ಲಕ್ನೋ : ವಿದ್ಯಾರ್ಥಿಗಳಿಗೆ ಶಿಸ್ತು ಹೇಳಿಕೊಡುವ ನೆಪದಲ್ಲಿ ವಿದ್ಯಾರ್ಥಿಗಳ (Students) ಕೂದಲನ್ನು ಶಿಕ್ಷಕರೊಬ್ಬರು ಕತ್ತರಿಸಿರುವ ಘಟನೆಯೊಂದು ನಡೆದಿದೆ.
ಕೂದಲನ್ನು (Hair) ತಾನೇ ಕತ್ತರಿಸಿದ ಶಿಕ್ಷಕಿಯನ್ನು (Teacher) ಶಾಲೆಯಿಂದ ವಜಾಗೊಳಿಸಿರುವ ಘಟನೆ ನೋಯ್ಡಾದ (Noida) ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ. ಅಲ್ಲಿಯ ಸೆಕ್ಟರ್ 168ರಲ್ಲಿನ ಶಾಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ಶಾಲೆ ಸಿಬ್ಬಂದಿ ಸುಷ್ಮಾ ಎಂಬುವವರೇ ಈ ರೀತಿ ವಿದ್ಯಾರ್ಥಿಗಳ ಕೂದಲು ಕತ್ತರಿಸಿದ್ದಾರೆ. ಇವರು ಕೆಲವು ದಿನಗಳ ಹಿಂದೆ ಕಳೆದ ಹಲವು ದಿನಗಳಿಂದ ವಿದ್ಯಾರ್ಥಿಗಳಿಗೆ ತಮ್ಮ ಕೂದಲನ್ನು ಟ್ರಿಮ್ ಮಾಡಿಕೊಂಡು ಬರುವಂತೆ ಹೇಳಿದ್ದರು. ಆದರೆ ಯಾರೂ ಶಿಕ್ಷಕಿಯ ಮಾತು ಕೇಳದ ಹಿನ್ನೆಲೆಯಲ್ಲಿ ಕೂದಲನ್ನು ಕತ್ತಿರಿಸಿದ್ದಾರೆ. ಹೀಗೆ 15 ವಿದ್ಯಾರ್ಥಿಗಳ ಕೂದಲನ್ನು ಕತ್ತಿರಿಸಿದ್ದಾರೆ.
ಘಟನೆ ಬೆಳಕಿಗೆ ಬರುತ್ತಲೇ ವಿದ್ಯಾರ್ಥಿಗಳ ಪೋಷಕರು ಶಾಲೆಗೆ ಬಂದು ಪ್ರತಿಭಟನೆ ನಡೆಸಿದ್ದಾರೆ. ನಂತರ ಶಿಕ್ಷಕಿಯನ್ನು ಆಡಳಿತ ಮಂಡಳಿ ವಜಾಗೊಳಿಸಿದೆ.








