======ಮಾತು ತಪ್ಪಿದರೆ ಸರ್ಕಾರವೇ ಬೀಳುತ್ತೆ====
ಬಾಗಲಕೋಟೆ: ಕುರುಬ ಸಮುದಾಯ ಶಾಸಕರ ತ್ಯಾಗದಿಂದ ಬಿ.ಎಸ್ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೆ ಇದರ ಫಲವನ್ನು ಇನ್ನೊಂದು ಸಮಾಜ ತೆಗೆದುಕೊಳ್ಳುತ್ತಿದೆ ಎಂದು ಕನಕಗುರು ಪೀಠದ ತಿಂಥಿಣಿ ಶಾಖಾಮಠದ ಸಿದ್ದರಾಮನಾನಂದ ಸ್ವಾಮೀಜಿ ಪರೋಕ್ಷವಾಗಿ ವೀರಶೈವ-ಲಿಂಗಾಯತ ಸಮಾಜದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಯ ನವನಗರದ ಕಾಳಿದಾಸ ಕಾಲೇಜು ಮೈದಾನದಲ್ಲಿ ನಡೆದ ಕುರುಬ ಸಮಾಜದ ಎಸ್.ಟಿ ಮೀಸಲಾತಿ ಹೋರಾಟದ ಬೃಹತ್ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಶ್ರೀಗಳು, ಪರೋಕ್ಷವಾಗಿ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ, ವೀರಶೈವ-ಲಿಂಗಾಯತರನ್ನು ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಲು ತರಾತುರಿ ಮಾಡಿತ್ತಿರುವ ಸಿಎಂ ಯಡಿಯೂರಪ್ಪ ನಡೆಗೆ ಕಿಡಿಕಾರಿದ್ದಾರೆ.

ಸರ್ಕಾರ ಒಂದು ಜಾತಿ, ಒಂದು ವರ್ಗ ಎನ್ನುವ ರೀತಿಯಲ್ಲಿ ನಡೆಯುತ್ತಿದೆ. ಯಾರದೋ ತ್ಯಾಗದಿಂದ ಬಂದಿರುವ ಸರ್ಕಾರದ ಫಲವನ್ನು ತಮ್ಮ ಜಾತಿಗೆ ಮೀಸಲಿಡುವುದನ್ನು ಸೃಷ್ಟಿಸುತ್ತಿದ್ದಾರೆ. ಇದನ್ನು ರಾಜ್ಯ ಬಿಜೆಪಿ, ಆರ್‍ಎಸ್‍ಎಸ್ ಹಾಗೂ ರಾಜ್ಯದ ಜನತೆ ಗಮನಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಮಾತು ತಪ್ಪಿದರೆ ಸರ್ಕಾರವೇ ಬೀಳುತ್ತೆ..
ಸಮಾಜಕ್ಕೆ ಕೊಟ್ಟ ಮಾತು ತಪ್ಪಿದವರು ಸರ್ಕಾರವನ್ನೇ ಕಳೆದುಕೊಂಡಿದ್ದಾರೆ. ಯಡಿಯೂರಪ್ಪ ಸರ್ಕಾರ ಕುರುಬ ಸಮಾಜದ ಋಣದಲ್ಲಿದೆ. ಮಹಾರಾಷ್ಟ್ರದಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಮಾತು ಕೊಟ್ಟು ತಪ್ಪಿದ್ರು. ಹೀಗಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬಿದ್ದುಹೋಗುವ ಪ್ರಸಂಗ ಬಂತು. ಇಂತಹ ಸಂದರ್ಭ ರಾಜ್ಯ, ಕೇಂದ್ರದಲ್ಲಿ ಬರಬಾರದು. ಬೆಳಗಾವಿ ಲೋಕಸಭೆ ಚುನಾವಣೆ ಟಿಕೆಟ್ ಕುರುಬರಿಗೆ ಕೊಡ್ಬೇಕು ಎಂದು ಸಿದ್ದರಾಮನಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಸ್ವಾಮೀಜಿ ವಿರುದ್ಧ ಈಶ್ವರಪ್ಪ ಫುಲ್ ಗರಂ..!
ಯಾರದೋ ತ್ಯಾಗದಿಂದ ಬಂದಿರುವ ಸರ್ಕಾರದ ಫಲವನ್ನು ತಮ್ಮ ಜಾತಿಗೆ ಮೀಸಲಿಡುವುದನ್ನು ಸೃಷ್ಟಿಸುತ್ತಿದ್ದಾರೆ ಎಂಬ ಕನಕಗುರು ಪೀಠದ ತಿಂಥಿಣಿ ಶಾಖಾಮಠದ ಸಿದ್ದರಾಮನಾನಂದ ಸ್ವಾಮೀಜಿ ವಿರುದ್ಧ ಹೋರಾಟದ ಸಮಾವೇಶದ ವೇದಿಕೆಯಲ್ಲೇ ಸಚಿವ ಈಶ್ವರಪ್ಪ ಗರಂ ಆದ ಘಟನೆಯೂ ನಡೆಯಿತು.
ಸಿದ್ದರಾಮನಾನಂದ ಸ್ವಾಮೀಜಿ ಭಾಷಣ ಮುಗಿಸಿ ವೇದಿಕೆಯಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಈಶ್ವರಪ್ಪ-ಸಿದ್ದರಾಮನಾನಂದ ಸ್ವಾಮೀಜಿ ನಡುವೆ ಮಾತಿನ ಚಕಮಕಿ ನಡೆದಿದೆ.
ಕುರುಬರಿಗೆ ಎಸ್.ಟಿ ಮೀಸಲಾತಿ ಕೊಡದಿದ್ರೆ ಪರೋಕ್ಷವಾಗಿ ಬಿಎಸ್‍ವೈ ಸರ್ಕಾರ ಬೀಳುತ್ತೆ ಎಂದು ಸ್ವಾಮೀಜಿ ಮಾತಿಗೂ ಸಚಿವ ಈಶ್ವರಪ್ಪ ಸಿಡಿಮಿಡಿಗೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








