ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದವನಿಗೆ ಸಿಕ್ಕಿದ್ದು 2.5 ಕೆಜಿಯ ಮೀನು
ಕುಪ್ವಾರ, ಸೆಪ್ಟೆಂಬರ್22: ಕ್ರಿಕೆಟ್‌ನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ಸ್ ಗೆದ್ದ ಆಟಗಾರರು, ಹೆಚ್ಚಾಗಿ ನಗದು ಬಹುಮಾನವನ್ನು ಕೊಡುಗೆಯಾಗಿ ಪಡೆಯುತ್ತಾರೆ. ಆದರೆ ಕಾಶ್ಮೀರದ ಟೆಕಿಪೋರಾ ಕುಪ್ವಾರದಲ್ಲಿ ನಡೆದ ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಂದು ವಿಶಿಷ್ಟ ಉಡುಗೊರೆಯನ್ನು ನೀಡಲಾಯಿತು. ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗೆದ್ದ ಆಟಗಾರನಿಗೆ 2.5 ಕೆಜಿ ತೂಕದ ಮೀನು ನೀಡಲಾಯಿತು. ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಫಿರ್ದಸ್ ಹಸನ್ ಸಾಮಾಜಿಕ ಮಾಧ್ಯಮ ಟ್ವಿಟ್ಟರ್ ನಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ. ಈ ಅನನ್ಯ ಉಡುಗೊರೆಯ ಉದ್ದೇಶದ ಬಗ್ಗೆ ನೆಟ್ಟಿಗರು ಅವರನ್ನು ಪ್ರಶ್ನಿಸಿದ್ದು, ಆಟದ ಮೈದಾನದ ಕರುಣಾಜನಕ ಸ್ಥಿತಿಯನ್ನು ಎತ್ತಿ ಹಿಡಿಯಲು ಇದನ್ನು ಮಾಡಲಾಗಿದೆ ಎಂದು ಅವರು ಬಹಿರಂಗಪಡಿಸಿದರು.
ವಾಸ್ತವವಾಗಿ, ರಾಜ್ಯದ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದು ಅವರು ತಿಳಿಸಿದ್ದು, ಪಂದ್ಯಾವಳಿಯನ್ನು ತಮ್ಮದೇ ಖರ್ಚಿನಲ್ಲಿ ಆಯೋಜಿಸಲಾಗಿದೆ ಎಂದರು.
ಆರ್ ಸಿಬಿಯ ಬೆಳಕು ಕರ್ನಾಟಕದ ದೇವ್‍ದತ್ತ್ ಪಡಿಕ್ಕಲ್
ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯಲ್ಲಿ ಕ್ರಿಕೆಟಿಗರಿಗೆ ವಿಶಿಷ್ಟ ಉಡುಗೊರೆಗಳನ್ನು ನೀಡುವುದು ಇದೇ ಮೊದಲಲ್ಲ. ಢಾಕಾ ಪ್ರೀಮಿಯರ್ ಲೀಗ್ 2013 ರಲ್ಲಿ ಲ್ಯೂಕ್ ರೈಟ್‌ಗೆ ಒಮ್ಮೆ ಬ್ಲೆಂಡರ್ ನೀಡಲಾಗಿತ್ತು. 2017 ರಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿನ ಸಾಧನೆಗಾಗಿ ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ಮ್ಯಾನ್ ಆಫ್ ದಿ ಸೀರೀಸ್ ಆಗಿ ಮಿನಿ ಟ್ರಕ್ ನೀಡಲಾಗಿತ್ತು.
https://twitter.com/FirdousHassan/status/1307949604122451968?s=19








