ಮುತ್ತಿನ ಹಾರ…
ನಾನು ರಾಧ, ಕಣ್ಣು ಬಿಟ್ಟಾಗ ಅಪ್ಪ ಅಮ್ಮನನ್ನು ನೋಡಿರಬಹುದು. ಆದರೆ ಅಪ್ಪ ಅಮ್ಮ ಹೊಲಕ್ಕೆ ಹೋಗುವಾಗ ಕರೆದುಕೊಂಡು ಹೋದಾಗ ಆಡಿದ್ದು ಮಾದವನೊಟ್ಟಿಗೆ. ಮಾದವ ಬಡ ರೈತನ ಮಗನಾಗಿದ್ದ. ಬಡವನಾದ್ದರಿಂದ ಅವನನ್ನು ಎಲ್ಲರೂ ಮಾದ ನೆಂದೇ ಕರೆಯುತ್ತಿದ್ದರು. ನನಗಿಂತ ಆರೇಳು ವರ್ಷ ದೊಡ್ಡವನಾದ ಮಾದ, ಹೊಲದಲ್ಲಿ ನನ್ನನ್ನು ಎತ್ತಿ ಆಡಿಸುತಿದ್ದ. ಮತ್ತು ನಾವಿಬ್ಬರೂ ಆಡುತ್ತಿದ್ದೆವು. ಅವನು ಮಾತ್ರ ಯಾವಾಗಲು ಸೋಲುತಿದ್ದ. ನನ್ನ ಖುಷಿಗಾಗಿ ಸೋಲುತಿದ್ದನೋ ಏನೋ.. ದೊಡ್ಡವರಾಗುವ ಮೊದಲೇ ಮನೆಯವರು ನನ್ನ ಮದುವೆ ಮಾಡುವ ಬಗ್ಗೆ ಮಾತನಾಡುತಿದ್ದರು. ಅವನೊಟ್ಟಿಗೆ ಶಾಲೆಗೆ, ಜಾತ್ರೆಗೆ ಹೋಗುತಿದ್ದೆ. ಯಾವುದೇ ಜನ ಜಂಗುಳಿಯಲ್ಲೂ ನನ್ನ ಕೈ ಬಿಟ್ಟವನಲ್ಲ. ಅದೆಷ್ಟೋ ತಿಂಡಿ ತಿನಿಸು ಕೊಡಿಸಿರಬಹುದು, ಆಕಾಶಕ್ಕೆ ಹಾರುವ ತೊಟ್ಟಿಲಲ್ಲಿ ಕುಳಿತಿರಬಹುದು. ಆದರೆ 17 ವರ್ಷ ಆಗುವಾಗ ಜಾತ್ರೆಯಲ್ಲಿ ಕೊಡಿಸಿದ ಬಿಳಿ ಮಣಿಯ ಹಾರ, ಅದೆಷ್ಟು ಚಂದವಾಗಿ ಕಾಣುತಿತ್ತು ಅಂದರೆ , ಯಾವುದೇ ಮುತ್ತಿನ ಹಾರಕ್ಕಿಂತ ಕಡಿಮೆ ಇರಲಿಲ್ಲ. ಅದನ್ನು ಅವನೇ ತೊಡಿಸಿದ. ಅದು ನನ್ನ ಕೊರಳಲ್ಲಿ ಯಾವಾಗಲು ಇರುತಿತ್ತು.
