“ಬ್ರಹ್ಮ” ಪದದ ಉಚ್ಚಾರ ಜಿಜ್ಞಾಸೆಯನ್ನು ಸ್ವತಃ ಬ್ರಹ್ಮನಿಂದಲೂ ಬಗೆಹರಿಸಲಾಗದು..!
“ಬರೆದಂತೆಯೇ ಉಚ್ಚರಿಸುವುದು, ಉಚ್ಚರಿಸಿದಂತೆಯೇ ಬರೆಯುವುದು ಸಂಸ್ಕೃತ ಮತ್ತು ಕನ್ನಡ ಭಾಷೆ್ಗಳ ಜಾಯಮಾನ”. ಹೌದು ತಾನೆ? ಅಂದಮೇಲೆ “ಬ್ರಹ್ಮ”ವನ್ನು “ಬ್ರ ಹ್ ಮ” ಎಂದು, “ಜಾಹ್ನವಿ”ಯನ್ನು “ಜಾ ಹ್ ನ ವಿ” ಎಂದು, “ಮಧ್ಯಾಹ್ನ”ವನ್ನು “ಮ ಧ್ಯಾ ಹ್ ನ” ಎಂದು ಉಚ್ಚರಿಸಿದರೆ ತಪ್ಪಂತೂ ಅಲ್ಲವೇ ಅಲ್ಲ. ನಿಜವಾಗಿಯಾದರೆ ಅದೇ ಸೂಕ್ತ.
ಆದರೆ, ಈ ರೀತಿ ಹ್ ಜೊತೆ ಇನ್ನೊಂದು ವ್ಯಂಜನ ಸೇರಿ ಸಂಯುಕ್ತಾಕ್ಷರವಾದಾಗ ಮೊದಲಿಗೆ ಆ ’ಇನ್ನೊಂದು ವ್ಯಂಜನ’ವನ್ನು ಉಚ್ಚರಿಸಿ ಆಮೇಲೆ ಹ್ ವನ್ನು ಉಚ್ಚರಿಸಬಹುದು ಎಂದು, ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಮಾಡಿಕೊಂಡಿರುವ ಒಂದು ಅನುಕೂಲ ಶಾಸ್ತ್ರ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ವಿಪರ್ಯಾಸವೇನೆಂದರೆ, ಈ ತಥಾಕಥಿತ ಅನುಕೂಲ ಶಾಸ್ತ್ರದಲ್ಲಿ ಏಕರೂಪತೆ ಇಲ್ಲ. ಒಬ್ಬೊಬ್ಬರದು ಒಂದೊಂದು ರೀತಿಯ ಪ್ರತಿಪಾದನೆ. ಕೆಲವರು “ಹಿ ನ ಮ ಪರೇ ತತ್ಪರಸ್ಯ ಚ” ಎಂಬ ಒಂದು ಸೂತ್ರವನ್ನು ಪ್ರಸ್ತಾವಿಸಿ, “ಹ್ ಜೊತೆ ಮ್/ನ್ ಇದ್ದರೆ ಮೊದಲಿಗೆ ಮ್/ನ್ ಉಚ್ಚರಿಸಿ ಆಮೇಲೆ ಹ್ ಉಚ್ಚರಿಸಬೇಕು” ಎನ್ನುತ್ತಾರೆ. “ಹ್ ಜೊತೆ ಣ್ ಬಂದರೆ- ಉದಾಹರಣೆಗೆ ಅಪರಾಹ್ಣ- ಏನು ಮಾಡಬೇಕು?” ಎಂಬುದಕ್ಕೆ ಅವರ ಬಳಿ ಉತ್ತರವಿಲ್ಲ! “ಹ್ ಜೊತೆ ಯ್/ರ್/ಲ್/ವ್ ಬಂದರೆ- ಉದಾಹರಣೆಗೆ ಬಾಹ್ಯ, ಹ್ರೀರ, ಪ್ರಹ್ಲಾದ, ಜಿಹ್ವಾ ಇತ್ಯಾದಿ- ಏನು ಮಾಡಬೇಕು?” ಎಂಬುದಕ್ಕೂ ಅವರ ಬಳಿ ಉತ್ತರವಿಲ್ಲ!
ಇನ್ನು ಕೆಲವರು “ಹ್ ಜೊತೆ ಯಾವುದೇ ಅನುನಾಸಿಕ ಇದ್ದರೆ ಮೊದಲಿಗೆ ಅನುನಾಸಿಕವನ್ನು ಉಚ್ಚರಿಸಿ ಆಮೇಲೆ ಹ್ ಉಚ್ಚರಿಸಬೇಕು” ಎನ್ನುತ್ತಾರೆ. ಅವರ ವ್ಯಾಖ್ಯೆಯಲ್ಲಿ ಬ್ರಹ್ಮ, ಜಾಹ್ನವಿ, ಅಪರಾಹ್ಣಗಳು ಒಳಗೊಳ್ಳುತ್ತವಾದರೂ ಬಾಹ್ಯ, ಹ್ರೀರ, ಪ್ರಹ್ಲಾದ, ಜಿಹ್ವಾ ಇತ್ಯಾದಿಗಳ ಉಚ್ಚಾರಕ್ಕೆ ಅವರ ಬಳಿಯೂ ನಿರ್ದಿಷ್ಟ ಉತ್ತರವಿಲ್ಲ.
