ಸಾಮಾನ್ಯವಾಗಿ ಕೋಟಿ-ಕೋಟಿ ವೆಚ್ಚ ಮಾಡಿ ಸಿನಿಮಾ ನಿರ್ಮಿಸುವುದು ನಮಗೇ ಗೊತ್ತೇ ಇದೆ. ಅದರಲ್ಲೂ ಒಂದು ಸಿನಿಮಾಗೆ ನೂರಾರು ಕೋಟಿ ವೆಚ್ಚ ಮಾಡಿದ್ದಾರೆ ಎಂದರೇ ಅದು ಭಾರಿ ಬಜೆಟ್ ಸಿನಿಮಾನೇ ಅಂತ ಲೆಕ್ಕಾ. ಆದರೆ ಏಳು ವರ್ಷದ ಹಿಂದೆಯೇ ಧಾರಾವಾಹಿ ಮೇಲೆ ನೂರು ಕೋಟಿ ಬಂಡವಾಳ ಹೂಡಲಾಗಿತ್ತು.
ಹೌದು, ಪ್ರಸ್ತುತ ಕನ್ನಡ ಚಾನೆಲ್ ಒಂದರಲ್ಲಿ ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗುತ್ತಿರುವ ‘ಮಹಾಭಾರತ’ ಧಾರಾವಾಹಿವನ್ನು ಏಳು ವರ್ಷಗಳ ಹಿಂದೆ ಬರೋಬ್ಬರಿ ನೂರು ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು.
ಹಲವು ಅದ್ಧೂರಿತನ ಮಹಾಭಾರತ
ತಿವಾರಿ ಕುಟುಂಬ ಮಹಾಭಾರತ ಧಾರಾವಾಹಿಯನ್ನು 2013 ರಲ್ಲಿ ನಿರ್ಮಿಸಿತ್ತು. ಅದ್ಧೂರಿ ಸೆಟ್, ಸಿನಿಮಾ ಶೈಲಿಯ ನಿರೂಪಣೆ, ಅದ್ಭುತವಾದ ವಿಎಫ್ಎಕ್ಸ್ಗಳು, ಗ್ರಾಫಿಕ್ಸ್ಗಳು, ಹಿನ್ನೆಲೆ ಸಂಗೀತ, ಹಲವು ಹೊಸ ಅದ್ಧೂರಿ ಲೊಕೇಶನ್ಗಳು, ಅತ್ಯಂತ ದೊಡ್ಡ ಪಾತ್ರವರ್ಗ ಹೀಗೆ ಹಲವು ಅದ್ಧೂರಿತನ ಮಹಾಭಾರತ ಧಾರಾವಾಹಿಯಲ್ಲಿತ್ತು. ಒಂದು ಅಂದಾಜಿನ ಪ್ರಕಾರ ಪ್ರಚಾರವನ್ನೂ ಸೇರಿಸಿಕೊಂಡು ಸುಮಾರು 120 ಕೋಟಿಗೂ ಹೆಚ್ಚು ಹಣವನ್ನು ಈ ಧಾರಾವಾಹಿ ಮೇಲೆ ಖರ್ಚು ಮಾಡಲಾಗಿತ್ತಂತೆ.
ಇನ್ನು ಧಾರಾವಾಹಿಯ ಶೂಟಿಂಗ್ ಅನ್ನು ಭಾರತದ ಹಲವು ಭಾಗಗಳಲ್ಲಿ ಮಾಡಲಾಗಿದೆ. ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಕೇರಳ ಗಳಲ್ಲಿ ಧಾರಾವಾಹಿಯ ಚಿತ್ರೀಕರಣ ಮಾಡಲಾಯಿತು.