ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ರೈಲ್ವೆ ಇಲಾಖೆ Saakaha Tv
ಬೆಂಗಳೂರು: ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದು ನೀಡಿದೆ. ಅದು ಸ್ಮಾರ್ಟ್ ಪೋನ್ ಬಳಸಿ, ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದ್ರೇ ಸಾಕು, ರೈಲ್ವೆ ಟಿಕೆಟ್ ಪಡೆಯುವಂತೆ ವಿನೂತನ ಕ್ರಮವನ್ನು ಜಾರಿಗೆ ತರಲಾಗಿದೆ.
ರೈಲ್ವೆ ಇಲಾಖೆಯು ಸೇವೆ ಮತ್ತು ಸೌಲಭ್ಯಗಳನ್ನು ಸರಳವಾಗಿ ತಲುಪಿಸೋ ನಿಟ್ಟಿನಲ್ಲಿ, ಇದೀಗ ಎಟಿಎಂ ಮಾದರಿ ಯಂತ್ರಗಳಲ್ಲಿ ಡಿಜಿಟಲ್ ವ್ಯವಸ್ಥೆ ಮೂಲಕ ಹಣ ಪಾವತಿಸುವ ವ್ಯವಸ್ಥೆ ಜಾರಿ ಮಾಡಿದೆ. ಈ ಯಂತ್ರಗಳನ್ನು ಬಳಸಿ, ಪ್ರಯಾಣಿಕರು ಸಾಮಾನ್ಯ ದರ್ಜೆಯ ಬೋಗಿಗಳಲ್ಲಿ ಪ್ರಯಾಣಿಸಲು ನಿರ್ಧಿಷ್ಟ ಪಡಿಸಿದ ಹಣವನ್ನು ಕ್ಯೂ ಆರ್ ಕೋಡ್ ಬಳಸಿ, ವಿವಿಧ ಡಿಜಿಟಲ್ ಮಾಧ್ಯಮಗಳ ಮೂಲಕ ಹಣ ಪಾವತಿಸಿ, ಟಿಕೆಟ್ ಪಡೆಯಬಹುದಾಗಿದೆ.
ಈ ಮೂಲಕ ದೇಶದ ಪ್ರಮುಖ ರೈಲು ನೀಲ್ದಾಣಗಳಲ್ಲಿ ಕೌಂಟರ್ ಗಳ ಬಳಿ ಸರತಿ ಸಾಲಿನಲ್ಲಿ ನಿಂತು ಸಾಮಾನ್ಯ ದರ್ಜೆಯ ಟಿಕೆಟ್ ಪಡೆಯುವುದನ್ನು ತಪ್ಪಿಸಬಹುದು.