ಕೊರೊನಾ ಹೆಸರು ಕೇಳಿದ್ರೇನೆ ಇಡೀ ವಿಶ್ವದ ಜನ ಕನಸಲ್ಲೂ ಬೆಚ್ಚಿ ಬೀಳುವ ಪರಿಸ್ಥಿತಿ ಇದೆ. ಮನುಷ್ಯ ಮನುಷ್ಯನನ್ನ ಕಂಡರೆ ಹೆದರುವಂತಾಗಿದೆ. ಈ ಸೋಂಕು ಎಲ್ಲಿಂದ ಹೇಗೆ ಯಾವ ರೀತಿ ಹರಡುತ್ತಿದೆ ಎಂಬುದೇ ತಳಿಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ವೈರಸ್ ಗಾಳಿಯ ಮುಖಾಂತರವೂ ಹರಡುತ್ತದೆ ಎಂಬುದನ್ನ WHO ಕೂಡ ಒಪ್ಪಿದ್ದು ಜನರ ಆತಂಕವನ್ನ ಇಮ್ಮಡಿಗೊಳಿಸಿತ್ತು. ಇದೀಗ ಅಮೇರಿಕಾದ ಮೆಸ್ಯಾಚುಸೆಟ್ಸ್ನ ಅಧ್ಯಾಪಕರು ಕೊರೊನಾಗೆ ಸಂಬAಧಿಸಿ ನೀಡಿರುವ ವರದಿ ಇದೀಗ ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ. ಈ ವರದಿ ಅನ್ವಯ ಕೊರೊನಾ ಸೋಂಕು ಹರಡಲು ಕೇವಲ ೫ ರಿಂದ ೫೦ ನಿಮಿಷಗಳು ಸಾಕೆಂಬುದು ತಜ್ಞರ ಅಭಿಪ್ರಾಯವಾಗಿದೆ. ಸೋಂಕಿತ ಒಮ್ಮೆ ಕೆಮ್ಮಿದರೇ ೩೦೦೦ ವೈರಸ್ನ ಕಣಗಳು ಆಚೆ ಬರುತ್ತವೆ ಅಂದ್ರೇ ಆ ವ್ಯಕ್ತಿ ಕಮ್ಮಿದರೇ ೩೦೦೦೦ ವೈರಸ್ನ ಕಣಗಳು ಆಚೆ ಬರುತ್ತವೆ. ಹಾಗೆ ಬಂದ ಕಣಗಳು ಆರೋಗ್ಯವಂತ ವ್ಯಕ್ತಿಯ ದೇಹ ಸೇರಲು ಕೇವಲ ೫೦ ನಿಮಿಷ ಸಾಕು. ಆದ್ರೇ ಸೋಂಕಿತ ಕೆಮ್ಮಿದಾಗ ಅಕ್ಕ ಪಕ್ಕದಲ್ಲಿ ಯಾವುದಾದರು ವ್ಯಕ್ತಿ ಮಾಸ್ಕ್ ಧರಿಸದೆ ಇದ್ದ ಪಕ್ಷದಲ್ಲಿ ಆತನ ದೇಹ ಸೇರಲು ಕೇವಲ ೫ ನಿಮಿಷ ಸಾಕು. ಇನ್ನೂ ಆಘಾತಕಾರಿ ವಿಚಾರವೆಂದರೇ ಸೋಂಕಿತ ಕಮ್ಮಿದ ಕಣಗಳು ಗಂಟೆಗೆ ೫೦ ಮೈಲಿ ವೇಗದಲ್ಲಿ ಗಾಳಿಯಲ್ಲಿ ಚಲಿಸುತ್ತವೆ. ಸೀನಿದಾಗ ೨೦೦ ಮೈಲಿ ವೇಗವಾಗಿ ಚಲಿಸುತ್ತವೆ. ಹೀಗಾಯೇ ಕಣ್ಣು ಉಜ್ಜಿಕೊಳ್ಳಬಾರದು ಆಗಾಗ ಮುಖ ಮುಟ್ಟಿಕೊಳ್ಳಬಾರದು. ಹೀಗೆ ಮಾಡಿದಾಗ ವೈರಸ್ನ ಕಣಗಳು ಬೇಗ ದೇಹ ಸೇರುತ್ತವೆ. ಇನ್ನು ಮೊದಲೇ ಯಾವುದಾದರು ಕಾಯಿಲೆ ಇದ್ದ ವ್ಯಕ್ತಿಯ ದೇಹಕ್ಕೆ ಈ ಕಣಗಳು ಶರವೇಗದಲ್ಲಿ ಹರಡುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.








