ಸಂಡೇ ಲಾಕ್ ಡೌನ್ ಗೆ ಬೆಂಗಳೂರು ಸ್ತಬ್ಧ
ಬೆಂಗಳೂರು: ಮಹಾಮಾರಿ ಕೊರೊನಾ ತಡೆಗೆ ಕಳೆದ ರಾತ್ರಿ 8ಗಂಟೆಗೆ ಆರಂಭವಾದ ಸಂಡೇ ಲಾಕ್ ಡೌನ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗಿದೆ.
ರಾಜಧಾನಿ ಬೆಂಗಳೂರು ನಗರ ಬಹುತೇಕ ಸ್ತಬ್ದ ಗೊಂಡಿದೆ.
ಬಿಎಂಟಿಸಿ ಹಾಗೂ ಕೆಎಸ್ಆರ್ ಟಿಸಿ ಬಸ್ ಗಳು ರಸ್ತೆಗೆ ಇಳಿಯದ ಕಾರಣ ಮೆಜೆಸ್ಟಿಕ್ ಸಂಪೂರ್ಣವಾಗಿ ಖಾಲಿ ಖಾಲಿ ಯಾಗಿದೆ.
ಅಟೋ ಮತ್ತು ಕ್ಯಾಬ್ ಗಳ ಸಂಚಾರ ವಿರಳವಾಗಿದೆ.
ತುಮಕೂರು ರಸ್ತೆಯಲ್ಲಿ ವಾಹನಗಳ ಸಂಚಾರ ಕಡಿಮೆಯಾಗಿದೆ. ಹೀಗಾಗಿ ತುಮಕೂರು ರಸ್ತೆ ಖಾಲಿ ಖಾಲಿ ಎನ್ನುತ್ತಿದೆ.
ತುಮಕೂರು ರಸ್ತೆಯಲ್ಲಿರುವ ಟೋಲ್ ಬಂದ್ ಮಾಡಿದ್ದರಿಂದ ವಾಹನಗಳ ಸಂಚಾರ ವಿಲ್ಲದೆ ಬಿಕೋ ಎನ್ನುತ್ತಿದೆ.
ಅಗತ್ಯ ವಸ್ತುಗಳ ಹಾಗೂ ಸರಕು ಸಾಗಾಣಿಕೆಯ ವಾಹನಗಳ ಓಡಾಟ ಮಾಮೂಲಿನಂತಿದೆ.

ಲಾಕ್ ಡೌನ್ ಇದ್ದರೂ ಅನಗತ್ಯವಾಗಿ ಓಡಾಡುವವರಿಗೆ ಪೊಲೀಸರು ವಾರ್ನಿಂಗ್ ಮಾಡಿ ಕಳುಹಿಸುತ್ತಿದ್ದಾರೆ.
ಸಂಡೇ ಲಾಕ್ ಡೌನ್ ಗೆ ಕಲಬುರಗಿ ನಗರ ಸ್ತಬ್ಧ ವಾಗಿದೆ.
ಕೆಲ ಜಿಲ್ಲೆಗಳ ಜಿಲ್ಲಾ ಕೇಂದ್ರಗಳಲ್ಲಿ ವಾಕಿಂಗ್ ಹಾಗು ತರಕಾರಿ ಖರೀದಿ ನೆಪದಲ್ಲಿ ಜನರು ಓಡಾಡುವ ದೃಶ್ಯ ಸಾಮಾನ್ಯವಾಗಿದೆ.
ಹಾವೇರಿ ನಗರದಲ್ಲಿ ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಧರಿಸದೇ ಓಡಾಡುವರಿಗೆ ಪೊಲೀಸರು 200, 500ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡುತ್ತಿದ್ದಾರೆ








