ಸಿನಿಪ್ರಿಯರಿಗೆ ನಿರಾಸೆ – ಅಧಿಕೃತವಾಗಿ RRR ಚಿತ್ರ ಮುಂದೂಡಿಕೆ…..
ಭಾರತೀಯ ಸಿನಿ ಪ್ರೇಮಿಗಳಿಗೆ ನಿರಾಸೆಯಾಗುವಂತಹ ಸುದ್ದಿಯನ್ನ RRR ಚಿತ್ರ ತಂಡ ನೀಡಿದೆ.. ಒಮಿಕ್ರಾನ್ ಆತಂಕದ ಹಿನ್ನಲೆಯಲ್ಲಿ RRR ಚಿತ್ರ ಬಿಡುಗಡೆಯ ದಿನಾಂಕವನ್ನ ಮುಂದೂಡಲಾಗಿದೆ.
ನಮ್ಮ ಎಲ್ಲಾ ನಿರಂತರ ಪ್ರಯತ್ನಗಳ ನಂತರವೂ ಕೆಲವೊಂದು ಪರಿಸ್ಥಿತಿಗಳು ನಮ್ಮ ಕೈಲಿರುವುದಿಲ್ಲ . ಭಾರತದ ಹಲವು ರಾಜ್ಯಗಳಲ್ಲಿ ಚಿತ್ರಮಂದಿರಗಳು ಕ್ಲೋಸ್ ಆಗುತ್ತಿರುವುದರಿಂದ ನಮ್ಮ ಸಿನಿಮಾವನ್ನ ನಡಲು ನೀವು ಇನ್ನೂ ಸ್ವಲಪ ದಿನಗಳ ಕಾಲ ಕಾಯಿರಿ ಎಂದು ಹೇಳುದು ಬಿಟ್ಟು ನಮ್ಮಲ್ಲಿ ಬೇರೇ ಆಯ್ಕೆಗಳಿಲ್ಲ ಎಂದು ಆರ್ ಆರ್ ಆರ್ ಚಿತ್ರತಂಡ ಅಧಿಕೃತವಾಗಿ ಟ್ವೀಟ್ ಮಾಡಿ ತಿಳಿಸಿದೆ.
ಕೋವಿಡ್ ಪ್ರಕರಣಗಳ ಹೆಚ್ಚಳ ಮತ್ತು ಒಮಿಕ್ರಾನ್ ಆತಂಕದಿಂದಾಗಿ ಭಾರತದ ಎಲ್ಲೆಡೆ ನಿರ್ಭಂಧಗಳು ಹೇರಲ್ಪಡುತ್ತಿವೆ. ಇದಕ್ಕೆ ಚಿತ್ರ ರಂಗವೂ ಹೊರತಾಗಿಲ್ಲ. ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಹಾಕಿರುವುದರಿಂದ ನೈಟ್ ಶೋಗಳನ್ನ ರದ್ದು ಮಾಡಲಾಗಿದೆ. ಕೆಲವೊಂದು ರಾಜ್ಯಗಳಲ್ಲಿ 50 – 50 ಆಸನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಮತ್ತು ಕೆಲವು ರಾಜ್ಯಗಳಲ್ಲಿ ಸಂಪೂರ್ಣವಾಗಿ ಚಿತ್ರಮಂದಿರಗಳಿಗೆ ನಿರ್ಬಂಧ ವಿಧಿಸಿವೆ ಈ ಹಿನ್ನಲೆಯಲ್ಲಿ ಆರ್ ಆರ್ ಆರ್ ಚಿತ್ರತಂಡ ಅಧಿಕೃತವಾಗಿ ಸಿನಿಮಾವನ್ನ ಮುಂದೂಡಿದೆ.
ಸುಮಾರು 400 ಕೊಟಿ ರೂ ಬಜೆಟ್ ನಲ್ಲಿ ತಯರಾಗಿರುವ ಚಿತ್ರ ಆರ್ ಆರ್ ಆರ್ ಹಲವು ಅಡ್ಡಿ ಆತಂಕಗಳನ್ನ ದಾಟಿಕೊಂಡು ಜನವರಿಗೆ ತೆರೆಗೆ ಬರಲು ರೆಡಿಯಾಗಿತ್ತು ಆದ್ರೆ ಮತ್ತೆ ಚಿತ್ರವನ್ನ ಮುಂದೂಡುವ ಪರಿಸ್ಥಿತಿ ಚಿತ್ರ ತಂಡ ಎದುರಾಗಿದೆ.
400 ಕೋಟಿ ಹೂಡಿ ನಿರ್ಮಿಸಿರುವ ಚಿತ್ರದ ಬಂಡವಾಳವನ್ನ ಮರಳಿ ಪಡೆಯಬೇಕು ಎಂದರೆ ಸಿನಿಮಾ ನೋಡುವುದಕ್ಕೆ ಯಾವುದೇ ನಿರ್ಬಂಧಗಳಿರಬಾರದು ಆಗಲೇ ಚಿತ್ರತಂಡ ಹಣ ಗಳಿಸಲು ಸಾಧ್ಯ. ಹಾಗಾಗಿ ಚಿತ್ರತಂಡ ಮಹತ್ವದ ತೀರ್ಮಾನವನ್ನ ತೆಗೆದುಕೊಂಡು ಮತ್ತೆ ಬಿಡುಗಡೆ ದಿನಾಂಕವನ್ನ ಮುಂದೂಡಿದೆ.
Keeping the best interests of all the involved parties in mind, we are forced to postpone our film. Our sincere thanks to all the fans and audience for their unconditional love. #RRRPostponed #RRRMovie pic.twitter.com/JlYsgNwpUO
— RRR Movie (@RRRMovie) January 1, 2022








