ಕಿರಿಕ್ ಹುಡುಗಿ ಸಂಯುಕ್ತಾ ಕನಸು ಕೊನೆಗೂ ನನಸು
2016 ರಲ್ಲಿ ರಿಲೀಸ್ ಆದ ಸ್ಯಾಂಡಲ್ ಹುಡ್ ಚಿತ್ರ ಕಿರಿಕ್ ಪಾರ್ಟಿ ಮೂಲಕ ಛಾಪು ಮೂಡಿಸಿದ್ದ ನಟಿ, ಸಂಯುಕ್ತಾ ಹೆಗಡೆ. ಸಂಯುಕ್ತಾ ಈ ಪರಭಾಷೆಗಳಲ್ಲಿ ಮಿಂಚುತ್ತಿದ್ದು ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯೂಸಿ ಆಗಿದ್ದಾರೆ.
ನಟಿ ಸಂಯುಕ್ತಾ ನಟನೆಯ ತಮಿಳು ಚಿತ್ರ ಥೀಲ್ ಇದೆ ಜನವರಿ 14 ರಂದು ಬಿಡುಗಡೆಯಾಗಿದೆ. ಇದರ ಬೆನ್ನಲ್ಲೆ ವೀಡಿಯೋ ಸಾಂಗ್ ಒಂದು ರಿಲೀಸ್ ಆಗಿದ್ದು, ಈ ಕುರಿತು ಸಂಯುಕ್ತ ಖುಷಿ ಹಂಚಿಕೊಂಡಿದ್ದಾರೆ.
ನಟ ಮತ್ತು ನಿರ್ದೇಶಕ ಪ್ರಭುದೇವ ಅವರ ಜೊತೆ ಹೆಜ್ಜೆ ಹಾಕಬೇಕು ಎನ್ನುವುದು ನನ್ನ ಬಹುದಿನದ ಕನಸಾಗಿತ್ತು. ಈಗ ಅವಕಾಶ ಸಿಕ್ಕಿರೋದು ನನಗೆ ಹೆಮ್ಮೆ ಅನಿಸುತ್ತಿದೆ. ಇದು ಕನಸು ನನಸಾದ ಕ್ಷಣ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು 287 ಒಮಿಕ್ರಾನ್ ಕೇಸ್ ಪತ್ತೆ







