ADVERTISEMENT
Thursday, March 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಒಬ್ಬ ಆಫ್ ಸ್ಪಿನ್ನರ್ ಆಕ್ರಮಣಕಾರಿ ಬ್ಯಾಟ್ಸ್‍ಮೆನ್ ಆಗಿದ್ದೇಗೆ..? ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ಜರ್ನಿಯ ರೋಚಕ ಕಹಾನಿ..!

The Thrilling Test Journey of Rohit Sharma!

Shwetha by Shwetha
May 8, 2025
in Newsbeat, Sports, ಕ್ರಿಕೆಟ್, ಕ್ರೀಡೆ
Share on FacebookShare on TwitterShare on WhatsappShare on Telegram

ಒಬ್ಬ ಆಫ್ ಸ್ಪಿನ್ನರ್ ಆಕ್ರಮಣಕಾರಿ ಬ್ಯಾಟ್ಸ್‍ಮೆನ್ ಆಗಿದ್ದೇಗೆ..? ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ಜರ್ನಿಯ ರೋಚಕ ಕಹಾನಿ..!

ನನ್ನ ಬದುಕು ತುಂಬಾ ಸರಳವಾಗಿದೆ. ಎಲ್ಲವೂ ವಿಧಿ ಬರಹ. ನಾನು ಏನೇ ಮಾಡಿದ್ರೂ ನನಗೆ ಮಾತ್ರ ಸಿಗುತ್ತದೆ. ಜಗತ್ತು ನನ್ನ ಬಗ್ಗೆ ಏನು ಯೋಚಿಸುತ್ತದೆ.. ಏನನ್ನು ನಿರೀಕ್ಷೆ ಮಾಡುತ್ತದೆ.. ಏನು ಹೇಳುತ್ತದೆ ಎಂಬುದು ನನಗೆ ಮುಖ್ಯವಲ್ಲ. ಯಾಕಂದ್ರೆ ಅದು ನನ್ನ ಬದುಕಿನ ಭಾಗವಲ್ಲ. ನಾನು ಏನು ಎಂಬುದು ನನಗೆ ಮಾತ್ರ ಗೊತ್ತು.. ಬದುಕಿನ ಏರಿಳಿತಗಳನ್ನು ಹೇಗೆ ನಿಭಾಯಿಸಿದ್ದೇನೆ ಎಂಬುದು ಯಾರಿಗೂ ತಿಳಿದಿಲ್ಲ. ನಾನು ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದಿಲ್ಲ. ನಾನು ಏನು ಮಾಡಿದ್ದೇನೋ ಅದರಲ್ಲಿ ಖುಷಿ ಇದೆ. ಇದು ರೋಹಿತ್ ಶರ್ಮಾ ಅವರ ಬದುಕಿನ ಸೂತ್ರಗಳು.
ಹೌದು, ಒಬ್ಬ ಮಧ್ಯಮ ವೇಗಿಯಾಗಿದ್ದ ಕಪಿಲ್ ದೇವ್ ಆಲ್‍ರೌಂಡರ್ ಆಗಿ, 1983ರ ವಿಶ್ವಕಪ್‍ನಲ್ಲಿ ಚರಿತ್ರೆ ಸೃಷ್ಟಿಸಿದ್ದರು. ಒಬ್ಬ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಕ್ಯಾಪ್ಟನ್ ಆಗಿ ಮೂರು ಐಸಿಸಿ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದ್ದರು. ಅದೇ ರೀತಿ ಒಬ್ಬ ಆಫ್ ಸಿನ್ನರ್ ಆಗಿದ್ದ ರೋಹಿತ್ ಶರ್ಮಾ ಬ್ಯಾಟ್ಸ್ ಮೆನ್ ಆಗಿ ಎರಡು ಐಸಿಸಿ ಟ್ರೋಪಿ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದರು.
saakshatv.com
ಹೌದು, ನಿರೀಕ್ಷೆಯಂತೆ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ. ಇದರಲ್ಲಿ ಅಚ್ಚರಿ ಏನಿಲ್ಲ. ಆಸ್ಟ್ರೇಲಿಯಾ ಪ್ರವಾಸದಲ್ಲಿ ನೀರಸ ಪ್ರದರ್ಶನ ನೀಡಿದ್ದ ರೋಹಿತ್ ಅವರ ಟೆಸ್ಟ್ ಕ್ರಿಕೆಟ್ ಬದುಕು ತೂಗೂಯ್ಯಾಲೆಯಲ್ಲಿತ್ತು. ಹೀಗಾಗಿ ತನ್ನ ನಿರ್ಧಾರವನ್ನು ಪ್ರಕಟಿಸಿದ್ದಾರೆ.

