ಎಸ್.ಬಿ.ಐ, ಎಚ್.ಡಿ.ಎಫ್.ಸಿ,ಐಸಿಐಸಿಐ – ಹಿರಿಯ ನಾಗರಿಕರಿಗಾಗಿ ವಿಶೇಷ ನಿಶ್ಚಿತ ಠೇವಣಿ ಯೋಜನೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), HDFC ಬ್ಯಾಂಕ್, ಮತ್ತು ಬ್ಯಾಂಕ್ ಆಫ್ ಬರೋಡಾ (BoB) ಹಿರಿಯ ನಾಗರಿಕರಿಗಾಗಿ ವಿಶೇಷ ನಿಶ್ಚಿತ ಠೇವಣಿ ಯೋಜನೆಯನ್ನು 30 ಸೆಪ್ಟೆಂಬರ್ 2021 ರವರೆಗೆ ವಿಸ್ತರಿಸಿದೆ. ಆದಾಗ್ಯೂ, ಹಿರಿಯ ನಾಗರಿಕರಿಗಾಗಿ ಐಸಿಐಸಿಐ ಬ್ಯಾಂಕ್ ತನ್ನ ಗೋಲ್ಡನ್ ಇಯರ್ಸ್ ಎಫ್‌ಡಿಯನ್ನು 7 ಅಕ್ಟೋಬರ್ 2021 ರವರೆಗೆ ವಿಸ್ತರಿಸಿದೆ. ಬಡ್ಡಿದರಗಳ ಕುಸಿತದ ನಡುವೆ, ಈ ಬ್ಯಾಂಕ್‌ಗಳು ಕಳೆದ ವರ್ಷ 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯೊಂದಿಗೆ ಹಿರಿಯ ನಾಗರಿಕರಿಗಾಗಿ ವಿಶೇಷ ಎಫ್‌ಡಿ ಯೋಜನೆಗಳನ್ನು ಪರಿಚಯಿಸಿವೆ.

ಎಸ್‌ಬಿಐ ವೀ ಕೇರ್ ಠೇವಣಿ ವಿಶೇಷ ಎಫ್ಡಿ ಯೋಜನೆ
ಹಿರಿಯ ನಾಗರಿಕರಿಗಾಗಿ ಎಸ್‌ಬಿಐ ವಿಶೇಷ ಎಫ್ಡಿ ಯೋಜನೆ
ಹಿರಿಯ ನಾಗರಿಕರಿಗೆ 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಹೆಚ್ಚುವರಿ 30 ಬಿಪಿಎಸ್ ಬಡ್ಡಿ ದರವನ್ನು ನೀಡಲಾಗುತ್ತದೆ.
ಪ್ರಸ್ತುತ, ಎಸ್‌ಬಿಐ 5 ವರ್ಷಗಳ ಎಫ್‌ಡಿಗಳ ಮೇಲೆ ಸಾಮಾನ್ಯ ಜನರಿಗೆ 5.4% ಬಡ್ಡಿಯನ್ನು ನೀಡುತ್ತದೆ. ಹಿರಿಯ ನಾಗರಿಕರು ವಿಶೇಷ ಎಫ್‌ಡಿ ಯೋಜನೆಯಡಿ ನಿಶ್ಚಿತ ಠೇವಣಿ ಮಾಡಿದರೆ, ಎಫ್‌ಡಿಗೆ ಅನ್ವಯವಾಗುವ ಬಡ್ಡಿದರವು ಶೇಕಡಾ 6.20 ಆಗಿರುತ್ತದೆ.
ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ಸ್ ಎಫ್ಡಿ ಯೋಜನೆ
ಹಿರಿಯ ನಾಗರಿಕರಿಗಾಗಿ ಐಸಿಐಸಿಐ ಬ್ಯಾಂಕಿನ ವಿಶೇಷ ಎಫ್ಡಿ ಯೋಜನೆ.
ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ಸ್ ಎಫ್ಡಿ ಯೋಜನೆ 80 ಬಿಪಿಎಸ್ ಹೆಚ್ಚಿನ ಬಡ್ಡಿ ದರವನ್ನು ನೀಡುತ್ತದೆ. ಐಸಿಐಸಿಐ ಬ್ಯಾಂಕಿನ ಈ ವಿಶೇಷ ಎಫ್‌ಡಿ ಯೋಜನೆಯು 6.30 ಶೇಕಡಾ ಬಡ್ಡಿಯನ್ನು ಪಡೆಯುತ್ತಿದೆ.
HDFC ಹಿರಿಯ ನಾಗರಿಕರ ಆರೈಕೆ
ಹಿರಿಯ ನಾಗರಿಕರಿಗಾಗಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ವಿಶೇಷ ಎಫ್ಡಿ ಯೋಜನೆ ಎಂದರೆ ಎಚ್‌ಡಿಎಫ್‌ಸಿ ಸೀನಿಯರ್ ಸಿಟಿಜನ್ ಕೇರ್. ಈ ಠೇವಣಿಗಳ ಮೇಲೆ ಬ್ಯಾಂಕ್ 75 ಬಿಪಿಎಸ್ ಹೆಚ್ಚಿನ ಬಡ್ಡಿ ದರವನ್ನು ನೀಡುತ್ತದೆ. ಹಿರಿಯ ನಾಗರಿಕರು ಎಚ್‌ಡಿಎಫ್‌ಸಿ ಬ್ಯಾಂಕ್ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಅಡಿಯಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡಿದರೆ, ಎಫ್‌ಡಿ ಮೇಲೆ ಅನ್ವಯವಾಗುವ ಬಡ್ಡಿ ದರವು ಶೇಕಡಾ 6.25 ಆಗಿರುತ್ತದೆ.
ಬ್ಯಾಂಕ್ ಆಫ್ ಬರೋಡಾ ವಿಶೇಷ ಎಫ್ಡಿ ಯೋಜನೆ
ಬ್ಯಾಂಕ್ ಆಫ್ ಬರೋಡಾ (BoB) ಹಿರಿಯ ನಾಗರಿಕರಿಗೆ ಈ ಠೇವಣಿಗಳ ಮೇಲೆ 100 bps ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ. ಈ ವಿಶೇಷ ಎಫ್‌ಡಿಯಲ್ಲಿ ಹಿರಿಯ ನಾಗರಿಕರಿಗೆ 6.25 ಶೇಕಡಾ ಬಡ್ಡಿದರವನ್ನು ನೀಡುತ್ತದೆ. ಇದರ ಅವಧಿ ಕೂಡ 5-10 ವರ್ಷಗಳು.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಕೊತ್ತಂಬರಿ ನೀರು ತಯಾರಿಸುವ ವಿಧಾನ ಮತ್ತು ಅದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರ ಆರೋಗ್ಯ ಪ್ರಯೋಜನಗಳು https://t.co/wozXjpmFzy
— Saaksha TV (@SaakshaTv) August 9, 2021
ಮೊಬೈಲ್ ಹಾಳಾದರೆ/ಕಳೆದು ಹೋದರೆ ಅದರಲ್ಲಿನ ಸಂಪರ್ಕ ಸಂಖ್ಯೆಯನ್ನು ಮರಳಿ ಪಡೆಯುವುದು ಹೇಗೆ? https://t.co/80Ul0v1tRk
— Saaksha TV (@SaakshaTv) August 7, 2021
ದಾಲ್ಚಿನ್ನಿ ಮತ್ತು ಅರಿಶಿನ ಹಾಲನ್ನು ಕುಡಿಯುವುದರ ಆರೋಗ್ಯ ಪ್ರಯೋಜನಗಳು https://t.co/dp3E2S9IL9
— Saaksha TV (@SaakshaTv) August 10, 2021
https://twitter.com/SaakshaTv/status/1424574361055399941?s=19
#Special #FixedDepositScheme #SeniorCitizens #SBI







