2021ರಲ್ಲಿ ಪ್ರಪಂಚ ಅಲ್ಲೋಲ ಕಲ್ಲೋಲ.. ಪ್ರಕೃತಿ ವಿನಾಶ : ಕಾಲಜ್ಞಾನ
ಬಾಬಾ ವಂಗಾ .. ಬಹುಶಃ ಹೆಚ್ಚಿನ ಜನರಿಗೆ ಈ ಹೆಸರು ತಿಳಿದಿರುವುದಿಲ್ಲ. ಆದರೆ ಒಮ್ಮೆ ನೀವು ಅವರ ಬಗ್ಗೆ ತಿಳಿದುಕೊಂಡರೆ ಅಷ್ಟು ಸುಲಭವಾಗಿ ಮರೆಯುವುದಿಲ್ಲ. ಇಷ್ಟಕ್ಕೂ ಅವರ ಬಗ್ಗೆ ತಿಳಿದುಕೊಳ್ಳೋ ವಿಶೇಷವಾದ್ರೂ ಏನು ಅಂತಾ ಯೋಚನೆ ಮಾಡ್ತೀದ್ದೀರಾ..? ಇನ್ನಿಲ್ಲ. ವೀರಬ್ರಹ್ಮೇಂದ್ರ ಸ್ವಾಮಿ, ಕೈವಾರ ತಾತಯ್ಯ ರಂತಯೇ ಅವರೂ ಕೂಡ ಕಾಲಜ್ಞಾನಿ. ಭವಿಷ್ಯದಲ್ಲಿ ಏನಾಗಬಹುದು ಎಂದು ಅವರು ನುಡಿದಿದ್ದು, ಅವುಗಳಲ್ಲಿ ಹಲವು ನಿಜವಾಗಿವೆ.
ಹಾಗೇ ಅವರು 2021ರಲ್ಲಿ ಆಗುವ ಘಟನೆಗಳ ಬಗ್ಗೆಯೇ ಹೇಳಿದ್ದಾರೆ. ಅವುಗಳ ಬಗ್ಗೆ ತಿಳಿದುಕೊಳ್ಳುವ ಮುನ್ನಾ ಬಾಬಾ ವಂಗಾ ಕಾಲಜ್ಞಾನಿ ಆಗಿದ್ದು ಹೇಗೆ ಅಂತ ತಿಳಿದುಕೊಳ್ಳೋಣ.

ಬಲ್ಗೇರಿಯಾ ಮೂಲದ ಬಾಬಾ ವಂಗಾ ಅವರ ಮೂಲ ಹೆಸರು ವಾಂಜೆಲಿಯಾ ಪೆಂಡೆವಾ ಡಿಮಿಟ್ರೋವಾ. ಹನ್ನೆರಡನೇ ವಯಸ್ಸಿನಲ್ಲಿ ಬಂದ ಸುಂಟರಗಾಳಿ ಅವರ ಕಣ್ಣುಗಳನ್ನ ಕಿತ್ತುಕೊಳ್ತು. ಆದರೆ ಆಶ್ಚರ್ಯಕರವಾಗಿ ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬುದರ ಬಗ್ಗೆ ಕಣ್ಣಿಗೆ ಕಟ್ಟಿಕೊಡುವಾಗೇ ಹೇಳುವ ಅದ್ಭುತ ಶಕ್ತಿಯನ್ನು ಅವರು ಗಳಿಸಿದರು.
ಇದು ಅವರನ್ನು ಬಲ್ಗೇರಿಯದ ನಾಸ್ಟ್ರಾಡಾಮಸ್ ಎಂದು ನೋಡುವಂತೆ ಮಾಡ್ತು. ಅವರು ಅನೇಕ ವಿಪತ್ತುಗಳ ಬಗ್ಗೆ ಭವಿಷ್ಯನುಡಿದ್ದಿದ್ದಾರೆ.ಸೋವಿಯತ್ ಒಕ್ಕೂಟದ ವಿಭಜನೆ, ರಾಜಕುಮಾರಿ ಡಯಾನಾ ಸಾವು, ಚೆರ್ನೋಬಿಲ್ ಪರಮಾಣು ಅಪಘಾತ, ಮತ್ತು ಪುಟಿನ್ ಮೇಲೆ ಹತ್ಯೆ ಯತ್ನ ಎಲ್ಲವೂ ಅವರು ನುಡಿದಂತೆ ನಿಜವಾಗಿಯೂ ಸಂಭವಿಸಿವೆ. ಅಂದಹಾಗೆ 1996 ರಲ್ಲಿ ಅವರು ಸಾಯುವ ಮೊದಲು, 2021 ರಲ್ಲಿ ಏನಾಗಬಹುದು ಎಂದು ಭವಿಷ್ಯ ನುಡಿದ್ದಾರಂತೆ.
