ನಕಲಿ ಆಕ್ಸಿಮೀಟರ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡದಂತೆ ಎಚ್ಚರಿಕೆ ನೀಡಿದ ಕೇಂದ್ರ ಗೃಹ ಸಚಿವಾಲಯ
ಹೊಸದಿಲ್ಲಿ, ಸೆಪ್ಟೆಂಬರ್23: ಕೇಂದ್ರವು ತನ್ನ ಸೈಬರ್ ಜಾಗೃತಿ ಟ್ವಿಟರ್ ಖಾತೆಯಲ್ಲಿ ಈ ಕುರಿತು ಸಲಹೆಯನ್ನು ನೀಡಿದ್ದು, ಅಪರಿಚಿತ ಯುಆರ್’ಎಲ್ (URL) ಗಳಿಂದ ಆಕ್ಸಿಮೀಟರ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡದಂತೆ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಈ ಅಪ್ಲಿಕೇಶನ್‌ಗಳು ಬಳಕೆದಾರರ ದೇಹದಲ್ಲಿನ ಆಮ್ಲಜನಕದ ಮಟ್ಟವನ್ನು ಪರಿಶೀಲಿಸುತ್ತದೆ ಎಂದು ಹೇಳಿಕೊಂಡರೂ, ಅವು ನಕಲಿಯಾಗಿರಬಹುದು. ಜೊತೆಗೆ ಫೋನ್‌ನಿಂದ ಚಿತ್ರಗಳು, ಸಂಪರ್ಕಗಳು ಮತ್ತು ಇತರ ಮಾಹಿತಿಯಂತಹ ವೈಯಕ್ತಿಕ ಡೇಟಾವನ್ನು ಕದಿಯಬಹುದು. ಅಪ್ಲಿಕೇಶನ್‌ನಲ್ಲಿ ಬಳಕೆದಾರರನ್ನು ಬಯೋಮೆಟ್ರಿಕ್ ಫಿಂಗರ್‌ಪ್ರಿಂಟ್‌ಗಳಿಗಾಗಿ ಕೇಳುವ ಮೂಲಕ ಬಳಕೆದಾರರ ಬಯೋಮೆಟ್ರಿಕ್ ಮಾಹಿತಿಯನ್ನು ಕದಿಯಬಹುದು ಎಂದು ಅದು ಹೇಳಿದೆ.
ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಸಹಯೋಗದೊಂದಿಗೆ 50 ಲಕ್ಷ ರೂ ಗೆಲ್ಲುವ ಅವಕಾಶ
ಆಕ್ಸಿಮೀಟರ್ ಅಪ್ಲಿಕೇಶನ್‌ಗಳು ಬಳಕೆದಾರರ ರಕ್ತದಲ್ಲಿ ಇರುವ ಆಮ್ಲಜನಕದ ಮಟ್ಟವನ್ನು ಪರಿಶೀಲಿಸುತ್ತದೆ ಮತ್ತು ಅವರ ಹೃದಯ ಬಡಿತಗಳ ಬಗ್ಗೆ ನಿಗಾ ಇಡುತ್ತದೆ.
ವಿಶೇಷವಾಗಿ ಕೊರೋನವೈರಸ್ ಸಾಂಕ್ರಾಮಿಕವನ್ನು ಪರಿಗಣಿಸಿ ಆಮ್ಲಜನಕದ ಮಟ್ಟವನ್ನು ಮೇಲ್ವಿಚಾರಣೆ ಮಾಡಿಕೊಳ್ಳುವಂತೆ ಆರೋಗ್ಯ ಅಧಿಕಾರಿಗಳು ಜನರನ್ನು ಕೇಳಿಕೊಂಡಿದ್ದಾರೆ. ಈ ಕಾರಣದಿಂದ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಮತ್ತು ಮಾರುಕಟ್ಟೆಗಳಲ್ಲಿ ಆಕ್ಸಿಮೀಟರ್ ಸಾಧನಗಳು ಲಭ್ಯವಿದ್ದರೂ, ಜನರು ಆಕ್ಸಿಮೀಟರ್ ಅಪ್ಲಿಕೇಶನ್‌ಗಳ ಮೊರೆ ಹೋಗುತ್ತಿದ್ದು, ಇದರ ಜನಪ್ರಿಯತೆಯನ್ನು ಹೆಚ್ಚಿಸಲು ಕಾರಣವಾಗಿದೆ.
2 ವರ್ಷಗಳವರೆಗೆ ಸಾಲ ಮರುಪಾವತಿ ಅವಧಿ ವಿಸ್ತರಿಸಿದ ಎಸ್‌ಬಿಐ
ಸೈಬರ್ ದೋಸ್ತ್ ಟ್ವಿಟರ್ ಖಾತೆಯನ್ನು ಕೇಂದ್ರ ಗೃಹ ಸಚಿವಾಲಯ ನಿರ್ವಹಿಸುತ್ತದೆ. ಇದು ಕಾಲಕಾಲಕ್ಕೆ ಸಂಭವನೀಯ ಸೈಬರ್ ಬೆದರಿಕೆಗಳ ಬಗ್ಗೆ ಸಲಹೆಗಳನ್ನು ನೀಡುತ್ತಲೇ ಇರುತ್ತದೆ.
ಈ ತಿಂಗಳ ಆರಂಭದಲ್ಲಿ, ಆಪಲ್‌ನ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್‌ನಿಂದ ಮಾತ್ರ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಇ-ವ್ಯಾಲೆಟ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ತಿಳಿಸಿತ್ತು. ಎಸ್’ಎಂಎಸ್(SMS), ಇಮೇಲ್ ಅಥವಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಪಡೆದ ಯಾವುದೇ ಇ-ವ್ಯಾಲೆಟ್ ಲಿಂಕ್‌ಗಳು ವಂಚನೆಯಾಗಿರಬಹುದು ಮತ್ತು ಅದನ್ನು ನಂಬಬಾರದು ಎಂದು ಎಚ್ಚರಿಕೆ ನೀಡಿತ್ತು.
ಮೊಬೈಲ್ ಅನ್ನು ಮೊಬೈಲ್ ಸೇವಾ ಕೇಂದ್ರದಲ್ಲಿ ಬಿಡುವ ಮೊದಲು ಈ ವಿಷಯಗಳನ್ನು ಗಮನಿಸಿ
ಸೋಮವಾರ, ಇದು ಸಾಮಾಜಿಕ ಮಾಧ್ಯಮದಲ್ಲಿ ಯುಪಿಐ ಅಪ್ಲಿಕೇಶನ್‌ಗಳ ಮೂಲಕ ರಿಯಾಯಿತಿ ಕೂಪನ್‌ಗಳು, ಕ್ಯಾಶ್‌ಬ್ಯಾಕ್ ಅಥವಾ ಹಬ್ಬದ ಕೂಪನ್‌ಗಳಿಗೆ ಸಂಬಂಧಿಸಿದ ಯಾವುದೇ ಲಾಭದಾಯಕ ಜಾಹೀರಾತುಗಳ ವಿರುದ್ಧ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಅವುಗಳು ಮೋಸದಿಂದ ಕೂಡಿರಬಹುದು ಎಂದು ಹೇಳಿತ್ತು.
ಡೆಂಗ್ಯೂನಿಂದ ಬಳಲಿದ್ದರೆ ಕೋವಿಡ್-19 ಸೋಂಕಿನಿಂದ ರಕ್ಷಣೆ – ಬಹಿರಂಗ ಪಡಿಸಿದ ಸಂಶೋಧನೆ