ಭಾರತೀಯ ಚಿತ್ರರಂಗದಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ನಿಧನರಾಗಿದ್ದಾರೆ.
\
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮುಂಬಯಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. 90 ವರ್ಷ ವಯಸ್ಸಾಗಿದ್ದ ಶ್ಯಾಮ್ ಬೆನಗಲ್ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ನಿಧನಕ್ಕೆ ಭಾರತೀಯ ಚಿತ್ರರಂಗದ ಹಲವರು ಕಂಬನಿ ಮಿಡಿದಿದ್ದಾರೆ.
ಅನಂತ್ ನಾಗ್ ನಟನೆಯ ‘ಅಂಕುರ್’, ಗಿರೀಶ್ ಕಾರ್ನಾಡ್ ಅಭಿನಯದ ‘ನಿಶಾಂತ್’, ಸ್ಮಿತಾ ಪಾಟೀಲ್ ನಟನೆಯ ‘ಮಂಥನ್’, ‘ಭೂಮಿಕಾ’ ಸೇರಿದಂತೆ ಹಲವಾರು ಸಿನಿಮಾಗಳನ್ನು ಶ್ಯಾಮ್ ಬೆನಗಲ್ ನಿರ್ದೇಶಿಸಿದ್ದರು.
18 ಬಾರಿ ಶ್ಯಾಮ್ ಬೆನಗಲ್ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ ಪಡೆದಿದ್ದರು. ಫಿಲ್ಮ್ ಫೇರ್, ನಂದಿ ಅವಾರ್ಡ್ ಮುಂತಾದ ಗೌರವಗಳು ಕೂಡ ಅವರಿಗೆ ಸಿಕ್ಕಿದ್ದವು. ಪದ್ಮಶ್ರೀ, ಪದ್ಮ ಭೂಷಣ ಪ್ರಶಸ್ತಿಗಳು ಕೂಡ ಬೆನಗಲ್ ಅವರಿಗೆ ಸಂದಿದ್ದವು.