ಪ್ರಪಂಚ ಅಲ್ಲೋಲ ಕಲ್ಲೋಲ.. ಪ್ರಕೃತಿ ವಿನಾಶ
ಬಾಬಾ ವಂಗಾ 2021 ರಲ್ಲಿ ಭಾರಿ ನೈಸರ್ಗಿಕ ವಿಕೋಪದ ಎಚ್ಚರಿಕೆ ನೀಡಿದ್ದಾರೆ. ಜನರು ಕಷ್ಟಕರ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ವಿನಾಶಕಾರಿ ಘಟನೆಗಳಿಂದ ಜಗತ್ತು ಅಲ್ಲೋಲ ಕಲ್ಲೋಲವಾಗುತ್ತೆ ಅಂತಾ 2021ರ ಬಗ್ಗೆ ಭವಿಷ್ಯ ನುಡಿದ್ದಾರೆ.
ಇದೇ ಸಮಯದಲ್ಲಿ, ಕ್ಯಾನ್ಸರ್ ಸಾಂಕ್ರಾಮಿಕವು ಅದರ ಸಂಕೋಲೆಗಳಿಂದ ಮುಕ್ತವಾಗಲಿದೆ ಎಂಬ ಒಳ್ಳೆಯ ಸುದ್ದಿಯನ್ನು ನೀಡಿದ್ದಾರೆ. ಅಂದ್ರೆ ಮುಂದಿನ ವರ್ಷ ಕ್ಯಾನ್ಸರ್ ಗೆ ಔಷಧಿ ಸಿಗಲಿದೆ ಎಂದು ಹೇಳಿದ್ದಾರೆ.
ಹಾಗೇ ಪೆಟ್ರೋಲ್ ಉತ್ಪಾದನೆ ಸ್ಥಗಿತಗೊಂಡಿದ್ದರಿಂದ ಭೂ ತಾಯಿ ವಿಶ್ರಾಂತಿ ಪಡೆಯುತ್ತಾಳೆ. ಆ ಸಮಯದಲ್ಲಿ ರೈಲುಗಳು ಸೌರಶಕ್ತಿಯ ಮೇಲೆ ಚಲಿಸುತ್ತವೆ. ಕೆಲವರು ಕೆಂಪು ಹಣವನ್ನು ಬಳಸುತ್ತಾರೆ. ಒಂದು ಡ್ರ್ಯಾಗನ್ ಇಡೀ ಜಗತ್ತನ್ನು ತನ್ನ ಅಧೀನದಲ್ಲಿಟ್ಟುಕೊಳ್ಳುತ್ತದೆ ಮತ್ತು ಅದನ್ನು ಎದುರಿಸಲು ಮೂರು ದೈತ್ಯ ರಾಷ್ಟ್ರಗಳು ಒಂದಾಗುತ್ತವೆ ಎಂದು ಹೇಳಿದ್ದಾರೆ. ಇಲ್ಲಿ ಡ್ರ್ಯಾಗನ್ ಅಂದ್ರೆ ಚೀನಾ ಅಂತ ಅಂದುಕೊಳ್ಳಬಹುದು.
ಯಾಕೆಂದ್ರೆ ಸದ್ಯ ಚೀನಾ ವಿಶ್ವವನ್ನ ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದಕ್ಕಾಗಿ ಎಂತಹ ನೀಚ ಕೆಲಸ ಮಾಡಲು ಅದು ಸಿದ್ಧವಾಗಿದೆ. ಇದಕ್ಕೆ ಕೊರೊನಾ ವೈರಸ್ ಸಾಕ್ಷಿಯಾಗಿದೆ. ಇನ್ನು ಆ ಮೂರು ದೈತ್ಯ ದೇಶಗಳನ್ನು ಅಮೇರಿಕಾ, ಭಾರತ ಮತ್ತು ರಷ್ಯಾ ಎಂದು ಭಾವಿಸಲಾಗುತ್ತಿದೆ. ಇದಲ್ಲದೇ ಪ್ರಮುಖವಾಗಿ 2341 ರ ವೇಳೆಗೆ ಈ ಭೂಮಿ ಜನರು ವಾಸಿಸಲು ಯೋಗ್ಯವಾಗಿರುವುದಿಲ್ಲ ಎಂದು ಬಾಬಾ ವಂಗಾ ಭವಿಷ್ಯ ನುಡಿದ್ದಾರೆ.








