ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆ ಮುಂದೂಡಿದ ಪಿ ಯು ಬೋರ್ಡ್
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಮಧ್ಯ ವಾರ್ಷಿಕ ಪರೀಕ್ಷೆಯನ್ನ ಪಿ ಯು ಬೋರ್ಡ್ ಮುಂದಕ್ಕೆ ಹಾಕಿ ಆದೇಶಿಸಿದೆ. ಡಿಸೆಂಬರ್ 13 ರಿಂದ ಡಿಸೆಂಬರ್ 24 ರ ವರೆಗೆ ಎಕ್ಸಾಮ್ ನಡೆಸಲು ಆದೇಶಿಸಿದೆ. ಹಿಂದ ನವೆಂಬರ್ 24 ರಿಂದ ಡಿಸೆಂಬರ್ 10 ವರೆಗೆ ಪಬ್ಲಿಕ್ ಎಕ್ಸಾಮ್ ನಡೆಸಲು ಆದೇಶಿಸಲಾಗಿತ್ತು.
ಕರೋನ ಮೂರನೆ ಆಲೆಯ ಮುನ್ಸೂಚನೆಯ ಕಾರಣದಿಂದಾಗಿ ಮಧ್ಯವಾರ್ಷಿಕ ಪರೀಕ್ಷೆಯನ್ನ ಪಬ್ಲಿಕ್ ಎಕ್ಸಾಮ್ ರೀತಿ ನಡೆಸಲು ಪಿ ಯು ಬೋರ್ಡ್ ನಿರ್ಧರಿಸಿತ್ತು.. ದೀಢಿರ್ ಎಂದು ಘೋಷಿದ ನಿರ್ಧಾರದಿಂದ ವಿಧ್ಯಾರ್ಥಿಗಳು ಉಪನ್ಯಾಸಕರು ಇಬ್ಬರು ಕಂಗಾಲಾಗಿದ್ದರು.. ಪಠ್ಯವನ್ನ ಮೂರ್ತಿಗೊಳಿಸಲು ಕಾಲಾವಕಾಶ ಕೇಳಿದ್ದರು.
ಉಪನ್ಯಾಸಕರು ಮತ್ತು ಪಾಂಶುಪಾಲರ ಒತ್ತಾಯದ ಮೇರೆಗೆ ಪರೀಕ್ಷೆಯ ದಿನಾಂಕವನ್ನ ಚರ್ಚಿಸಿ ಹೊಸ ದಿನಾಂಕವನ್ನ ಘೋಷಿಸಿದೆ. ಜಿಲ್ಲಾದ ಕೇಂದ್ರಗಳ ಬದಲು ಆಯಾ ಕಾಲೇಜುಗಳಲ್ಲೆ ಪರೀಕ್ಷೆ ಮತ್ತು ಮೌಲ್ಯಮಾಪನಕ್ಕೆ ಬೋರ್ಡ್ ಅನುವು ಮಾಡಿಕೊಟ್ಟಿದ್ದಾರೆ.