ಮೈಸೂರಿನ ಜನತೆಗೆ ಯೋಗ ದಿನದ ಶುಭಾಶಯ ತಿಳಿಸಿದ ಪ್ರಧಾನಿ …
ಇಂದು ‘ಅಂತರಾಷ್ಟ್ರೀಯ ಯೋಗ ದಿನ… ಯೋಗ ದಿನದ ಪ್ರಯುಕ್ತ ಮೈಸೂರಿನಲ್ಲಿರುವ ಪ್ರಧಾನಿ ನರೇಂದ್ರ ಮೋದಿ 8 ನೇ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ನಾಡಿನ ಜನೆತೆಗೆ ಶುಭಾಶಯಗಳನ್ನ ತಿಳಿಸಿದ್ದಾರೆ.
ಮೈಸೂರಿನ ಅರಮನೆ ಆವರಣದ ಮುಂಬಾಗ ಯೋಗ ದಿನದ ಪ್ರಯುಕ್ತ ಮಾತನಾಡಿದ ಪ್ರಧಾನಿ “ದೇಶ ಮತ್ತು ವಿಶ್ವದ ಎಲ್ಲ ಸಹೃದಯರಿಗೂ 8ನೇ ವಿಶ್ವ ಯೋಗ ದಿನಾಚರಣೆ ಶುಭಾಶಯಗಳು. ಯೋಗದಿನದ ಪ್ರಯುಕ್ತ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ, ಅಧ್ಯಾತ್ಮ ಮತ್ತು ಯೋಗ ಸಾಧಕರ ನೆಲೆಬೀಡು ಮೈಸೂರಿಗೆ ಪ್ರಣಾಮ ಮಾಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಮಾತು ಮುಂದುವರೆಸಿದರು.
https://twitter.com/i/status/1539091043987394562
ಕರ್ನಾಟಕ ಸಾಂಸ್ಕೃತಿಕ ರಾಜಧಾನಿ ಮೈಸೂರು, ಯೋಗ ಭೂಮಿ.. ಇಲ್ಲಿ ಕಂಡ ಯೋಗದ ಬೆಳಕು ಇವತ್ತು ವಿಶ್ವದ ಎಲ್ಲೆಡೆ ಪಸರಿಸಿದೆ. ಇಂದು ಯೋಗ ವಿಶ್ವಕ್ಕೆ ಆರೋಗ್ಯದ ಮಹತ್ವವನ್ನು ತಿಳಿಸುತ್ತಿದೆ. ಮೈಸೂರು ಭಾರತದ ಆಧ್ಯಾತ್ಮಿಕ ಕೇಂದ್ರವಾಗಿದೆ. ಈ ಮೊದಲು ಯೋಗವನ್ನು ಕೇವಲ ಮನೆಗಳಲ್ಲಿ ಮಾತ್ರ ಮಾಡಲಾಗುತ್ತಿತ್ತು. ಯೋಗ ವ್ಯಕ್ತಿಗೆ ಮಾತ್ರವಲ್ಲ, ವಿಶ್ವ ಮಾನವೀಯತೆ ಬೇಕಿದೆ. ಕೊರೋನಾ ಸಾಂಕ್ರಾಮಿಕ ರೋಗ ಸಮಯದಲ್ಲೂ ಕೂಡ ಯೋಗ ದಿನದ ಉತ್ಸಾಹ ಕಡಿಮೆ ಆಗಿರಲಿಲ್ಲ. ಇಂದು ಯೋಗ ದಿನಾಚರಣೆ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ನಮ್ಮೆಲರ ಜೀವನಕ್ಕೆ ಯೋಗ ವಿಶ್ವಾಸವನ್ನು ನೀಡುತ್ತಿದೆ ಎಂದು ಹೇಳಿದರು.








