ಹುಲಿ ಇನ್ನೂ ಜೀವಂತವಾಗಿದೆ – ಜ್ಯೋತಿರಾದಿತ್ಯ ಸಿಂಧಿಯಾ ಸವಾಲು
ಭೂಪಾಲ್, ಜುಲೈ 3: ಬಿಜೆಪಿ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ, ಕಾಂಗ್ರೆಸ್ ನಾಯಕರಾದ ದಿಗ್ವಿಜಯ್ ಸಿಂಗ್ ಮತ್ತು ಕಮಲನಾಥ್ ಅವರಿಗೆ ‘ಹುಲಿ ಇನ್ನೂ ಜೀವಂತವಾಗಿದೆ’ ಎಂದು ಸವಾಲು ಹಾಕಿದರು.
ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾನ್ ಸರ್ಕಾರ ತನ್ನ ಸಂಪುಟವನ್ನು ಜುಲೈ 2 ರ ಗುರುವಾರ ವಿಸ್ತರಣೆ ಮಾಡಿದೆ. ಈ ವಿಸ್ತರಣೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದ ಸಿಂಧಿಯಾ ಪರ ಮುಖಂಡರಿಗೂ ಸ್ಥಾನ ನೀಡಲಾಗಿದೆ. ಕ್ಯಾಬಿನೆಟ್ ವಿಸ್ತರಣೆಯ ನಂತರ ಪಕ್ಷದ ಮುಖಂಡರು ಮತ್ತು ಪದಾಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ರಾಜ್ಯಸಭಾ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಮಲ್ ನಾಥ್ ಮತ್ತು ದಿಗ್ವಿಜಯ್ ಸಿಂಗ್ ಅವರಿಗೆ ‘ಹುಲಿ ಇನ್ನೂ ಜೀವಂತವಾಗಿದೆ’ ಎಂದು ಸವಾಲು ಹಾಕಿದರು.
ತಮ್ಮ ಭಾಷಣದಲ್ಲಿ, ಸಿಂಧಿಯಾ ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಮತ್ತು ಹಿರಿಯ ಕಾಂಗ್ರೆಸ್ ನಾಯಕರಾದ ಕಮಲ್ ನಾಥ್ ಮತ್ತು ದಿಗ್ವಿಜ್ ಸಿಂಗ್ ಅವರಿಗೆ ಸವಾಲು ಹಾಕಿದರು, “ನಾನು ಅವರಿಬ್ಬರನ್ನೂ ಹೇಳಲು ಬಯಸುತ್ತೇನೆ. ಕಮಲ್ ನಾಥ್ ಜಿ ಮತ್ತು ದಿಗ್ವಿಜಯ್ ಸಿಂಗ್ ಜಿ, ನಿಮ್ಮಿಬ್ಬರಿಂದ ನನಗೆ ಯಾವುದೇ ಪ್ರಮಾಣ ಪತ್ರದ ಅಗತ್ಯವಿಲ್ಲ, ಕಳೆದ 15 ತಿಂಗಳಲ್ಲಿ ನೀವು ರಾಜ್ಯವನ್ನು ಯಾವ ರೀತಿಯಲ್ಲಿ ಕೊಳ್ಳೆ ಹೊಡೆದಿದ್ದಾರೆ ಎಂಬ ಬಗ್ಗೆ ಜನರಿಗೆ ತಿಳಿದಿದೆ. ಮಧ್ಯ ಪ್ರದೇಶದ ಜನತೆಗೆ ನೀವು ನೀಡಿರುವ ಭರವಸೆಯನ್ನು ಎಷ್ಟು ಈಡೇರಿಸಿದ್ದೀರಿ ಎಂದು ಜನ ಪರಿಶೀಲನೆ ಮಾಡಲಿದ್ದಾರೆ, ನಾನು ಬೇರೆ ಏನು ಮಾತನಾಡುವುದಿಲ್ಲ ಟೈಗರ್ ಅಭಿ ಜಿಂದಾ ಹೈ ಎಂದು ಮಾತ್ರ ಹೇಳುತ್ತೇನೆ ಎಂದಿದ್ದಾರೆ.
ಕ್ಯಾಬಿನೆಟ್ ನಾಯಕರ ತಂಡವಲ್ಲ ಆದರೆ ಅದು ಜನರ ತಂಡವಾಗಿದೆ ಮತ್ತು ಅವರಿಗೆ ಸೇವೆ ಸಲ್ಲಿಸುತ್ತದೆ. ಮುಂದಿನ ದಿನಗಳಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಕೊರೋನಾ ಸೋಂಕಿನ ವಿರುದ್ಧ ಹೋರಾಡಲಿದೆ ಎಂದು ಸಿಂಧಿಯಾ ಈ ಸಂದರ್ಭದಲ್ಲಿ ಹೇಳಿದರು.