Related posts

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

March 12, 2026
ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

March 12, 2026

ಅಂದ ಹಾಗೇ ಆಸ್ಟ್ರೇಲಿಯಾ ಪ್ರವಾಸ ಟೀಮ್ ಇಂಡಿಯಾದ ಹಲವು ಘಟಾನುಘಟಿ ಆಟಗಾರರ ಕ್ರಿಕೆಟ್ ಬದುಕನ್ನು ತಿಂದು ಹಾಕಿದೆ. ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಮಹೇಂದ್ರ ಸಿಂಗ್ ಧೋನಿ, ಅಷ್ಟೇ ಯಾಕೆ ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್ ತೆಂಡುಲ್ಕರ್ ಕ್ರಿಕೆಟ್ ಬದುಕಿಗೂ ಕಂಟಕವಾಗಿ ಪರಿಣಮಿಸಿತ್ತು. ಇದೀಗ ಈ ಸಾಲಿಗೆ ರೋಹಿತ್ ಶರ್ಮಾ ಕೂಡ ಸೇರಿಕೊಂಡಿದ್ದಾರೆ.

ಅಷ್ಟಕ್ಕೂ ರೋಹಿತ್ ಶರ್ಮಾ ಟಿ-20 ಮತ್ತು ಏಕದಿನ ಕ್ರಿಕೆಟ್‍ನಲ್ಲಿ ಮಾಡಿರುವ ಅದ್ಭುತ ಸಾಧನೆಯಂತೆ ಟೆಸ್ಟ್ ಕ್ರಿಕೆಟ್‍ನಲ್ಲಿ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಿಲ್ಲ. ಒಂದು ರೀತಿಯಲ್ಲಿ ಟೆಸ್ಟ್ ಕ್ರಿಕೆಟ್‍ಗೆ ರೋಹಿತ್ ಶರ್ಮಾಗೆ ಆಗಿ ಬರುತ್ತಿರಲಿಲ್ಲ. 2006ರಲ್ಲಿ ಏಕದಿನ ಕ್ರಿಕೆಟ್‍ಗೆ ಎಂಟ್ರಿ ಕೊಟ್ಟ ರೋಹಿತ್ ಶರ್ಮಾ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು (2013)ಆಡಲು ಏಳು ವರ್ಷ ಕಾಯಬೇಕಾಯ್ತು. ಅದಕ್ಕೆ ಬಲವಾದ ಕಾರಣ ಸೆಹ್ವಾಗ್, ಗಂಭೀರ್, ರಾಹುಲ್, ಗಂಗೂಲಿ, ಸಚಿನ್, ಲಕ್ಷ್ಮಣ್ ನಂತ ಅಪ್ರತಿಮ ಆಟಗಾರರು ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಸಿಮೆಂಟ್‍ನಂತೆ ಭದ್ರಪಡಿಸಿಕೊಂಡಿದ್ದರು. ಇವರೆಲ್ಲರು ತೆರೆಮರೆಗೆ ಸರಿದ ನಂತರವೇ ರೋಹಿತ್‍ನಂತಹ ಪ್ರತಿಭೆಗಳಿಗೆ ಅವಕಾಶ ಸಿಕ್ಕಿರೋದು. ಈ ಪೈಕಿ ವಿರಾಟ್ ಕೊಹ್ಲಿ ಹೇಗೋ ರೋಹಿತ್‍ಗಿಂತ ಮುಂಚೆಯೇ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು.
ಹಾಗೇ ನೋಡಿದ್ರೆ ರೋಹಿತ್ ಶರ್ಮಾ ಅವರ ಕ್ರಿಕೆಟ್ ಜರ್ನಿಯೇ ಒಂದು ರೋಚಕ ಅಧ್ಯಾಯ. ಕೆಲವರು ಅನ್ನಬಹುದು.. ರೋಹಿತ್ ಟ್ಯಾಲೆಂಟ್ ಗಾಡ್ ಗಿಫ್ಟ್ ಅಂತ.. ಇನ್ನು ಕೆಲವರು ಅನ್ನಬಹುದು ರೋಹಿತ್ ಸೋಮಾರಿ ಅಂತ. ಯಾರು ಏನೇ ಅನ್ನಲಿ.. ರೋಹಿತ್ ಒಬ್ಬ ಕ್ರಿಕೆಟಿಗನಾಗಿ ರೂಪುಗೊಂಡಿದ್ದು ಅವರ ಶ್ರಮದಿಂದ ಎಂಬುದರಲ್ಲಿ ಎರಡು ಮಾತಿಲ್ಲ. ಇಲ್ಲದೆ ಇದ್ರೆ ಒಬ್ಬ ಮಾಮೂಲಿ ಹುಡುಗ ತನ್ನ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮೆನ್ ಆಗಿ, ಅಪ್ರತಿಮ ನಾಯಕನಾಗಿ ಹೊರಹೊಮ್ಮಿರುವುದು ಅಪ್ರತಿಮವೇ ಸರಿ.
