ಕೋವಿಡ್-19 ವೈರಸ್ ಗಾಳಿಯಲ್ಲಿ ಹರಡುತ್ತದೆ ಎಂದು ಒಪ್ಪಿಕೊಂಡ ವಿಶ್ವ ಆರೋಗ್ಯ ಸಂಸ್ಥೆ
ಹೊಸದಿಲ್ಲಿ, ಜುಲೈ 8: ಕೋವಿಡ್-19 ಸೋಂಕು ಜನರಲ್ಲಿ ಹೇಗೆ ಹರಡುತ್ತದೆ ಎಂಬುದರ ಕುರಿತು ತನ್ನ ಮಾರ್ಗಸೂಚಿಗಳನ್ನು ನವೀಕರಿಸಲು ಜಾಗತಿಕ ವಿಜ್ಞಾನಿಗಳನ್ನೊಳಗೊಂಡ ಗುಂಪು ವಿಶ್ವ ಆರೋಗ್ಯ ಸಂಸ್ಥೆಯನ್ನು ಒತ್ತಾಯಿಸಿದ ಬಳಿಕ ವಿಶ್ವ ಆರೋಗ್ಯ ಸಂಸ್ಥೆ (WHO) ಕೊರೊನಾ ವೈರಸ್ ಗಾಳಿಯಿಂದ ಹರಡುತ್ತದೆ ಎನ್ನಲು ಸೂಕ್ತ ಪುರಾವೆಗಳು ದೊರೆತಿವೆ ಎಂದು ಒಪ್ಪಿಕೊಂಡಿದೆ.
ಡಬ್ಲ್ಯುಎಚ್‌ಒದ ಕೋವಿಡ್-19 ಸಾಂಕ್ರಾಮಿಕ ರೋಗದ ತಾಂತ್ರಿಕ ಪ್ರಮುಖ ಡಾ.ಮರಿಯಾ ವ್ಯಾನ್ ಕೆರ್ಕೋವ್ ಪತ್ರಿಕಾಗೋಷ್ಠಿಯಲ್ಲಿ, ನಾವು ಕೋವಿಡ್-19 ಸೋಂಕು ಹರಡಲು ಗಾಳಿಯಿಂದಲೂ ಸಾಧ್ಯವಿದೆ. ಇದರಿಂದಾಗಿ ವೈರಸ್ ಹರಡುವುದು ವೇಗವಾಗುತ್ತಿದೆ ಮತ್ತು ಭವಿಷ್ಯದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಡಬ್ಲ್ಯುಎಚ್‌ಒ ಹೇಳಿದೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ, ನಾವು ದಿನಕ್ಕೆ 100,000 ಪ್ರಕರಣಗಳನ್ನು ಕಾಣುತ್ತಿದ್ದು, ಇದೀಗ ದಿನಕ್ಕೆ 200,000 ಪ್ರಕರಣಗಳು ದಾಖಲಾಗುತ್ತಿದೆ ಎಂದು ಡಾ. ಮೈಕೆಲ್ ರಯಾನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಗಾಳಿಯಲ್ಲಿ ಕೊರೊನಾ ಸೋಂಕು ಹರಡುತ್ತದೆ ಎಂದು 32 ರಾಷ್ಟ್ರಗಳ 239 ವಿಜ್ಞಾನಿಗಳು ನಡೆಸಿದ ಸಂಶೋಧನ ವರದಿ ಸೈಂಟಿಸ್ಟ್ ಜರ್ನಲ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ವಿಜ್ಞಾನಿಗಳು, ಕೊರೊನಾ ವೈರಸ್ ಗಾಳಿಯಲ್ಲಿ ಕೆಲವು ಮೈಲು ದೂರದ ತನಕ ಹಾರಾಡುವ ಕಾರಣ ಸೋಂಕಿತರ ಸಂಪರ್ಕ ಇಲ್ಲದ ವ್ಯಕ್ತಿಗೂ ಹರಡಬಹುದು ಎಂದು ಹೇಳಿದ್ದರು. ಗಾಳಿಯ ವೇಗ ಜೋರಾಗಿದ್ದರೆ, ಅದು ಮತ್ತಷ್ಟು ದೂರ ಹಾರಬಹುದಾಗಿದ್ದು, ಇತರ ಸಾಂಕ್ರಾಮಿಕ ವೈರಸ್ ಮತ್ತು ಬ್ಯಾಕ್ಟಿರಿಯಾಗಳಂತೆ ಕೆಲವು ಸಮಯ ಗಾಳಿಯಲ್ಲಿ ಜೀವಂತವಾಗಿದ್ದು, ಆಶ್ರಯ ಪಡೆಯುತ್ತವೆ ಎಂದು ವಿಜ್ಞಾನಿಗಳು ವಿವರಿಸಿದ್ದರು.








