ನವದೆಹಲಿ : ಇಂದು ಸಹ ದೆಹಲಿ ಹಿಂಸಾಚಾರ ರಾಜ್ಯಸಭೆಯ ಕಲಾಪವನ್ನು ನುಂಗಿ ಹಾಕಿದೆ. ಇಂದು ಕಲಾಪ ಆರಂಭವಾಗುತ್ತಿದ್ದಂಯೆ ವಿಪಕ್ಷಗಳು ದೆಹಲಿ ಹಿಂಸಾಚಾರ ಪ್ರಕರಣವನ್ನು ಪ್ರಸ್ತಾಪಿಸಲು ಮುಂದಾದರು. ಇದರಿಂದ ಗದ್ದಲ, ಕೋಲಾಹಲ ಉಂಟಾಗಿದ್ದರಿಂದ ಕಲಾಪವನ್ನು ನಾಳೆಗೆ ಮುಂದೂಡಿಕೆ ಮಾಡಲಾಗಿದೆ. ರಾಜ್ಯಸಭೆಯ ಕಲಾಪ ಇಂದು ಬೆಳಿಗ್ಗೆ 11ಕ್ಕೆ ಆರಂಭವಾಗುತ್ತಿದ್ದಂತೆ, ವಿರೋಧ ಪಕ್ಷಗಳು ದೆಹಲಿ ಹಿಂಸಾಚಾರ ಪ್ರಕರಣ ಕುರಿತಂತೆ ಚರ್ಚೆ ನಡೆಸಲು ಅವಕಾಶ ನೀಡುವಂತೆ ಬಿಗಿ ಪಟ್ಟು ಹಿಡಿದವು. ಆದ್ರೆ ರಾಜ್ಯ ಸಭೆ ಸ್ಪೀಕರ್ ವೆಂಕಯ್ಯನಾಯ್ಡು, ಶೂನ್ಯ ವೇಳೆಯಲ್ಲಿ ಇದಕ್ಕೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದ್ರು.
ಸ್ಪೀಕರ್ ಭರವಸೆಗೆ ಒಪ್ಪದ ವಿಪಕ್ಷಗಳ ನಾಯಕರು, ಸದಸ್ಯರು ರಾಜ್ಯಸಭೆಯಲ್ಲಿ ಗದ್ದಲವನ್ನು ಆರಂಭಿಸಿದವು. ಅಲ್ಲದೇ ಕೇಂದ್ರ ಸರ್ಕಾರ, ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದ್ರು.. ಹೀಗಾಗಿ ಅನಿವಾರ್ಯವಾಗಿ ರಾಜ್ಯಸಭೆಯ ಕಲಾಪವನ್ನು ಸ್ಪೀಕರ್ ನಾಳೆಗೆ ಮುಂದೂಡಿದ್ರು.
ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್
ತಿಂಗಳಿಡೀ ಕತ್ತೆ ಥರ ದುಡಿಯೋದೆ ಒಂದನೇ ತಾರೀಖು ಬರೋ ಆ ಸಂಬಳದ ಮೆಸೇಜ್ ನೋಡೋಕೆ ಅಲ್ವಾ? ಆದ್ರೆ ಏಪ್ರಿಲ್ ಒಂದರಿಂದ ನಮ್ಮ ನಿಮ್ಮೆಲ್ಲರ ಸಂಬಳದ ರೂಲ್ಸ್ ಕಂಪ್ಲೀಟ್...








