ಆಕ್ಸ್‌ಫರ್ಡ್ ಕೋವಿಡ್-19 ಲಸಿಕೆ ಮಾನವ ಪ್ರಯೋಗಕ್ಕೆ ಪರಿಣಾಮಕಾರಿ
ಲಂಡನ್, ಜುಲೈ21: ಆಕ್ಸ್‌ಫರ್ಡ್ ಕೋವಿಡ್-19 ಲಸಿಕೆ ಮಾನವ ಪ್ರಯೋಗವು ಲಸಿಕೆ ಸುರಕ್ಷಿತ, ಪರಿಣಾಮಕಾರಿ ಮತ್ತು ರೋಗನಿರೋಧಕವಾಗಿದೆ ಎಂದು ಹೇಳಲಾಗಿದೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ ನಡುವಿನ ಜಂಟಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದ ಕೋವಿಡ್-19 ಲಸಿಕೆಯ ಆರಂಭಿಕ ಪ್ರಯೋಗದ ದತ್ತಾಂಶವನ್ನು ಪ್ರಕಟಿಸಲಾಗಿದೆ. ಯುಕೆ ಮೂಲದ ಮೆಡಿಕಲ್ ಜರ್ನಲ್‌ನ ಮುಖ್ಯ ಸಂಪಾದಕ ದಿ ಲ್ಯಾನ್ಸೆಟ್’ ಇದು ಸುರಕ್ಷಿತ, ಪರಿಣಾಮಕಾರಿ ಮತ್ತು ರೋಗನಿರೋಧಕವಾಗಿದೆ ಎಂದು ಹೇಳಿದ್ದಾರೆ. ದಿ ಲ್ಯಾನ್ಸೆಟ್ ಎಂಬ ವಿಜ್ಞಾನ ಜರ್ನಲ್‌ನ ಸಂಪಾದಕ ರಿಚರ್ಡ್ ಹಾರ್ಟನ್, ಹಂತ 1/2 ಆಕ್ಸ್‌ಫರ್ಡ್ ಕೋವಿಡ್-19 ಲಸಿಕೆ ಪ್ರಯೋಗದ ಫಲಿತಾಂಶ ಈಗ ಪ್ರಕಟಿಸಲಾಗಿದೆ. ಲಸಿಕೆ ಸುರಕ್ಷಿತವಾಗಿದೆ, ಚೆನ್ನಾಗಿ ಸಹಿಸಿಕೊಳ್ಳಬಲ್ಲದು ಮತ್ತು ಇಮ್ಯುನೊಜೆನಿಕ್ ಆಗಿದೆ. ಪೆಡ್ರೊ ಫೋಲೆಗಟ್ಟಿ ಮತ್ತು ಸಹೋದ್ಯೋಗಿಗಳಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

ಲ್ಯಾನ್ಸೆಟ್ ಜರ್ನಲ್ ನಲ್ಲಿ ಸೋಮವಾರ ಪ್ರಕಟವಾದ ಸಂಶೋಧನೆಯಲ್ಲಿ, ವಿಜ್ಞಾನಿಗಳು ತಮ್ಮ ಪ್ರಾಯೋಗಿಕ ಕೋವಿಡ್-19 ಲಸಿಕೆ 18 ರಿಂದ 55 ವರ್ಷ ವಯಸ್ಸಿನವರಲ್ಲಿ ಉಭಯ ರೋಗನಿರೋಧಕ ಪ್ರತಿಕ್ರಿಯೆಯನ್ನು ಉಂಟುಮಾಡಿದೆ ಎಂದು ಕಂಡುಹಿಡಿದಿದ್ದು, ಇದು ರೋಗನಿರೋಧಕ ಚುಚ್ಚುಮದ್ದಿನ ನಂತರ ಕನಿಷ್ಠ ಎರಡು ತಿಂಗಳವರೆಗೆ ಇರುತ್ತದೆ ಎಂದು ತಿಳಿಸಿದೆ.
ಔಪಚಾರಿಕವಾಗಿ ChAdOxI ಎಂದು ಕರೆಯಲ್ಪಡುವ ಆಕ್ಸ್‌ಫರ್ಡ್ ಲಸಿಕೆಯನ್ನು ಈಗ AZD1222 ಎಂದು ಕರೆಯಲಾಗುತ್ತದೆ ಮತ್ತು ಇದನ್ನು ಬ್ರಿಟಿಷ್-ಸ್ವೀಡಿಷ್ ಫಾರ್ಮಾ ಕಂಪನಿ ಅಸ್ಟ್ರಾಜೆನೆಕಾ ಮತ್ತು ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಭಿವೃದ್ಧಿಪಡಿಸುತ್ತಿದ್ದಾರೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ 90 ಮಿಲಿಯನ್ ಡೋಸ್ ಲಸಿಕೆಯನ್ನು ಅಭಿವೃದ್ಧಿಪಡಿಸಲು ಯುಕೆ ಸರ್ಕಾರ ಈಗಾಗಲೇ ಆದೇಶಿಸಿದೆ. ಇತ್ತೀಚಿನ ಫಲಿತಾಂಶಗಳು ಹೆಚ್ಚು ಪ್ರೋತ್ಸಾಹದಾಯಕವಾಗಿದ್ದರೂ, ಹಂತದ ಪ್ರಯೋಗಗಳು ಇನ್ನೂ ನಡೆಯುತ್ತಿರುವುದರಿಂದ ಕೊರೊನಾವೈರಸ್ ಗೆ ಈಗಲೇ ಚಿಕಿತ್ಸೆ ಇದೆ ಎಂದು ಹೇಳಲು ಸಾಧ್ಯವಿಲ್ಲ.
ವಿಶ್ವಾದ್ಯಂತ ಸುಮಾರು ಎರಡು ಡಜನ್ ಸಂಭಾವ್ಯ ಲಸಿಕೆಗಳು ಮಾನವನ ಪರೀಕ್ಷೆಯ ವಿವಿಧ ಹಂತಗಳಲ್ಲಿವೆ. ಪರಿಣಾಮಕಾರಿತ್ವವನ್ನು ಸಾಬೀತುಪಡಿಸಲು ಅಗತ್ಯವಾದ ಕೊನೆಯ ಹಂತದ ಪರೀಕ್ಷೆಯನ್ನು ಬೆರಳೆಣಿಕೆಯಷ್ಟು ಪ್ರವೇಶಿಸಿದೆ