ಗಂಟಲು ನೋವಿನ ತ್ವರಿತ ಉಪಶಮನಕ್ಕೆ ಇಲ್ಲಿದೆ ಮನೆಮದ್ದು
ಆಗಲೇ ಅಮ್ಮನಿಗೆ ಹೊಟ್ಟೆನೋವು ಶುರುವಾಗಿತ್ತು. ಯಾವುದೇ ಮದ್ದಿಗೆ ಗುಣವಾಗದೆ ಇದ್ದಾಗ ,ದೊಡ್ಡ ಆಸ್ಪತ್ರೆಯಲ್ಲಿ ತೋರಿಸಿದಾಗ, ಅವರೆಂದರು , ಕರುಳಲ್ಲಿ ಗೆಡ್ಡೆಯಾಗಿದೆ. ಶಸ್ರಚಿಕಿತ್ಸೆ ಮಾಡಿಸಬೇಕು. ಎರಡು ಲಕ್ಷ ಕಟ್ಟಿ ಎಂದರು. ಮೊದಲೇ ಬ್ಯಾಂಕ್, ಜಮೀನ್ದಾರರ ಬಳಿ ಸಾಲ ಇತ್ತು. ಇನ್ನು ಎಲ್ಲಿಯೂ ಸಾಲ ಸಿಗುವ ಸಾಧ್ಯತೆ ಇರಲಿಲ್ಲಾ. ತಾಯಿಯ ನೋವನ್ನು ನೋಡುವ ಹಾಗಿರಲಿಲ್ಲಾ. ಊರಲ್ಲಿ ಯಾರಿಗೆ ಕಷ್ಟ ಬರುತ್ತದೋ, ಯಾರಿಗೆ ಹಣದ ಅವಶ್ಯಕತೆ ಇದೆಯೋ ಅಲ್ಲಿಗೆ ಕಮಲವ್ವ ಬರುತ್ತಿದ್ದಳು. ಅವಳು ಮದುವೆಯ ದಲ್ಲಾಳಿ, ದೂರದ ಊರಿನ ಮಾರವಾಡಿ, ಗುಜರಾತಿ ಗಂಡಿಗೆ ಹೆಣ್ಣು ಹುಡುಕಿ ಮದುವೆ ಮಾಡಿಸುತ್ತಿದ್ದಳು. ಗುಜರಾತಿನಲ್ಲಿ ಹೆಣ್ಣಿನ ಸಂಖ್ಯೆ ಕಡಿಮೆ, ಅಲ್ಲಿಯ ಹುಡುಗರಿಗೆ ಹುಡುಗಿ ಸಿಗದ ಕಾರಣ, ಕರ್ನಾಟಕ ,ಅಂಧ್ರ ,ತಮಿಳುನಾಡಿನ ಬಡವರ ಹುಡುಗಿಯ ಮನೆಯವರಿಗೆ ಹಣ ಕೊಟ್ಟು, ಮದುವೆ ಆಗಿ ಕರೆದುಕೊಂಡು ಹೋಗುತಿದ್ದರು. ಮದುವೆಯಾಗಿ ಹೋದ ಹುಡುಗಿ ಮತ್ತೆ ವಾಪಸ್ಸು ಬರುತ್ತಿರಲಿಲ್ಲ. ರಾಧಾಳ ಮನೆಗೂ ಹಾಜರಾದಳು. ಮೂರು ಲಕ್ಷ ಕೊಡುತ್ತೇನೆ,ಮತ್ತು ರಾಧಾಳನ್ನು ಮಾರ್ವಾಡಿಯೊಟ್ಟಿಗೆ ಮದುವೆ ಮಾಡಿಸುತ್ತೇನೆ ಎಂದಳು. ಆದರೆ ರಾಧಾಳ ಮನಸ್ಸನ್ನು ಅರಿತ, ತಂದೆ ಒಪ್ಪಲಿಲ್ಲ. ರಾಧಾಳಿಗೆ ಉಭಯ ಸಂಕಟ, ತಾಯಿಯನ್ನು ಬಿಡುವುದಾ, ಮಾಧವನ ತ್ಯಜಿಸುವುದಾ . ಕಡೆಗೂ ಮಾಧವನ ತ್ಯಜಿಸಲು ನಿರ್ಧಾರ ಮಾಡಿದ ರಾಧೇ, ತಂದೆಗೆ ನಿರ್ಧಾರ ತಿಳಿಸಿದಳು. ತಂದೆಗೆ ಸರಿ ಎಂದು ತೋರದೆ ಇದ್ದರೂ, ಬೇರೆ ದಾರಿ ಇರಲಿಲ್ಲಾ . ಕಮಲವ್ವ ಕೊಟ್ಟ ಹಣದಿಂದ ಅಮ್ಮ ಹುಷಾರಾಗಿ ಬಂದಳು. ರಾಜಸ್ಥಾನದಿಂದ ಬಂದ ಹುಡುಗನೊಟ್ಟಿಗೆ ಮದುವೆ ಕೂಡ ನಡೆಯಿತು. ಮಾದವ ಮಾತ್ರ ಮದುವೆಗೂ ಬರಲಿಲ್ಲಾ , ಕಾಣಲೂ ಸಿಗಲಿಲ್ಲಾ. ಮಾದವ ಇಲ್ಲೂ ಸೋತಿದ್ದ. ಗಂಡನ ಮನೆಗೆ ಹೋಗುವಾಗ ಆದರೂ ಸಿಗಲು ಬರಬಹುದೆಂದು ಎನಿಸಿದಳು. ಆದರೆ ಆತ ಬರಲೇ ಇಲ್ಲಾ. ತಾಯಿ ಮನೆ ಬಿಟ್ಟು ಹೊರಡುವಾಗ, ಅವನನ್ನು ನೆನೆದು ಗೊಳೋ ಎಂದು ಅತ್ತು ಬಿಟ್ಟಳು. ಮನದಲ್ಲಿ ಮಾದವನನ್ನು ನೆನೆಸುತ್ತಾ, ಕುತ್ತಿಗೆಯಲ್ಲಿದ್ದ ಅವನು ತೊಡಿಸಿದ ಮಣಿಯ ಮುತ್ತಿನ ಹಾರ ಹಿಡಿಧು ಗಂಡನ ಮನೆಗೆ ಹೊರಟಳು.
