ಮೋದಿ ಭದ್ರತಾ ಲೋಪ: ಪಂಜಾಬ್ ಸರ್ಕಾರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ
ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆ ಮತ್ತು ಚಲನವಲನಕ್ಕೆ ಸಂಬಂಧಿಸಿದಂತೆ ಪಂಜಾಬ್ ಸರ್ಕಾರದ ಕಡೆಯಿಂದ “ಗಂಭೀರ ಮತ್ತು ಉದ್ದೇಶಪೂರ್ವಕ ಲೋಪ” ಜರುಗಿದೆ ಎಂದು ಆರೋಪಿಸಿ ಸುಪ್ರಿಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ಮೊಕದ್ದಮೆಯನ್ನು (ಪಿಐಎಲ್) ಶುಕ್ರವಾರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಪಂಜಾಂಬ್ ನಲ್ಲಿ ಹಲವು ಯೋಜನೆಗಳನ್ನ ಉದ್ಘಾಟಿಸಲು ತೆರಳುತ್ತಿದ್ದಾಗ, ಫ್ಲೈಓವರ್ ಮೇಲೆ ಪ್ರತಿಭಟನಾಕಾರರಿಂದಾಗಿ ರಸ್ತೆ ತಡೆಗೆ ಸಿಲುಕಿಕೊಂಡಿದ್ದರು. ಇದು ಪ್ರಧಾನಿ ಭದ್ರತೆ ಲೋಪದ ಕುರಿತಂತೆ ಪಂಜಾಬ್ ಸರ್ಕಾರದ ವಿರುದ್ದ ಸಾಕಷ್ಟು ಆಕ್ರೊಶ ವ್ಯಕ್ತವಾಗಿದೆ.
ಹಿರಿಯ ವಕೀಲ ಮಣಿಂದರ್ ಸಿಂಗ್ ಅವರು ತುರ್ತು ವಿಚಾರಣೆಯನ್ನು ಕೋರಿ ನ್ಯಾಯಮೂರ್ತಿ ರಮಣ ಅವರ ಮುಂದೆ ವಿಷಯ ಪ್ರಸ್ತಾಪಿಸಿದ್ದರು.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ವಿ ರಮಣ ನೇತೃತ್ವದ ಪೀಠ, ಸುಪ್ರೀಂ ಕೋರ್ಟ್‌ನಲ್ಲಿ ಪಂಜಾಬ್ ಸರ್ಕಾರದ ಸ್ಥಾಯಿ ವಕೀಲರಿಗೆ ಅರ್ಜಿಯ ಪ್ರತಿಯನ್ನು ಸಲ್ಲಿಸಲು ಅರ್ಜಿದಾರರ ಸಂಘಟನೆಯಾದ ವಕೀಲರಿಗೆ ಕೇಳಿದೆ ವಿವರವಾದ ಪಿಐಎಲ್ ಅನ್ನು ಪಟ್ಟಿ ಮಾಡಿದೆ.