ರಾಜ್ಯ ಕಾಂಗ್ರೆಸ್ ಒಂದು ರೌಡಿ ಪಾರ್ಟಿ : ಎನ್.ರವಿಕುಮಾರ್
ಬೆಂಗಳೂರು : ರಾಜ್ಯ ಕಾಂಗ್ರೆಸ್ ಪಾರ್ಟಿ ಒಂದು ರೀತಿಯಲ್ಲಿ ರೌಡಿ ಪಾರ್ಟಿಯಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಟೀಕಿಸಿದ್ದಾರೆ.
ಡಿಕೆಶಿವಕುಮಾರ್ ಕಾಂಗ್ರೆಸ್ ಕಾರ್ಯಕರ್ತನಿಗೆ ಹೊಡೆದ ವಿಚಾರವಾಗಿ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರವಿಕುಮಾರ್, ಕರ್ನಾಟಕದಂಥ ಒಂದು ಸುಸಂಸ್ಕøತ ರಾಜ್ಯಕ್ಕೆ ರಾಹುಲ್ ಗಾಂಧಿ ಅವರು ರೌಡಿ ಕೋತ್ವಾಲ್ ರಾಮಚಂದ್ರನ ಶಿಷ್ಯನಾಗಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವುದು ದುರಂತದ ಸಂಗತಿ ಎಂದು ಕುಟುಕಿದರು.
ಇನ್ನು ಕಾಂಗ್ರೆಸ್ ಯುವ ಘಟಕದ ಯುವತಿಯೊಬ್ಬರು ತಮ್ಮ ಮೇಲೆ ಯುವ ಕಾಂಗ್ರೆಸ್ ಮುಖಂಡ ನಲಪಾಡ್ ಅವರ ಗುಂಪಿನಿಂದ ಹಲ್ಲೆ ಆಗಿದೆ ಎಂದು ದೂರಿದ್ದನ್ನು ಜನರು ಮರೆತಿಲ್ಲ. ನಿನ್ನೆ ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿಯಲ್ಲಿ ಯುವಕನೊಬ್ಬ ಡಿ.ಕೆ.ಶಿವಕುಮಾರ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಅವರಿಗೆ ಕಪಾಳಮೋಕ್ಷ ಮಾಡಿರುವುದು ಪತ್ರಿಕೆಗಳಲ್ಲಿ ಮತ್ತು ಟಿ.ವಿ. ಮಾಧ್ಯಮಗಳಲ್ಲಿ ವರದಿಯಾಗಿದೆ. ಅವರು ತಮ್ಮ ಸಿಟ್ಟನ್ನು ಸಿದ್ದರಾಮಯ್ಯ ಅವರ ಬದಲಾಗಿ ಯುವಕನ ಮೇಲೆ ತೀರಿಸಿಕೊಂಡರೇ ಎಂದು ವ್ಯಂಗ್ಯವಾಡಿದರು.









