ರಿಪಬ್ಲಿಕ್ ಮೀಡಿಯಾ ಸುದ್ದಿವಾಹಿನಿ ಪ್ರಸಾರ ಮಾಡದಂತೆ ಕೇಬಲ್ ಆಪರೇಟರ್ ಗಳಿಗೆ ಶಿವಸೇನೆಯಿಂದ ಎಚ್ಚರಿಕೆ
ಮುಂಬೈ, ಸೆಪ್ಟೆಂಬರ್13: ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್ ಚಾನೆಲ್‌ಗಳ ಪ್ರಸಾರ ನಿಲ್ಲಿಸುವಂತೆ ಶಿವಸೇನೆಯ ಅಂಗಸಂಸ್ಥೆಯಾದ ಶಿವಕೇಬಲ್ ಸೇನಾ ಮಹಾರಾಷ್ಟ್ರದ ಕೇಬಲ್ ಟೆಲಿವಿಷನ್ ಆಪರೇಟರ್‌ಗಳಿಗೆ ಪತ್ರ ಬರೆದಿದೆ. ಚಾನೆಲ್ ನಲ್ಲಿ ಸರ್ಕಾರದ ನಡೆಯನ್ನು ಅವಮಾನಿಸುವ ಮೂಲಕ ಗೋಸ್ವಾಮಿ ಭಾರತೀಯ ಸಂವಿಧಾನವನ್ನು ಉಲ್ಲಂಘಿಸಿದ್ದಾರೆ ಎಂದು ಪಕ್ಷ ಆರೋಪಿಸಿದೆ.
ಸೆಪ್ಟೆಂಬರ್ 10 ರ ಪತ್ರದಲ್ಲಿ, ಶಿವಕೇಬಲ್ ಸೇನಾ ನೆಟ್ ವರ್ಕ್, ಕೇಬಲ್ ಆಪರೇಟರ್‌ಗಳಿಗೆ ಆದೇಶವನ್ನು ಪಾಲಿಸಲು ವಿಫಲವಾದರೆ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದೆ. ಶಿವಸೇನಾ ಸಂಸದ ಸಂಜಯ್ ರಾವತ್ ಮತ್ತು ಶಿವಕೇಬಲ್ ಸೇನಾ ಪ್ರಧಾನ ಕಾರ್ಯದರ್ಶಿ ವಿನಯ್ ಪಾಟೀಲ್ ಅವರ ಸಹೋದರ ಶಿವಸೇನೆ ಶಾಸಕ ಸುನಿಲ್ ರಾವತ್ ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ರಾವತ್ ಮತ್ತು ಸಾರಿಗೆ ಸಚಿವ ಅನಿಲ್ ಪರಬ್ ಅವರು ಶಿವಕೇಬಲ್ ಸೇನಾ ನೆಟ್ ವರ್ಕ್ ನ ಪ್ರಮುಖ ಮಾರ್ಗದರ್ಶಕರು/ ಪಕ್ಷದ ಕೇಬಲ್ ಟೆಲಿವಿಷನ್ ಆಪರೇಟರ್ಸ್ ವಿಭಾಗದ ಮುಖ್ಯ ಸಲಹೆಗಾರರಾಗಿದ್ದಾರೆ
ರಿಪಬ್ಲಿಕ್ ಟಿವಿ ವಿತರಣೆಯನ್ನು ನೀವು ತಕ್ಷಣ ನಿಲ್ಲಿಸದಿದ್ದರೆ ನೀವು ಶಿವಕೇಬಲ್ ಸೇನಾ ಮತ್ತು ಅನೇಕ ನಿಷ್ಠಾವಂತ ಮಹಾರಾಷ್ಟ್ರರಿಂದ ತೀವ್ರ ಆಂದೋಲನವನ್ನು ಎದುರಿಸಬೇಕಾಗುತ್ತದೆ ಎಂದು ನಾವು ನಿಮಗೆ ಸಲಹೆಯ ಜೊತೆಗೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ರಿಪಬ್ಲಿಕ್ ಟಿವಿ ಪತ್ರಿಕೋದ್ಯಮದ ನೈತಿಕ ಸಂಹಿತೆಯನ್ನು ಪದೇ ಪದೇ ಮುರಿಯುತ್ತಿದೆ ಮತ್ತು ಸಂವಿಧಾನ ವಿರೋಧಿಸಿ ಕೋರ್ಟ್ ರೀತಿ ಕಾರ್ಯನಿರ್ವಹಿಸುತ್ತಿದೆ ಎಂದು ಶಿವಕೇಬಲ್ ಸೇನಾ ಪತ್ರದಲ್ಲಿ ಉಲ್ಲೇಖಿಸಿದೆ. ಪತ್ರಿಕೋದ್ಯಮವು ನೀತಿಶಾಸ್ತ್ರದ ಸಂಹಿತೆಯೊಳಗೆ ಉಳಿದುಕೊಂಡು ಪರಿಹಾರ ಕಂಡುಕೊಳ್ಳಲು ಜನರ ಸಮಸ್ಯೆಗಳನ್ನು ಸರ್ಕಾರದ ಮುಂದೆ ಇಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಈ ಸಂಹಿತೆ ಮತ್ತು ಭಾರತೀಯ ಸಂವಿಧಾನವನ್ನು ಉಲ್ಲಂಘಿಸುತ್ತಿದ್ದಾರೆ ಮತ್ತು ಅವರ ಚಾನೆಲ್‌ನಲ್ಲಿ ಸಮಾನಾಂತರ ನ್ಯಾಯಾಲಯವನ್ನು ನಡೆಸುತ್ತಿದ್ದಾರೆ ಎಂದು ರಿಪಬ್ಲಿಕ್ ಟಿವಿಯನ್ನು ಟೀಕಿಸಲಾಗಿದೆ.
ಪತ್ರವನ್ನು ಸ್ವೀಕರಿಸಿದವರಲ್ಲಿ ಡೆನ್ ನೆಟ್‌ವರ್ಕ್ಸ್, ಹ್ಯಾಥ್‌ವೇ, ಇನ್‌ಕೇಬಲ್ನೆಟ್, ಜಿಟಿಪಿಎಲ್, ಜೆಪಿಆರ್ ನೆಟ್‌ವರ್ಕ್, ಬಿಆರ್‌ಡಿಎಸ್ ನೆಟ್‌ವರ್ಕ್, ಯುಸಿಎನ್ ಸಿಟಿ ಕೇಬಲ್, ರಾಜೇಶ್ ಮಲ್ಟಿಚಾನಲ್, ಮೌಲಿ ಕೇಬಲ್ ಮತ್ತು ಬಹುವಿದ್ ಯಂತ್ರನಾ ಪರಿಚಲಕ್ ಕೇಬಲ್ ಸೇರಿವೆ.








