ಬಾಲಿವುಡ್ ನಲ್ಲಿ ಮತ್ತೊಂದು ಸ್ಟಾರ್ ಜೋಡಿಯ ಮದುವೆ Saaksha Tv
ಹೈದರಾಬಾದ್: ನಟ, ನಿರ್ದೇಶಕ ಫರ್ಹಾನ್ ಅಖ್ತರ್ ತಮ್ಮ ಗೆಳತಿ ಶಿವಾನಿ ದಾಂಡೇಕರ್ ಜೊತೆ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ ಎಂದು ಫರ್ಹಾನ್ ತಂದೆ ಜಾವೇದ್ ಅಖ್ತರ್ ಮಾಹಿತಿ ನೀಡಿದ್ದಾರೆ
4 ವರ್ಷಗಳ ಕಾಲ ಜೊತೆಯಾಗಿ ಸುತ್ತಾಡಿದ್ದ ಈ ಜೋಡಿ ಇದೀಗ ವಿವಾಹವಾಗಲು ನಿರ್ಧರಿಸಿದ್ದಾರೆ. ಫರ್ಹಾನ್ ಹಾಗೂ ಶಿವಾನಿ ಫೆಬ್ರುವರಿ 21ರಂದು ವಿವಾಹವಾಗಲಿದ್ದಾರೆ. ವಿವಾಹದ ತಯಾರಿಯನ್ನು ಸಂಸ್ಥೆಯೊಂದು ನಿರ್ವಹಿಸುತ್ತಿದ್ದು, ಕೆಲಸಗಳು ನಡೆಯುತ್ತಿವೆ. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆ ನಾವು ವಿವಾಹವನ್ನು ಅದ್ಧೂರಿಯಾಗಿ ಆಯೋಜಿಸುತ್ತಿಲ್ಲ ಎಂದು ಜಾವೇದ್ ಹೇಳಿದ್ದಾರೆ.
ಸೊಸೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಜಾವೇದ್, ಶಿವಾನಿ ಬಹಳ ಒಳ್ಳೆಯ ಹುಡುಗಿ. ಕುಟುಂಬದವರೆಲ್ಲರಿಗೂ ಅವಳು ಅಂದ್ರೆ ತುಂಬಾ ಇಷ್ಟ. ಫರ್ಹಾನ್ ಮತ್ತು ಶಿವಾನಿ ಮುಂದಿನ ದಿನಗಳಲ್ಲಿ ತುಂಬಾ ಚೆನ್ನಾಗಿ ಇರುತ್ತಾರೆ ಎಂದರು