ಗಂಡನಿಗಾಗಲೇ 45 ಮೀರಿತ್ತು. ಮನೆಯೇನೋ ದೊಡ್ಡದಾಗಿಯೇ ಇತ್ತು . ನಾಲ್ಕು ಮೈದುನರು,ಮತ್ತೆರಡು ಮಾವನ ತಂಗಿಯ ಮಕ್ಕಳು, ಮಾವ ಸೇರಿ 8 ಮಂದಿಯ ಕುಟುಂಬ . ಅತ್ತೆ ಮೊದಲೇ ತೀರಿಹೋಗಿದ್ದರಂತೆ. ಮನೆಯಲ್ಲಿ ಎಲ್ಲ ಕೆಲಸ ಮೈದುನರು ಮಾಡುತಿದ್ದರು. ನನಗೇನು ಕೆಲಸ ಕೊಡುತ್ತಿರಲಿಲ್ಲ. ಆದರೆ ಊಟ , ತಿನಿಸು ಎಲ್ಲಾ ಕಡಿಮೆ, ಉಳಿತಾಯ ಜಾಸ್ತಿ ಮಾಡುತಿದ್ದರು. ಮೊದಲ ಬಸುರಿಯಾದಾಗ ಹೆಣ್ಣು ಎಂದು ತೆಗೆಯಲು ಹೇಳುತ್ತಿದ್ದರು. ಆದರೆ ನಾನು ಹೆಣ್ಣು ಹುಟ್ಟದೇ ನಿಮ್ಮ ಮನೆಯಲ್ಲಿ 6 ಗಂಡು ಮಕ್ಕಳು ಮದುವೆಯಾಗದೆ ಇರುವುದೆಂದು ಹೇಳಿ ಅವರನ್ನು ತಡೆದೆ. ಎರಡನೆಯದ್ದು ಕೂಡಾ ಹೆಣ್ಣಾಗಿತ್ತು. ಸುಖಿ ಜೀವನ ಜೀವಿಸುತಿದ್ದೆ. ಆಗಾಗ ಮಾದವನ ನೆನಪಾಗುತಿತ್ತು. ಅಳು ಬರುತಿತ್ತು. ನಾನೇನು ಮಾಡಲಿ ದೇವರ ಲೀಲೆ.
ಒಣಕೆಮ್ಮು ಅಥವಾ ಡ್ರೈ ಕೆಮ್ಮುಗೆ ಇಲ್ಲಿದೆ ಮನೆಮದ್ದು
ಅದೇಕೋ ಕೆಲವೊಂದು ದಿನಗಳಿಂದ ರಾತ್ರಿ ಕನಸಿನಲ್ಲಿ ಕೆಟ್ಟ ಕೆಟ್ಟ ಕನಸುಗಳು ಬರುತಿತ್ತು. ಮಗು ಹುಟ್ಟುವಾಗ ಊರಿನ ದೇವಿಗೂ ಹರಕೆ ಹೊತ್ತಿದ್ದೆ, ಊರಿನ ನೆನಪೂ ಜಾಸ್ತಿ ಆಗುತಿತ್ತು. ಒಪ್ಪಂದದ ಪ್ರಕಾರ ತಾಯಿ ಮನೆಗೆ ಮತ್ತೊಮ್ಮೆ ಹೋಗಲು ಅವಕಾಶ ಇರಲಿಲ್ಲಾ. ಹಾಲು ಕುಡಿಯುತ್ತಿರುವ ಮಗು ಮುತ್ತಿನ ಹಾರವನ್ನು ಎಳೆಯಿತು. ನೂಲಿನ ಹಾರ ತುಂಡಾಗಿ ನೆಲದಲ್ಲೆಲ್ಲ ಹರಡಿತು. ಗೆಳೆಯನ ಒಂದೇ ಗುರುತು ಅದೂ ತುಂಡಾಯಿತು. ಅಳು ತಡೆಯದಾಯಿತು. ಜೋರಾಗಿ ಅತ್ತೆ. ಮೈದುನರು ನಕ್ಕು , ತುಂಡಾದರೆ ಹೋಗಲಿ ಅಣ್ಣ ನಿಮಗೆ ನಿಜವಾದ ಮುತ್ತಿನ ಹಾರ ಮಾಡಿ ತೊಡಿಸುತ್ತಾರೆ ಎಂದರು . ನಾನು ಮಾತ್ರಾ ಎಲ್ಲ ಮಣಿ ಒಟ್ಟು ಮಾಡಿ, ಮಗದೊಮ್ಮೆ ಹಾರ ಮಾಡಿಕೊಂಡೆ. ಗಂಡ ಬರುವಾಗ ನಿಜವಾದ ಮುತ್ತಿನ ಹಾರ ತಂದಿದ್ದರು. ಆದರೆ ಅವರಿಗೇನು ಗೊತ್ತು ತುಂಡಾದ ಮುತ್ತಿನ ಹಾರದ ಬೆಲೆ. ನಾನವರಿಗೆ ನನಗೆ ಅಮ್ಮನನ್ನು ನೋಡಬೇಕು, ಒಮ್ಮೆಯಾದರೂ ಹೋಗಿ ಬರುವ ಎಂದೆ . ಅವರು ಒಪ್ಪಿ ಊರಿಗೆ ಹೊರಟೆವು .
