ಭಾರತಕ್ಕೆ ಮರಳಿದ ಯೋಗಿನಿ ವಿಗ್ರಹ
ನವದೆಹಲಿ: ಸ್ವದೇಶಕ್ಕೆ ಬಂದ ಇಂಗ್ಲೆಂಡ್ಗೆ ಹೊತ್ತೊಯ್ಯಲಾದ 10ನೇ ಶತಮಾನದ ವಿಗ್ರಹ. ಈ ವಿಗ್ರಹವು ಶುಕ್ರವಾರ ಭಾರತಕ್ಕೆ ಮರಳಿ ತರಲಾಗಿದೆ.
ಮರಳುಗಲ್ಲಿನಲ್ಲಿ ಸುಂದರವಾಗಿ ಕೆತ್ತಲಾಗಿರುವ ಮೇಕೆ ತಲೆಯ ಯೋಗಿನಿ ವಿಗ್ರಹ ಉತ್ತರ ಪ್ರದೇಶದ ಬಂದಾ ಜಿಲ್ಲೆ ಲೋಖಾರಿ ದೇವಸ್ಥಾನದ್ದಾಗಿತ್ತು. ಇದನ್ನು 1980ರಲ್ಲಿ ಕದ್ದೊಯ್ಯಲಾಗಿತ್ತು. ಇತ್ತೀಚಿಗೆ ಇಂಗ್ಲೆಂಡ್ನ ಖಾಸಗಿ ನಿವಾಸದ ಉದ್ಯಾನದಲ್ಲಿ 10ನೇ ಶತಮಾನದ ಪ್ರಾಚೀನ ವಿಗ್ರಹವನ್ನು ಪತ್ತೆಯಾಗಿರುವ ವರದಿಯಾಗಿತ್ತು.
40 ವರ್ಷಗಳ ಹಿಂದೆ ಭಾರತದಿಂದ ಇಂಗ್ಲೆಂಡ್ಗೆ ಕದ್ದೊಯ್ಯಲಾ ಈ ವಿಗ್ರಹವನ್ನು ಸ್ವದೇಶಕ್ಕೆ ತರುವ ಜಾವಾಬ್ದಾರಿಯನ್ನು ಭಾರತೀಯ ಹೈ ಕಮಿಷನರ್ ಗಾಯತ್ರಿ ಇಸ್ಸಾರ್ ಕುಮಾರ್ ವಹಿಸಿಕೊಂಡಿದ್ದು, ಇವರಿಗೆ ಆರ್ಟ್ ರಿಕವರಿ ಇಂಟರ್ನ್ಯಾಶನಲ್ ಕ್ರಿಸ್ ಮರಿನೆಲ್ಲೋ ಸಹಾಯ ಮಾಡಿದ್ದಾರೆ. ಇದೀಗ ವಿಗ್ರಹವನ್ನು ನವದೆಹಲಿಯ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ರವಾನಿಸಲಾಗುತ್ತಿದೆ.