ಬಾಬರಿ ಮಸೀದಿ ಧ್ವಂಸ ಪ್ರಕರಣ: ನ್ಯಾಯಾಂಗ ನಿಂದನೆ ಪ್ರಕರಣ ರದ್ದುಗೊಳಿಸಿದ ಸುಪ್ರೀಂ
1992 ರ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರ ಮತ್ತು ಪ್ರಮುಖ ಬಿಜೆಪಿ ನಾಯಕರು ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣಗಳನ್ನ ಸುಪ್ರೀಂ ಕೋರ್ಟ್ ಮಂಗಳವಾರ ರದ್ದು ಗೊಳಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಅಭಯ್ ಎಸ್. ಓಕಾ ಮತ್ತು ವಿಕ್ರಮ್ ನಾಥ್ ಅವರ ಪೀಠವು ವಿಸ್ತೃತ ಪೀಠದಿಂದ ತೀರ್ಪು ನೀಡಲ್ಪಟ್ಟಿದೆ ಮತ್ತು ಈ ವಿಷಯದಲ್ಲಿ ಈಗ ಏನೂ ಉಳಿದಿಲ್ಲ ಎಂದು ಹೇಳಿದೆ. ಅಯೋಧ್ಯೆ ಪ್ರಕರಣದಲ್ಲಿ 2019 ರ ತೀರ್ಪಿನ ದೃಷ್ಟಿಯಿಂದ, ಈ ವಿಷಯದಲ್ಲಿ ಅವಹೇಳನವು ಇನ್ನು ಮುಂದೆ ಉಳಿದಿಲ್ಲ ಎಂದು ಎಂದು ತೆರೆ ಎಳೆದಿದೆ.
ಸತ್ತ ಕುದುರೆಗೆ ಥಳಿಸುವುದರಲ್ಲಿ ಅರ್ಥವಿಲ್ಲ ಎಂದು ಪೀಠವು ಹೇಳಿದೆ, ಏಕೆಂದರೆ ಈಗಾಗಲೇ ಐವರು ನ್ಯಾಯಾಧೀಶರ ಪೀಠವು ದೊಡ್ಡ ಸಮಸ್ಯೆಯನ್ನ ನಿರ್ಧರಿಸಿದೆ ಮತ್ತು ಅರ್ಜಿದಾರರಾದ ಅಸ್ಲಾಮ್ ಭೂರೆ ಸಾವನ್ನಪ್ಪಿದ್ದಾರೆ, ಆದ್ದರಿಂದ ಪ್ರತಿವಾದಿಗಳ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿಯನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದರು.
2010 ರಲ್ಲಿ ನಿಧನರಾದ ಮೊಹಮ್ಮದ್ ಅಸ್ಲಾಮ್ ಅಲಿಯಾಸ್ ಭೂರೆ ಅವರು ಸಲ್ಲಿಸಿದ ಅರ್ಜಿ ರದ್ದುಗೊಂಡ ಕಾರಣ ಉಮಾಭಾರತಿ, ವಿನಯ್ ಕಟಿಯಾರ್ ಮತ್ತು ಇತರರು ಸೇರಿದಂತೆ ಬಿಜೆಪಿ ಇತರ ನಾಯಕರಿಗೆ ಇದರಿಂದ ರಿಲೀಫ್ ಸಿಕ್ಕಿದೆ. ನವೆಂಬರ್ 2019 ರಲ್ಲಿ ಐವರು ನ್ಯಾಯಾಧೀಶರ ಪೀಠವು ಅಯೋಧ್ಯೆ ಪ್ರಕರಣದ ವಿವಾದಕ್ಕೆ ವಿರಾಮ ಇಟ್ಟಿತ್ತು.








