ರಾಮ ಮಂದಿರ ಭೂಮಿ ಪೂಜೆಗೆ ಹುತಾತ್ಮ ಯೋಧರ ಮನೆಯ ಮಣ್ಣು !
ಅಯೋಧ್ಯೆ, ಅಗಸ್ಟ್ 3: ಪವಿತ್ರ ಪಟ್ಟಣವಾದ ಅಯೋಧ್ಯೆಯನ್ನು ಅಲಂಕರಿಸಲಾಗುತ್ತಿದ್ದು, ಆಗಸ್ಟ್ 5 ರಂದು ನಡೆಯುವ ರಾಮ ಮಂದಿರದ ಭೂಮಿ ಪೂಜೆಗೆ ಮುನ್ನ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಈ ದಿನಗಳಲ್ಲಿ ಪ್ರಾಚೀನ ನಗರವು ಒಬ್ಬ ಹತ್ತು ವರ್ಷದ ಅನನ್ಯ ಸಂದರ್ಶಕರನ್ನು ಹೊಂದಿದ್ದು, ಅವರ ಹೆಸರು ದೇವ್ ಪರಾಶರ್.
ಚಾನೆಲ್ನ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಆಯೋಜಿಸಿರುವ ಜನಪ್ರಿಯ ನ್ಯೂಸ್ ಶೋ ಡಿಎನ್ಎ ವೀಕ್ಷಿಸಿದ ನಂತರ, ಈ ಹತ್ತು ವರ್ಷದ ಪೋರ ಮಾತೃಭೂಮಿಯ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿರುವ ಹುತಾತ್ಮರ ಮನೆಗಳಿಗೆ ಭೇಟಿ ನೀಡುವ ಉದಾತ್ತ ಧ್ಯೇಯವನ್ನು ಕೈಗೊಂಡರು.
ಕನಿಷ್ಠ 11,000 ಹುತಾತ್ಮರ ಮನೆಗಳಿಗೆ ಭೇಟಿ ನೀಡುವುದು, ಅವರ ಕುಟುಂಬಗಳನ್ನು ಭೇಟಿ ಮಾಡುವುದು ಮತ್ತು ಅವರ ಮನೆಗಳಿಂದ ಮಣ್ಣು ಸಂಗ್ರಹಿಸುವುದು ದೇವ್ ಪರಶರ್ ಅವರ ಗುರಿಯಾಗಿದೆ.
ಈವರೆಗೆ ದೇವ್ ಪರಾಶರ್ ಸುಮಾರು 1600 ಯೋಧರ ಮನೆಗಳಿಗೆ ಭೇಟಿ ನೀಡಿ ಮಣ್ಣನ್ನು ಸಂಗ್ರಹಿಸಿ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಹಸ್ತಾಂತರಿಸಿದ್ದಾರೆ. ಭೂಮಿ ಪೂಜೆಯಲ್ಲಿ ಹುತಾತ್ಮ ಯೋಧರ ಮನೆಯಿಂದ ಸಂಗ್ರಹಿಸಿರುವ ಮಣ್ಣನ್ನು ಬಳಕೆ ಮಾಡಲಾಗುತ್ತದೆ ಎಂದು ಟ್ರಸ್ಟ್ನ ಸದಸ್ಯರು ತಿಳಿಸಿದ್ದಾರೆ.
ಹುತಾತ್ಮರ ಮನೆಗೆ ಭೇಟಿ ನೀಡಿದ ನಂತರ, ಈಗ ‘ಲಿಟಲ್ ಸೋಲ್ಜರ್’ ಎಂದೇ ದೇವ್ ಪರಾಶರ್ ಜನಪ್ರಿಯರಾಗಿದ್ದಾರೆ.