ಪೇಟಿಎಂ ನ ಎಟಿಎಂ ಗೆ ಅರ್ಜಿ ಸಲ್ಲಿಸಬೇಕೆ – ಇಲ್ಲಿದೆ ಮಾಹಿತಿ
ಅಮ್ಮನಿಗೆ ಆಶ್ಚರ್ಯವಾಯಿತು, ಅಳು ಕೂಡ ಒಮ್ಮೆಲೇ ಬಂತು. ನಿನ್ನ ಮಾದ ಆತ್ಮಹತ್ಯೆ ಮಾಡಿಕೊಂಡ. ನಿನ್ನ ಮದುವೆ ಆದಾಗಿನಿಂದ ಕುಡಿಯಲು ಪ್ರಾರಂಭಿಸಿದ, ನಿನ್ನದೇ ನೆನಪಲ್ಲಿ ಹತ್ತು ದಿನಗಳ ಹಿಂದೆ ಹೊಳೆಗೆ ಹಾರಿ ಬಿಟ್ಟ. ಹೊಲದ ಬಳಿಯಲ್ಲಿ ಸಮಾಧಿಯಾಗಿ ಬಿಟ್ಟ ಎಂದಳು.ಒಮ್ಮೆಲೇ ಎಲ್ಲಾ ಹೇಳಿಬಿಟ್ಟಳು. ದೇವರು ನನಗೇಕೆ ಈ ಶಿಕ್ಷೆ ಕೊಟ್ಟ. ತಾಯಿಯನ್ನು ಉಳಿಸಲು ಮಾದವನ ಬಿಟ್ಟೆ . ಆದರೆ ಮಾದವನ ದೇವರು ಕೊಂಡು ಹೋದ. ಮೆಲ್ಲಗೆ ಒಳಗೊಳಗೇ ಅತ್ತೆ. ಸಂಧ್ಯಾಕಾಲ ಗಂಡನಿಗೆ ಗೊತ್ತಾಗದಂತೆ,ಮಾದನ ಸಮಾಧಿ ಬಳಿ ಹೋಗಿ ಜೋರಾಗಿ ಅತ್ತೆ. ತಪ್ಪನ್ನು ಕ್ಷಮಿಸು ಎಂದು ಅಡ್ಡ ಬಿದ್ದೆ. ಸಮಾದಿಯ ಮೇಲೆ ಇಟ್ಟಿದ್ದ ಗಿಡಕ್ಕೆ ಮುತ್ತಿನ ಹಾರ ಸಿಕ್ಕಿ ತುಂಡಾಗಿ ಮುತ್ತು ಎಲ್ಲೆಲ್ಲೂ ಹರಡಿದವು. ಅವನು ತೊಡಿಸಿದ ಹಾರ ಅವನೇ ಎಳೆದಾ. ಒಂದು ಮಣಿ ಕೈಯಲ್ಲಿ ಹಿಡಿದು ,ಹಿಂದೆ ನೋಡದೇ ಮನೆಯ ಕಡೆಗೆ ಓಡಿದೆ…. ಮಾದವ ಇಲ್ಲೂ ಸೋತಿದ್ದಾ ….
ರಾಜು ಶೆಟ್ಟಿ
ಮುಂಬೈ








