸ್ಟ್ 29 ವರೆಗೂ ನಡೆಯಬೇಕಿದ್ದ ಒಲಿಂಪಿಕ್ಸ್ ನ್ನ ಮುಂದಿನ ವರ್ಷದ ಬೇಸಿಗೆಯಲ್ಲಿ ನಡೆಸುವ ಬಗ್ಗೆ ತೀರ್ಮಾನ ವಹಿಸಲಾಗಿದೆ” ಎಂದಿದ್ದಾರೆ.
ಇನ್ನು ಈ ಕ್ರೀಡಾಕೂಟದಿಂದ ಆಸ್ಟ್ರೇಲಿಯಾ ಹಾಗೂ ಕೆನಡಾ ರಾಷ್ಟ್ರಗಳು ಹಿಂದೆ ಸರಿಯವ ಮಾತುಗಳನ್ನಾಡಿವೆ. ಇದರ ಬೆನ್ನಲ್ಲೆ ಒಲಿಂಪಿಕ್ಸ್ ಸಮಿತಿ ಈ ನಿರ್ಧಾರಕ್ಕೆ ಬಂದಿದೆ.








