ತುಮಕೂರು: ಶಾಲೆಗೆ ಹೋಗಿ ಮರಳಿ ಬರುತ್ತಿದ್ದ ಶಿಕ್ಷಕಿಯ ಬೈಕ್ ಅಡ್ಡಗಟ್ಟಿ ದುಷ್ಕರ್ಮಿಗಳು ದೋಚಿರುವ ಘಟನೆ ನಡೆದಿದೆ.
ಈ ಘಟನೆ ತುಮಕೂರು (Tumakuru) ಜಿಲ್ಲೆ ತಿಪಟೂರು (Tiptur) ತಾಲೂಕಿನ ಮರಿಸಿದ್ದಯ್ಯನ ಪಾಳ್ಯದ ಹತ್ತಿರ ನಡೆದಿದೆ. ಮರಿಸಿದ್ದಯ್ಯನ ಪಾಳ್ಯದ ಪ್ರಾಥಮಿಕ ಶಾಲೆ ಶಿಕ್ಷಕಿ (Teacher) ರೇಖಾ ಎಂಬುವವರು ಶಾಲೆಯಲ್ಲಿ ಕನಕದಾಸ ಜಯಂತಿ ಆಚರಿಸಿ ಮರಳಿ ಮನೆಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ದ್ವಿ ಚಕ್ರ ವಾಹನವನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಸರ (Chain) ಎಗರಿಸಿದ್ದಾರೆ. ಬುಲೆಟ್‌ನಲ್ಲಿ ಬಂದ ಕಳ್ಳರು 40 ಹಾಗೂ 20 ಗ್ರಾಂ ತೂಕದ ಎರಡು ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಆಗ ಶಿಕ್ಷಕಿ ಬುಲೆಟ್ ವಿಡಿಯೋ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದನ್ನು ಅರಿತ ಖದೀಮರು, ಮೊಬೈಲ್ ಕಿತ್ತು ಪರಾರಿಯಾಗಿದ್ದಾರೆ.
ಘಟನೆಯಲ್ಲಿ ಶಿಕ್ಷಕಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








