ಗದಗ: ಲಂಡನ್ ಹೊಸ ಕೊರೊನಾ ವೈರಸ್ ಹಾಗೂ ಕರೊನಾ 2ನೇ ಅಲೆ ಬಗ್ಗೆ ರಾಜ್ಯ ಸರ್ಕಾರ ಮತ್ತೆ ತಪ್ಪು ಮಾಹಿತಿ ನೀಡುತ್ತಿದೆ. ಅಂದು ಸರ್ಕಾರಕ್ಕೆ ಮಂಗಳಾರತಿ ಆಯ್ತು. ಈಗಲೂ ಮತ್ತೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಮುಚ್ಚಿಟ್ಟುಕೊಂಡರೆ ದೊಡ್ಡ ಅನಾಹುತ ಆಗುತ್ತೆ ಎಂದು ಮಾಜಿ ಸಚಿವ ಹೆಚ್.ಕೆ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್.ಕೆ ಪಾಟೀಲ್, ಬೇರೆ ಬೇರೆ ರಾಷ್ಟ್ರಗಳಲ್ಲಿ ಕೊರೊನಾ 2ನೇ ಅಲೆ ವೇಗವಾಗಿ ಹಬ್ಬುತ್ತಿದೆ. ಹೊರ ರಾಷ್ಟ್ರಗಳಿಂದ ಆಗಮಿಸುವ ಪ್ರಯಾಣಿಕರ ಪ್ರತ್ಯೇಕ ಐಸೋಲೇಶನ್ ಅವಶ್ಯಕತೆ ಇದೆ ಎಂದರು.
ನೆದರ್‍ಲ್ಯಾಂಡ್, ಬ್ರಿಟನ್ ಸೇರಿ ಹಲವು ರಾಷ್ಟ್ರಗಳಿಂದ ಪ್ರಯಾಣಿಕರು ಆಗಮಿಸಿದ್ದಾರೆ. 12,309 ಜನ ಪ್ರಯಾಣಿಕರು ಕೊರೊನಾ ಕಾಣಿಸಿಕೊಂಡ ರಾಷ್ಟ್ರಗಳಿಂದ ಆಗಮಿಸಿದ್ದಾರೆ. ಆದ್ರೆ ಸರ್ಕಾರ 2300 ಜನ ಪ್ರಯಾಣಿಕರು ಮಾತ್ರ ಅಂತಿದೆ. ಅಂದು ಸರ್ಕಾರ ತಪ್ಪು ಅಂಕಿಸಂಖ್ಯೆ ಹೇಳಿ ನಿರ್ಲಕ್ಷ್ಯ ತೋರಿತ್ತು. ಅಂದು ಸರ್ಕಾರಕ್ಕೆ ಮಂಗಳಾರತಿ ಆಯ್ತು. ಈಗಲೂ ಮತ್ತೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಅಂತ ಕಿಡಿಕಾರಿದ್ದಾರೆ.
ವಿದೇಶದಿಂದ ಬಂದವರ ಕನಿಷ್ಠ ಸ್ಕ್ರೀನಿಂಗ್ ಕೂಡ ಮಾಡಿಲ್ಲ. ಈಗ ಹುಡುಕಿ ಆರ್‍ಟಿಪಿಸಿಆರ್ ಟೆಸ್ಟ್ ಮಾಡುವುದಾಗಿ ಹೇಳ್ತಾರೆ. ಲಕ್ಷಣಗಳು 3 ರಿಂದ 7 ದಿನಗಳಲ್ಲಿ ಕಾಣಿಸಿಕೊಳ್ಳುತ್ತೆ. ಹೀಗಾಗಿ ಹೊರ ರಾಷ್ಟ್ರಗಳಿಂದ ಬಂದ ಎಲ್ಲ ಪ್ರಯಾಣಿಕರನ್ನು ಐಸುಲೇಶನ್ ಮಾಡಿ. ಲಘುವಾಗಿ ಕಾಣಬೇಡಿ ಎಂದು ಹೆಚ್‍ಕೆಪಿ ಸರ್ಕಾರಕ್ಕೆ ಕಿವಿ ಮಾತು ಹೇಳಿದ್ದಾರೆ.
