ಕನ್ನಡದ ಖ್ಯಾತ ನಿರ್ದೇಶಕ ಅರವಿಂದ ಕೌಶಿಕ್ ಅರೆಸ್ಟ್…..
ಬೆಂಗಳೂರು: ಧಾರವಾಹಿ ನಿರ್ಮಾಪಕನಿಂದ ಹಣ ಪಡೆದು ವಂಚನೆ ಮಾಡಿರುವ ಆರೋಪದ ಮೇಲೆ ಕನ್ನಡದ ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್ ಆಗಿದ್ದಾರೆ. ವೈಯ್ಯಾಲಿಕಾವಲ್ ಪೊಲೀಸರು ನಿರ್ದೇಶಕರನ್ನ ಬಂಧಿಸಿದ್ದಾರೆ.
ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಹೆಸರು ಮಾಡಿದ್ದ ಅರವಿಂದ್ ಕೌಶಿಕ್, ನಮ್ ಏರಿಯಾದಲ್ಲಿ ಒಂದಿನ, ಹುಲಿರಾಯ ಶಾರ್ದೂಲ, ಸಿನಿಮಾಗಳ ನಿರ್ದೇಶನ ಮಾಡಿದ್ದರು. ಕನ್ನಡ ಕಿರುತೆರೆಯಲ್ಲಿ ಅರವಿಂದ್ ಕೌಶಿಕ್ ಕಮಲಿ ಧಾರವಾಹಿ ನಿರ್ದೇಶನ ಮಾಡಿದ್ದರು. ಕಮಲಿ ಧಾರವಾಹಿ ನಿರ್ಮಾಣ ಮಾಡಲಿಕ್ಕೆ ರೋಹಿತ್ 73 ಲಕ್ಷ ಹಣಹೂಡಿಕೆ ಮಾಡಿದ್ದರು.
ಧಾರವಾಹಿ ತೆರೆಕಂಡ ನಂತರ ಹಣ ಹಿಂತಿರುಗಿಸದೇ ಲಾಭಾಂಶವನ್ನು ನೀಡದೇ ವಂಚಸಿದ್ದಾರೆ ಎಂದು ನಿರ್ಮಾಪಕ ರೋಹಿತ್ ಎಂಬುವವರು ವೈಯ್ಯಾಲಿಕಾವಲ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ನಿರ್ದೇಶಕ ಅರವಿಂದ್ ಕೌಶಿಕ್ ವಿರುದ್ದ ಐಪಿಸಿ ಸೆಕ್ಷನ್ 506 ಮತ್ತು 420 ಅಡಿ ಪ್ರಕರಣ ದಾಖಲಿಸಿದ್ದರು.








