ಬಂಡಾಯ ಗುಂಪುಳು ಹಿಂಸಾಚಾರವನ್ನು ಶಾಶ್ವತವಾಗಿ ನಿಲ್ಲಿಸಬೇಕು : ರಾಜನಾಥ ಸಿಂಗ್ Saaksha Tv
ಮಣಿಪುರ: ಬಂಡಾಯ ಗುಂಪಿನೊಂದಿಗೆ ಸಂವಾದ ನಡೆಸಲು ಬಿಜೆಪಿ ಸಿದ್ಧವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಮಣಿಪುರದ ಪ್ರಚಾರದ ವೇಳೆ ಮಾತನಾಡಿದ ಅವರು, ಬಂಡಾಯ ಗುಂಪುಳು ಸರಕಾರದೊಂದಿಗೆ ಮಾತನಾಡಲು ಮುಂದೆ ಬರಬೇಕು. ಜನರ ಅನುಕೂಲಕ್ಕಾಗಿ ಅಭಿವೃದ್ಧಿ ಯೋಜನೆಗಳು ಮತ್ತು ಕಲ್ಯಾಣ ಯೋಜನೆಗಳನ್ನು ಕೈಗೊಳ್ಳಲು ಹಿಂಸಾಚಾರವನ್ನು ಶಾಶ್ವತವಾಗಿ ನಿಲ್ಲಿಸಬೇಕು. ಮುಖ್ಯಮಂತ್ರಿ ಬಿರೆನ್ ಸಿಂಗ್ ನಾಯಕತ್ವದಲ್ಲಿ ಮಣಿಪುರದಲ್ಲಿ ಹಿಂಸಾಚಾರವನ್ನು ನಿಯಂತ್ರಿಸಲಾಗುತ್ತಿದೆ ಎಂದು ಹೇಳಿದರು.
ಮಣಿಪುರವು ಭಾರತದಲ್ಲಿ ಅಭಿವೃದ್ಧಿ ಹೊಂದಿದ ರಾಜ್ಯವಾಗಲು ಸಾಕಷ್ಟು ಸಾಮರ್ಥ್ಯವನ್ನು ಹೊಂದಿದೆ. ಕಳೆದ 70 ವರ್ಷಗಳಲ್ಲಿ ಮಣಿಪುರ ಹಾಗೂ ಇತರೇ ಈಶಾನ್ಯ ರಾಜ್ಯದಲ್ಲಿ ಹೆಚ್ಚಾಗಿ ಕಾಂಗ್ರೆಸ್‍ನ ಆಳ್ವಿಕೆ ಇತ್ತು. ಆಗ ಕಾಂಗ್ರೆಸ್ ಅಭಿವೃದ್ಧಿ ವಿರೋಧಿ ಮತ್ತು ಈಶಾನ್ಯ ವಿರೋಧಿಯ ಮನಸ್ಥಿತಿಯನ್ನು ಹೊಂದಿದೆ ಎಂದು ನಿರೂಪಿಸಿತ್ತು ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರದಲ್ಲೇ ಮಣಿಪುರಕ್ಕೆ ರೈಲು ಸಂಪರ್ಕ ದೊರಕಿದೆ. ಮಣಿಪುರದ ಅಭಿವೃದ್ಧಿ ಸ್ಥಿತಿಯನ್ನು 15 ವರ್ಷಗಳಲ್ಲಿ ಹೊಸ ಪಥದತ್ತ ಕೊಂಡೊಯ್ಯಲು ಬಿಜೆಪಿ ಬಯಸಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರದಲ್ಲಿ ಮಣಿಪುರದ ಚಹರೆಯೇ ಬದಲಾಗಿದೆ ಎಂದರು
ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರ್ಕಾರ ರಚನೆಯಾದ ನಂತರ ಈಶಾನ್ಯ ಭಾಗದ ರಾಜ್ಯದ ಭವಿಷ್ಯ ಬದಲಾಗಿದೆ. ಈಶಾನ್ಯ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಪ್ರಧಾನಿ ಮೋದಿ ಹೊಸ ಮುನ್ನುಡಿ ಬರೆಯಲು ಸಿದ್ಧರಾಗಿದ್ದಾರೆ. ರೈಲು, ರಸ್ತೆ ಮತ್ತು ವಾಯು ಸಂಪರ್ಕಕ್ಕೆ ಸಂಬಂಧಿಸಿದ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದು ತಿಳಿಸಿದರು.