ಆದ್ದರಿಂದಲೇ, “ಬರೆದಂತೆಯೇ ಉಚ್ಚರಿಸುವುದು” ಯಾವುದೇ ಗೊಂದಲವಿಲ್ಲದ ಆಯ್ಕೆ. ಬನ್ನಂಜೆ ಗೋವಿಂದಾಚಾರ್ಯರು, ಈಗ ಅವರ ಪುತ್ರಿ ವೀಣಾ ಬನ್ನಂಜೆ ಮುಂತಾದ ಕೆಲವು ವಿದ್ವಾಂಸರು ಇದನ್ನೇ ಆಯ್ದುಕೊಂಡಿದ್ದಾರೆ. ಅವರು “ಬ್ರಹ್ಮ” ಪದವನ್ನು “ಬ್ರ ಹ್ ಮ” ಎಂದೇ ಉಚ್ಚರಿಸುತ್ತಾರೆ, “ಬ್ರ ಮ್ ಹ” ಎಂದು ಅಲ್ಲ.
ಅಷ್ಟಾಗಿ, ‘ಬ್ರಹ್ಮ’ ಪದದ ವ್ಯುತ್ಪತ್ತಿ ಏನು? ಬೃಹ್ + ಮನಿನ್. ‘ಬೃಹ್’ ಆಂದರೆ something that is expanded, or great; ‘ಬೃಹತ್’ ಪದ ಸಹ ಅದೇ ಮೂಲದಿಂದ ಬಂದದ್ದು. ಬೃಹ್ + ಮನಿನ್ ರೀತಿಯಲ್ಲಿ ಬ್ರಹ್ಮ ಪದ ಉಂಟಾದದ್ದು ಅಂದಮೇಲೆ ಆ ದೃಷ್ಟಿಯಿಂದಲೂ ‘ಹ್’ ಉಚ್ಚಾರವೇ ಮೊದಲು. ಬ್ರಮ್ಹ ಎಂದು ಉಚ್ಚರಿಸಿದರೆ ಅಲ್ಲಿ ‘ಬೃಹ್’ ಧಾತುವನ್ನೇ ಕೊಂದಂತಾಗುತ್ತದಲ್ಲ!?
ವಹ್ನಿ ಪದ ಸಹ ಹೀಗೆಯೇ. ವಹ್ + ನಿ. ‘ವಹ್’ ಅಂದರೆ something that carries. ಅಗ್ನಿಯು ದೇವತೆಗಳ ಮತ್ತು ಮನುಷ್ಯರ ನಡುವಿನ ಕೊಡುಕೊಳ್ಳುವಿಕೆಯ ವಾಹಕ. ಆದ್ದರಿಂದ ವಹ್ನಿ ಎಂದು ಹೆಸರು. ಅದನ್ನು ವನ್ಹಿ ಎಂದು ಉಚ್ಚರಿಸಿದರೆ ಅಲ್ಲಿ ‘ವಹ್’ ಧಾತುವಿನಿಂದ ಪಡೆದ ಅರ್ಥವನ್ನೇ ಬೆಂಕಿಗೆ ಹಾಕಿ ನಾಶಮಾಡಿದಂತಾಗುತ್ತದೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಮಧ್ಯಾಹ್ನ, ಅಪರಾಹ್ಣಗಳದೂ ಇದೇ ಕಥೆ. ಮಧ್ಯ + ಅಹ್ + ನ. ‘ಅಹ್’ ಎಂದರೆ ಹಗಲು. ಹಗಲಿನ ಮಧ್ಯಭಾಗವೇ ಮಧ್ಯಾಹ್ನ. ಅದನ್ನು ಮಧ್ಯಾನ್ಹ, ಮಧ್ಯಾನ್ನ, ಮಧ್ಯಾನ, ಮದ್ಯಾನ ಅಂತೆಲ್ಲ ಉಚ್ಚರಿಸಿದರೆ/ಬರೆದರೆ ಹಗಲುದರೋಡೆ (“ಅಹ್ = ಹಗಲು” ಎಂಬ ಅರ್ಥವನ್ನು ದರೋಡೆ ಮಾಡಿದಂತೆ) ಆಗುತ್ತದೆ!
ಇದಾವುದೇ ಗೊಂದಲ ಪಾಪಪ್ರಜ್ಞೆಯೂ ಬೇಡವೆಂದು ಗೀತಾಪರಿವಾರವು “ಬರೆದಂತೆಯೇ ಉಚ್ಚರಿಸುವುದು” ರೀತಿಯನ್ನು ಆಯ್ದುಕೊಂಡಿದೆ. ಗೀತಾಪರಿವಾರದಲ್ಲಿ ನಾವು “ಬ್ರ ಹ್ ಮ”, “ಜಾ ಹ್ ನ ವಿ”, “ಮ ಧ್ಯಾ ಹ್ ನ” ಎಂಬಂತೆ ಉಚ್ಚರಿಸುತ್ತೇವೆ.
ಒಟ್ಟಾರೆಯಾಗಿ ಈ ಉಚ್ಚಾರವಿಷಯವನ್ನು ಸರಿ-ತಪ್ಪು ಎಂದು ನಿಷ್ಕರ್ಷೆ ಮಾಡುವುದಕ್ಕಿಂತ “ಎರಡು ವಿಭಿನ್ನ ಚಿಂತನಾ ಶಾಲೆಗಳು” (two different schools of thought) ಎಂದು ಪರಿಗಣಿಸಬಹುದು ಅಷ್ಟೇ.