ತಲೆಮಾರುಗಳಿಂದ ದೇವಾಲಯ ವಿನ್ಯಾಸಗೊಳಿಸುತ್ತಿರುವ ಸೋಂಪುರಾ ಕುಟುಂಬ
ಅಯೋಧ್ಯೆ, ಅಗಸ್ಟ್ 5: ಇಂದು ರಾಮ ಮಂದಿರದ ಐತಿಹಾಸಿಕ ಭೂಮಿ ಪೂಜೆ ಸಮಾರಂಭ ನಡೆಯಲಿದ್ದು ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು.
ಮಂದಿರದ ಹೊಸ ವಿನ್ಯಾಸವನ್ನು ವಾಸ್ತುಶಿಲ್ಪಿ ಆಶಿಶ್ ಸೋಂಪುರಾ ವಿನ್ಯಾಸಗೊಳಿಸಿದ್ದು, 78 ರ ಹರೆಯದ ಅವರ ತಂದೆ ಚಂದ್ರಕಾಂತ್ ಸೋಮಪುರ ಅವರು ಆಗಿನ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮುಖ್ಯಸ್ಥ ದಿವಂಗತ ಅಶೋಕ್ ಸಿಂಘಾಲ್ ಅವರ ಕೋರಿಕೆಯ ಮೇರೆಗೆ 1989 ರಲ್ಲಿ ರಾಮ ಮಂದಿರ ವಿನ್ಯಾಸಗೊಳಿಸಿದ್ದರು.

ಕೋವಿಡ್ -19 ಭೀತಿಯಿಂದ ನನ್ನ ತಂದೆ ಭೂಮಿ ಪೂಜೆಯಲ್ಲಿ ಭಾಗವಹಿಸುತ್ತಿಲ್ಲ. ಆದರೆ ವಿಶ್ವದ ಅತಿ ದೊಡ್ಡ ಮಂದಿರದ ಅಡಿಪಾಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಡಲಿರುವುದರಿಂದ ನಾನು ಅಲ್ಲಿಗೆ ಹೋಗಲಿದ್ದೇನೆ. ಎಂದು ಆಶಿಶ್ ಸೋಂಪುರಾ ಸಮಾರಂಭದ ಮುನ್ನಾದಿನದಂದು ಹೇಳಿದ್ದಾರೆ.
ಆಶಿಶ್ (49) ಮತ್ತು ಅವರ ಸಹೋದರ ನಿಖಿಲ್ (55) ಅವರು ದೇವಾಲಯದ ನಿರ್ಮಾಣದಲ್ಲಿ ತೊಡಗಿದ್ದು, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸಭೆಗಳಲ್ಲಿ ಭಾಗವಹಿಸುವುದು ಸೇರಿದಂತೆ ದಿನನಿತ್ಯದ ಕೆಲಸಗಳನ್ನು ವಹಿಸಿಕೊಂಡಿದ್ದಾರೆ, ಅವರ ತಂದೆ ಮನೆಯಿಂದಲೇ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಭಾರತ ಮತ್ತು ವಿದೇಶಗಳಲ್ಲಿ 200 ಕ್ಕೂ ಹೆಚ್ಚು ದೇವಾಲಯಗಳನ್ನು ನಿರ್ಮಿಸಿರುವ ಚಂದ್ರಕಾಂತ್ ಸೋಂಪುರಾ ಅಹಮದಾಬಾದ್ ಮೂಲದ ಕುಟುಂಬದ 15 ನೇ ತಲೆಮಾರಿನವರು. ಅವರ ಅಜ್ಜ ಪಿ.ಒ. ಸೋಂಪುರಾ 1949 ರಲ್ಲಿ ಸೋಮನಾಥ ದೇವಾಲಯವನ್ನು ವಿನ್ಯಾಸಗೊಳಿಸಿದ್ದರು. ಈ ಕುಟುಂಬವು ಗುಜರಾತ್‌ನ ಅಕ್ಷರ್ಧಮ್, ಮುಂಬೈನ ಸ್ವಾಮಿನಾರಾಯಣ ಮಂದಿರ ಮತ್ತು ಕಲ್ಕತ್ತಾದ ಬಿರ್ಲಾ ಮಂದಿರ ಸೇರಿದಂತೆ ದೇವಾಲಯಗಳ ವಿನ್ಯಾಸಗೊಳಿಸಿದ ಸುದೀರ್ಘ ಪಟ್ಟಿಯನ್ನು ಹೊಂದಿದೆ.
ಅವರನ್ನು ದಿವಂಗತ ವಿಎಚ್‌ಪಿ ಮುಖ್ಯಸ್ಥರಾದ ಅಶೋಕ್ ಸಿಂಘಾಲ್ ಬಿರ್ಲಾ ಕುಟುಂಬದ ಮೂಲಕ ಸಂಪರ್ಕಿಸಿದ್ದರು. ನಾವು ಭೇಟಿಯಾಗಿ ಮಂದಿರ ನಿರ್ಮಾಣದ ಬಗ್ಗೆ ಚರ್ಚಿಸಿದೆವು ಮತ್ತು ಭೂಮಿಯನ್ನು ಪರಿಶೀಲಿಸಲು ಅಯೋಧ್ಯೆಗೆ ಹೋಗಬೇಕಾಯಿತು. ತುಂಬಾ ಭದ್ರತೆ ಇರುವುದರಿಂದ, ನಾನು ಭಕ್ತನಾಗಿ ವೇಷ ಧರಿಸಿ ಮಾಸ್ಟರ್‌ಪ್ಲಾನ್ ಮಾಡಲು ಪ್ರದೇಶವನ್ನು ಹೆಜ್ಜೆ ಗುರುತುಗಳಿಂದ ಅಳೆಯಬೇಕಾಯಿತು ಎಂದು ಚಂದ್ರಕಾಂತ್ ಸೋಂಪುರಾ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. 1990 ರ ದಶಕದ ಆರಂಭದಲ್ಲಿ ಅಲಹಾಬಾದ್ ಕುಂಭದ ಸಮಯದಲ್ಲಿ ಅವರ ವಿನ್ಯಾಸವನ್ನು ಸಂತರು ಮತ್ತು ಗುರುಗಳು ಅನುಮೋದಿಸಿದರು. ತನ್ನ ಯೋಜನೆಯನ್ನು ಉಳಿಸಿಕೊಳ್ಳಲು ಟ್ರಸ್ಟ್ ನಿರ್ಧರಿಸಿದೆ ಎಂದು ತಿಳಿದು ಅವರು ಸಂತೋಷಪಟ್ಟರು.