ಹೌದು, ನೀವು ನಂಬುತ್ತಿರೋ ಬಿಡ್ತಿರೋ.. 17ನೇ ವಯೋಮಿತಿಯ ಟೂರ್ನಿ ಆಡುತ್ತಿದ್ದಾಗ ರೋಹಿತ್ ಶರ್ಮಾ ಆಫ್ ಸ್ಪಿನ್ನರ್ ಆಗಿದ್ದರು. ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಬಹುಶಃ 2004-2005ರಲ್ಲಿ ಅನ್ಸುತ್ತೆ. ಶ್ರೀಲಂಕಾ ವಿರುದ್ಧದ ಪಂದ್ಯವೊಂದರಲ್ಲಿ ರೋಹಿತ್ ಶರ್ಮಾ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ನಂತರ ಅವರಿಗೆ ಚೆಂಡಿನ ಮೇಲೆ ಗ್ರಿಪ್ ಹಿಡಿಯಲು ಸಾಧ್ಯವಾಗಲಿಲ್ಲ. ಆಗ ಅನಿವಾರ್ಯವಾಗಿ ಬ್ಯಾಟಿಂಗ್ ಕಡೆಗೆ ಗಮನ ಹರಿಸಬೇಕಾಯ್ತು. ಅದಕ್ಕೆ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಬಳಿಕ ನಾಲ್ಕು – ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ರೋಹಿತ್ ಶರ್ಮಾ ಟೀಮ್ ಇಂಡಿಯಾದ ಆಗಿನ ನಾಯಕ ರಾಹುಲ್ ದ್ರಾವಿಡ್ ಕಣ್ಣಿಗೆ ಬಿದ್ರು. ರಾಹುಲ್ ದ್ರಾವಿಡ್ ನಾಯಕತ್ವದಲ್ಲೇ ರೋಹಿತ್ ಶರ್ಮಾ ಟೀಮ್ ಇಂಡಿಯಾದ ಪರ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದ್ದರು. ನಂತರ ಮಹೇಂದ್ರ ಸಿಂಗ್ ಧೋನಿ ಅವರು ರೋಹಿತ್ ಶರ್ಮಾಗೆ ಆರಂಭಿಕನಾಗಿ ಬಡ್ತಿ ನೀಡಿದ್ದರು. ನಂತರ ಹಿಂತಿರುಗಿ ನೋಡಲೇ ಇಲ್ಲ. ಆದ್ರೆ ಟಿ-20, ಏಕದಿನ ಕ್ರಿಕೆಟ್‍ನಲ್ಲಿ ರನ್ ಕೊಳ್ಳೆ ಹೊಡೆಯುತ್ತಿದ್ದ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‍ನಲ್ಲಿ ಪ್ರಬುದ್ಧ, ಪರಿಪಕ್ವ ಕ್ರಿಕೆಟಿನಾಗಿ ಹೊರಹೊಮ್ಮಲಿಲ್ಲ. ಅದಕ್ಕಾಗಿ ರೋಹಿತ್ ಶರ್ಮಾಗೆ ಬೇಸರವೂ ಇಲ್ಲ. 67 ಟೆಸ್ಟ್ ಪಂದ್ಯಗಳಲ್ಲಿ 4301 ರನ್ ಹಾಗೂ 12 ಶತಕ- 18 ಅರ್ಧಶತಕಗಳನ್ನು ಸಿಡಿಸಿದ್ದಾರೆ. ತನ್ನ ಟೆಸ್ಟ್ ಕ್ರಿಕೆಟ್‍ನ ಏರಿಳಿತಗಳ ಬಗ್ಗೆ ರೋಹಿತ್ ಶರ್ಮಾ ವಿಮರ್ಶೆ ಮಾಡಲು ಬಯಸುವುದಿಲ್ಲ. 12 ವರ್ಷಗಳ ಟೆಸ್ಟ್ ಕ್ರಿಕೆಟ್‍ನಲ್ಲಿ ಮಾಡಿರುವ ಸಾಧನೆಯಲ್ಲಿ ರೋಹಿತ್ ಶರ್ಮಾಗೆ ಸಂತೃಪ್ತಿ ಇದೆ. ಯಾಕಂದ್ರೆ ರೋಹಿತ್‍ಗೆ ಎಲ್ಲವೂ ಬಯಸದೆ ಬಂದ ಅವಕಾಶಗಳು. ಆದ್ರೆ ಈ ಅವಕಾಶಗಳನ್ನು ಬಳಸಿಕೊಂಡು ತನ್ನನ್ನು ತಾನು ರೂಪಿಸಿಕೊಂಡ ರೀತಿಗೆ ಇಡೀ ಕ್ರಿಕೆಟ್ ಜಗತ್ತು ಸಲಾಂ ಅನ್ನುತ್ತದೆ.

