ಮಂಡ್ಯದ ಜನತೆ ಎಂದೂ ನನ್ನ ಕೈಬಿಟ್ಟಿಲ್ಲ : ನೆನಪಿರಲಿ ಪ್ರೇಮ್ Mandya saaksha tv
ಮಂಡ್ಯ : ಮಂಡ್ಯದ ಜನತೆ ಎಂದೂ ನನ್ನ ಕೈಬಿಟ್ಟಿಲ್ಲ. ಪ್ರೇಮಂ ಪೂಜ್ಯ ಚಿತ್ರದಲ್ಲಿ ಮಂಡ್ಯದ ಸೊಗಡು ತುಂಬಿದ್ದು, ಇಲ್ಲಿಂದಲೇ ನನ್ನ ಕ್ಯಾರೆಕ್ಟರ್ ಪ್ರಾರಂಭವಾಗುತ್ತದೆ ಎಂದು ನಟ ನೆನಪಿರಲಿ ಪ್ರೇಮ್ ತಿಳಿಸಿದ್ದಾರೆ.
ಪ್ರೇಮಂ ಪೂಜ್ಯಂ ಚಲನಚಿತ್ರದ ಪ್ರಚಾರದ ಹಿನ್ನೆಲೆಯಲ್ಲಿ ಚಿತ್ರದ ನಾಯಕ ನಟ ನೆನಪಿರಲಿ ಪ್ರೇಮ್ ಅವರು ತಾಲೂಕಿನ ದೊಡ್ಡಬ್ಯಾಡರಹಳ್ಳಿಯಿಂದ ಪಟ್ಟಣದ ಕೋಕಿಲ ಚಿತ್ರಮಂದಿರದವರೆಗೆ ಬೈಕ್ ರ‍್ಯಾಲಿ ನಡೆಸಿದರು.
ಬಳಿಕ ಪಾಂಡವಪುರ ತಾಲೂಕಿನ ದೊಡ್ಡಬ್ಯಾಡರಹಳ್ಳಿ, ಚಿಕ್ಕಬ್ಯಾಡರಹಳ್ಳಿ, ಪಟ್ಟಸೋಮನಹಳ್ಳಿ, ಚಿಕ್ಕಾಡೆ, ದೇವೇಗೌಡನಕೊಪ್ಪಲು ಮಾರ್ಗವಾಗಿ ಕೋಕಿಲ ಚಿತ್ರಮಂದಿರ ತಲುಪಿದ ಪ್ರೇಮ್ ಅವರಿಗೆ ಅಭಿಮಾನಿಗಳು ಅದ್ದೂರಿಯಾಗಿ ಅಭಿನಂದಿಸಿದರು.
ಈ ವೇಳೆ ಅವರು ಮಾತನಾಡಿ, ಮಂಡ್ಯದ ಜನತೆ ಎಂದೂ ನನ್ನ ಕೈಬಿಟ್ಟಿಲ್ಲ. ಪ್ರೇಮಂ ಪೂಜ್ಯ ಚಿತ್ರದಲ್ಲಿ ಮಂಡ್ಯದ ಸೊಗಡು ತುಂಬಿದ್ದು, ಇಲ್ಲಿಂದಲೇ ನನ್ನ ಕ್ಯಾರೆಕ್ಟರ್ ಪ್ರಾರಂಭವಾಗುತ್ತದೆ. ಹೀಗಾಗಿ ಜಿಲ್ಲೆಯಿಂದಲೇ ಪ್ರಚಾರ ಮಾಡುತ್ತಿದ್ದೇವೆ ಎಂದರು.
ಈ ಚಿತ್ರದ ಕತೆಯನ್ನು ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಹೇಳಿದಾಗ ಅವರು ಚಿತ್ರ ಹಿಟ್ ಆಗಿ ಆವಾರ್ಡ್ ದೊರಕಲಿದೆ ಭಯಪಡಬೇಡ ಎಂದು ಭರವಸೆಯ ಮಾತುಗಳನ್ನಾಡಿದ್ದರು. ಈಗ ಚಿತ್ರ ಬಿಡುಗಡೆಯಾಗಿ ೫೦ದಿನಗಳನ್ನು ಪೂರೈಸುತ್ತಿದೆ. ನೀವೆಲ್ಲರು ಚಿತ್ರಮಂದಿರದಲ್ಲೇ ಚಿತ್ರ ನೋಡಿ ಶತ ದಿನ ಪೂರೈಸಲು ಅಶೀರ್ವದಿಸಬೇಕು. ತಮಿಳು, ತೆಲಗು, ಹಿಂದಿ ಚಿತ್ರಗಳಿಗೆ ಪ್ರೋತ್ಸಾಹ ನೀಡುತ್ತೀರಿ ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸುವ ಮೂಲಕ ಕನ್ನಡದ ನಟರನ್ನು ಬೆಳೆಸಬೇಕು. ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ಜಿಲ್ಲೆಯವರೇ ಆಗಿದ್ದಾರೆ. ಎರಡು ವರ್ಷಗಳ ಕಾಲ ಸುದೀರ್ಘವಾಗಿ ಚಿತ್ರೀಕರಣ ಮಾಡಿದ್ದೇವೆ ಚಿತ್ರಕ್ಕೆ ೨೦ಕೋಟಿ ಖರ್ಚು ಮಾಡಿದ್ದೇವೆ ಎಂದರು.