ಆದಾಗ್ಯೂ, ಯೋಜನೆಯನ್ನು ಸುಪ್ರೀಂಕೋರ್ಟ್ ತೀರ್ಪಿನ ನಂತರ ಸೋಂಪುರರು ವಿನ್ಯಾಸಗೊಳಿಸಿದ ಮೂಲ ಯೋಜನೆಯನ್ನು ನವೀಕರಿಸಿದ್ದಾರೆ. ಹೊಸ ವಿನ್ಯಾಸದ ಹೊಣೆಗಾರಿಕೆ ನಿಖಿಲ್ ಮತ್ತು ಆಶಿಶ್ ಸೋಂಪುರಾ ನಿರ್ವಹಿಸಲಿದ್ದಾರೆ. ಅವರು ಕಳೆದ ತಿಂಗಳು ಹೊಸ ಯೋಜನೆಯನ್ನು ಸಲ್ಲಿಸಿದರು, ಇದು ಮೂಲದ ಗಾತ್ರಕ್ಕಿಂತ ದುಪ್ಪಟ್ಟಾಗಿದೆ. ಆರಂಭದಲ್ಲಿ, ಇದನ್ನು ಪ್ರಾಚೀನ ದೇವಾಲಯದಂತೆ ವಿನ್ಯಾಸಗೊಳಿಸಲಾಗಿತ್ತು ಆದರೆ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ ಸಿಕ್ಕಿದ ಬಳಿಕ , ಇದು ಹೆಚ್ಚು ಭವ್ಯವಾಗಿರಬೇಕು ಎಂದು ನಾವು ನಿರ್ಧರಿಸಿದ್ದೇವು ಎಂದು ಆಶಿಶ್ ಹೇಳಿದರು.

ದೇವಾಲಯದ ವಾಸ್ತುಶಿಲ್ಪ ನಾಗರ ಶೈಲಿಯಲ್ಲಿ ನಿರ್ಮಿಸಲಾಗುವುದು . ಇದು ದೇಶದಲ್ಲಿ ದೇವಾಲಯ ನಿರ್ಮಾಣಕ್ಕೆ ಬಳಸುವ ಮೂರು ಶೈಲಿಗಳಲ್ಲಿ ಒಂದಾಗಿದೆ. ಮೂರು ಅಂತಸ್ತಿನ ರಾಮ ಮಂದಿರವು 161 ಅಡಿ ಎತ್ತರವನ್ನು ಹೊಂದಿರುತ್ತದೆ. ನವೀಕರಿಸಿದ ಯೋಜನೆಯ ಪ್ರಕಾರ, ಇದು ಐದು ಗುಮ್ಮಟ ಮಂಟಪಗಳನ್ನು ಹೊಂದಿರುತ್ತದೆ. ಅದರಲ್ಲಿ ಒಂದು ಶಿಖರ್ ಮತ್ತು ಉಳಿದವು ವಾಸ್ತು ಶಾಸ್ತ್ರದ ತತ್ವಗಳಿಗೆ ಬದ್ಧವಾಗಿರುತ್ತವೆ. ಭೂಮಿ ಪೂಜೆ ಮುಗಿಯುತ್ತಿದ್ದಂತೆ ನಿರ್ಮಾಣ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗಲಿದೆ. ಮಂದಿರದ ನಿರ್ಮಾಣವನ್ನು ಮೂರರಿಂದ ಮೂರೂವರೆ ವರ್ಷಗಳಲ್ಲಿ ಪೂರ್ಣಗೊಳಿಸಬೇಕಾಗಿದೆ ಎಂದು ಆಶಿಶ್ ಸೋಂಪುರಾ ಹೇಳಿದರು.