ಸನತ್ ರೈ

ShareTweetSendShare
Join us on:

Related Posts

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

by Shwetha
March 12, 2026
0

ಭಾರತೀಯ ಜನತಾ ಪಾರ್ಟಿ ಉತ್ತರ ಪ್ರದೇಶದಲ್ಲಿ ಸತತ ಮೂರನೇ ಅವಧಿಗೆ ಅಧಿಕಾರವನ್ನು ಮರಳಿ ಪಡೆಯಲು ಹೊಸ ರಾಜಕೀಯ ತಂತ್ರವನ್ನು ರೂಪಿಸಿದೆ. ಈ ತಂತ್ರಕ್ಕೆ ಆರ್‌ಎಸ್‌ಎಸ್ ಸಹ ಒಪ್ಪಿಗೆ...

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

by Shwetha
March 12, 2026
0

ಮಾರ್ಚ್ 28ರಿಂದ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿ ಮುಂದೂಡಲಾಗುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿ ಮತ್ತು ಅದರ ಪರಿಣಾಮಗಳಿಂದ ಹಲವು ವ್ಯವಸ್ಥಾತ್ಮಕ ಸಮಸ್ಯೆಗಳು...

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ  ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

NCERT ಪಠ್ಯಪುಸ್ತಕಗಳ ಸಮಗ್ರ ಪರಿಶೀಲನೆ: ಸುಪ್ರೀಂ ಕೋರ್ಟ್ ಸೂಚನೆ

by Shwetha
March 12, 2026
0

ಸುಪ್ರೀಂ ಕೋರ್ಟ್ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ವಿವಾದದ ಹಿನ್ನೆಲೆಯಲ್ಲಿ ಮಹತ್ವದ ಸೂಚನೆ ನೀಡಿದೆ. NCERT ಪ್ರಕಟಿಸಿರುವ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ವಿಷಯಕ್ಕೆ...

ಇರಾನ್ ಬೆದರಿಕೆ ನಡುವೆಯೂ ಮುಂಬೈ ತಲುಪಿದ ತೈಲ ಟ್ಯಾಂಕರ್: ಜಾಗತಿಕ ಮಟ್ಟದಲ್ಲಿ ಭಾರತದ ದರ್ಬಾರ್ ಶುರು!

ಇರಾನ್ ಬೆದರಿಕೆ ನಡುವೆಯೂ ಮುಂಬೈ ತಲುಪಿದ ತೈಲ ಟ್ಯಾಂಕರ್: ಜಾಗತಿಕ ಮಟ್ಟದಲ್ಲಿ ಭಾರತದ ದರ್ಬಾರ್ ಶುರು!

by Shwetha
March 12, 2026
0

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡಗಳು ಕವಿದಿರುವ ಪ್ರಸ್ತುತ ಸಂದರ್ಭದಲ್ಲಿ, ಇಡೀ ವಿಶ್ವದ ಜೀವನಾಡಿಯಾಗಿರುವ ತೈಲ ಪೂರೈಕೆ ಮಾರ್ಗ 'ಹಾರ್ಮುಜ್ ಜಲಸಂಧಿ' ಬಹುತೇಕ ಸ್ತಬ್ಧಗೊಂಡಿದೆ. ಇರಾನ್ ನೀಡಿದ್ದ ನೇರ...

ಗ್ಯಾಸ್ ಕೊರತೆ ಪರಿಣಾಮ: ಬೆಂಗಳೂರಿನ ಹೋಟೆಲ್‌ಗಳಲ್ಲಿ ಕೆಲವು ತಿಂಡಿಗಳಿಗೆ ತಾತ್ಕಾಲಿಕ ಬಂದ್

ಗ್ಯಾಸ್ ಕೊರತೆ ಪರಿಣಾಮ: ಬೆಂಗಳೂರಿನ ಹೋಟೆಲ್‌ಗಳಲ್ಲಿ ಕೆಲವು ತಿಂಡಿಗಳಿಗೆ ತಾತ್ಕಾಲಿಕ ಬಂದ್

by Shwetha
March 12, 2026
0

ಬೆಂಗಳೂರು ನಗರದಲ್ಲಿನ ಹೋಟೆಲ್‌ಗಳಲ್ಲಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿರುವ ಹಿನ್ನೆಲೆ ಕೆಲವು ತಿಂಡಿಗಳನ್ನು ತಾತ್ಕಾಲಿಕವಾಗಿ ತಯಾರಿಸದಂತೆ ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ. ವಿಶೇಷವಾಗಿ ಹೆಚ್ಚು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram