83 ಚಿತ್ರಕ್ಕೆ ಸಂಭಾವನೆ ಜೊತೆ ಲಾಭದಲ್ಲೂ ಪಾಲು – ಲಕ್ಕಿ ರಣ್ವೀರ್
ರಣವೀರ್ ಸಿಂಗ್ ಬಾಲಿವುಡ್ ಚಿತ್ರರಂಗಕ್ಕೆ ಬಂದು ಕಡಿಮೆ ಅವಧಿಯಲ್ಲಿ ಬೇಡಿಕೆಯ ನಟನಾಗಿ ಅವರು ಹೊರ ಹೊಮ್ಮಿದ್ದಾರೆ. ಪ್ರತಿ ಚಿತ್ರಕ್ಕೂ ಭಿನ್ನ ಪಾತ್ರ ಆಯ್ಕೆ ಮಾಡಿಕೊಳ್ಳುವ ಮೂಲಕ ಬಾಲಿವುಡ್ ನಲ್ಲಿ ಹಾಟ್ ಫೇವ್ ರೇಟ್ ಆಗಿದ್ದಾರೆ.
ರಣವೀರ್ ಸಿಂಗ್ ‘83’ ಚಿತ್ರದಲ್ಲಿ ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್ 24ರಂದು ಸಿನಿಮಾ ತೆರೆಗೆ ಬರುತ್ತಿದೆ. ಚಿತ್ರ ಬಿಡುಗಡೆಗೆ ಮುನ್ನವೆ ಕಣವೀರ್ ಫುಲ್ ಖುಷಿ ಸುದ್ದಿಯೊಂದನ್ನ ಪಡೆದಿದ್ದಾರೆ. ರಣ್ವೀರ್ ಈ ಚಿತ್ರಕ್ಕೆ ಪಡೆದ ಸಂಭಾವನೆ ಎಲ್ಲರನ್ನೂ ಹುಬ್ಬೇರಿಸುವಂತಿದೆ. ಈ ಸಿನಿಮಾಗೆ ಬರೋಬ್ಬರಿ 20 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ.
20 ಕೋಟಿ ಪಡಿಯೋದು ಅಷ್ಟೆ ಅಲ್ಲ ರಣವೀರ್ ಸಿಂಗ್ ಸಂಭಾವನೆ ಜೊತೆ ಲಾಭದ ಪಾಲು ಕೇಳಿದ್ದಾರೆ. ಎಷ್ಟು ಪರ್ಸಂಟೇಜ್ ಎಷ್ಟು ಎಂದು ನಿಖರವಾಗಿ ತಿಳಿದಿಲ್ಲವಾದರೂ, ಚಿತ್ರ ಬಿಡುಗಡೆಯಾದ ನಂತರ ಎಷ್ಟು ಮೊತ್ತ ಎಂಬುದು ತಿಳಿದುಬರಲಿದೆ.
ಈ ಹಿಂದೆ, ಕಪಿಲ್ ದೇವ್ ಅವರು 83 ಗಾಗಿ ಭಾರಿ ಸಂಭಾವನೆಯನ್ನು ಪಡೆದಿದ್ದಾರೆ ಎಂದು ಬಹಿರಂಗಪಡಿಸಿತು, ಈ ಚಿತ್ರ 1983 ರ ಲಾರ್ಡ್ಸ್ ನಲ್ಲಿ ನಡೆದ ವಿಶ್ವಕಪ್ ಫೈನಲ್ ಗೆದ್ದ ಕ್ಷಣವನ್ನು ಮರುಸೃಷ್ಟಿಸಲಿದೆ. ಅಂದು ಭಾರತವು ವೆಸ್ಟ್ ಇಂಡೀಸ್ ಅನ್ನು ಸೋಲಿಸಿ ಮೊದಲ ವಿಶ್ವಕಪ್ ಗೆದ್ದಿತು.