ಸರ್ಕಾರವೇ ಪುಂಡಾಟಿಕೆ ಮಾಡಿದ್ರೇ ಹೇಗೆ..!
ವಿಧಾನಪರಿಷತ್ ವಿಶೇಷ ಅಧಿವೇಶನದಲ್ಲಿ ನಡೆದ ಪ್ರತಿಯೊಂದು ಘಟನೆಯನ್ನು ರಾಜ್ಯಪಾಲರು ವೀಕ್ಷಿಸಬೇಕು. ಉಪಸಭಾಪತಿಯನ್ನು ಖುರ್ಚಿ ಮೇಲೆ ಯಾರೂ ತಂದು ಕೂರಿಸಿದ್ರು ಅನ್ನೋದು ಗಮನಿಸಬೇಕು ಎಂದು ಹೆಚ್.ಕೆ ಪಾಟೀಲ್ ಆಗ್ರಹಿಸಿದ್ದಾರೆ.
ರಾಜ್ಯಪಾಲರು ಮೂಕ ಪ್ರೇಕ್ಷಕರಾಗಬಾರದು. ಯಾವ ಕಾರಣಕ್ಕೆ ನೋಡಿ ಸುಮ್ಮನೆ ಕುಳಿತಿದ್ದಾರೆ. ಸಂಪುಟ ಸದಸ್ಯರು ಉಪಸಭಾಪತಿ ಕುರಿಸಲು ಬಂದಿದ್ರು. ಗಲಾಟೆ ಆದ್ರೂ ರಾಜ್ಯಪಾಲರು ಕ್ರಮ ಕೈಗೊಳ್ಳಲು ಆಗದಿದ್ರೆ ರಾಜ್ಯದ ಜನರಿಗೆ ಏನು ಸಂದೇಶ ಕೊಡ್ತೀರಿ ಎಂದು ಪ್ರಶ್ನಿಸಿದ್ದಾರೆ.
ಸದನದಲ್ಲಿ ಅನುಚಿತ ವರ್ತನೆ ತೋರಿದ ಸಚಿವರ ವಿರುದ್ಧ ಯಾಕೆ ಕ್ರಮಕೈಗೊಳ್ಳಬಾರದು. ವಿಧಾನ ಪರಿಷತ್ ನಲ್ಲಿ ನಡೆದ ಘಟನೆ ಬಗ್ಗೆ ಕ್ರಮ ಕೈಗೊಳ್ಳದಿದ್ರೆ ಹೇಗೆ ? ನಿಮ್ಮ ಅಧಿಕಾರ ಬಳಕೆ ಮಾಡಿಕೊಳ್ಳದಿದ್ದರೆ ಹೇಗೆ ? ಯಾಕೆ ಸುಮ್ಮನಿದ್ದೀರಿ. ಸಂವಿಧಾನದಲ್ಲಿ ನಿಮ್ಮ ಹುದ್ದೆಗೆ ನೀಡಿದ ಹಕ್ಕು ಬಳಕೆ ಮಾಡಿ ಎಂದು ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಅಂಡರ್‍ವರ್ಡ್ ಡಾನ್‍ಗಳ ಈ ರೀತಿ ವಿಧಾನಪರಿಷತ್ ನಲ್ಲಿ ನಡೆದಿದೆ. ಜನಾಡಳಿತ ಕುಸಿದು ಬೀಳುತ್ತಿದ್ದರೂ ರಾಜ್ಯಪಾಲರ ಮೌನ ನನಗೆ ತೀವ್ರ ನೋವು ತಂದಿದೆ. ರಾಜ್ಯಪಾಲರು ಸಂವಿಧಾನ ಬದ್ಧವಾಗಿ ಕ್ರಮ ಕೈಗೊಳ್ಳದಿದ್ರೆ ರಾಜ್ಯಪಾಲರಿಗೆ ದೊಡ್ಡ ಕೆಟ್ಟ ಹೆಸರು ಬರುತ್ತೆ ಎಂದು ಹುಲಕೋಟಿ ಗ್ರಾಮದಲ್ಲಿ ಮಾಜಿ ಸಚಿವ ಎಚ್ ಕೆ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel