ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಿರಿಯ ಸಹೋದರ ನಿಧನ
ವಾಷಿಂಗ್ಟನ್, ಅಗಸ್ಟ್ 16: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಿರಿಯ ಸಹೋದರ ಉದ್ಯಮಿ ರೋಬರ್ಟ್ ಟ್ರಂಪ್ ನ್ಯೂಯಾರ್ಕ್ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ನಿಧನರಾದರು ಎಂದು ಅಧ್ಯಕ್ಷರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅವರು ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಶ್ವೇತಭವನದ ಅಧಿಕಾರಿಗಳು ಹೇಳಿದ ನಂತರ ಅಧ್ಯಕ್ಷರು ಶುಕ್ರವಾರ ನ್ಯೂಯಾರ್ಕ್ ನಗರದ ಆಸ್ಪತ್ರೆಯಲ್ಲಿ ತಮ್ಮ ಸಹೋದರರನ್ನು ಭೇಟಿ ಮಾಡಿದ್ದರು.
‘ನನ್ನ ಸಹೋದರ ರಾಬರ್ಟ್ ಇಂದು ರಾತ್ರಿ ನಿಧನರಾದರು ಎಂಬ ಮಾಹಿತಿಯನ್ನು ದುಃಖದಿಂದ ಹಂಚಿಕೊಳ್ಳುತ್ತೇನೆ. ಅವರು ಕೇವಲ ನನ್ನ ಸಹೋದರ ಮಾತ್ರವಲ್ಲ ನನ್ನ ಉತ್ತಮ ಸ್ನೇಹಿತ ಕೂಡ ಆಗಿದ್ದರು. ಅವರ ನೆನಪು ಸದಾ ಕಾಲ ನನ್ನ ಹೃದಯದಲ್ಲಿರಲಿದೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.