ಬಾಂಬ್ ಕರೆ | 90 ನಿಮಿಷ ತಡವಾಗಿ ಹೊರಟ ರೈಲು
ಬೆಂಗಳೂರು: ಪಬ್ಜಿ ಆಟಕ್ಕಾಗಿ ಬಾಲಕ ಹುಸಿ ಬಾಂಬ್ ಕರೆ ಮಾಡಿರುವ ಘಟನೆ ಯಲಹಂಕ ರೇಲ್ವೇ ನಿಲ್ದಾಣದಲ್ಲಿ ನಡೆದಿದೆ.
ಮಾರ್ಚ್ 30ರಂದು ಘಟನೆ ಸಂಭವಿಸಿದ್ದು, ಬಾಲಕನ ಸುಳ್ಳಿಗೆ ಪೊಲೀಸರು 90 ನಿಮಿಷ ರೈಲನ್ನ ತಡಕಾಡಿದ್ದಾರೆ. ಹುಸಿ ಬಾಂಕ್ ಕರೆ ಎಂದು ತಿಳಿದ ಪೊಲೀಸರು ಕರೆಯ ಮೂಲ ಹುಡುಕಾಡಿದ್ದಾರೆ.
ನಡೆದಿದ್ದೇನು? ಬಾಲಕನ ಸ್ನೇಹಿತ 2ಗಂಟೆಗೆ ಯಲಹಂಕದಿಂದ ಕಾಚಿಗುಡ್ಡ ಎಕ್ಸ್‌ಪ್ರೆಸ್‌ನಲ್ಲಿ ತೆರಳಬೇಕಿತ್ತು. ಸ್ನೇಹಿತ ಹೋದರೆ ತನಗೆ ಪಾರ್ಟ್ನರ್ ಇರಲ್ಲವೆಂದು ಬಾಲಕ ಹುಸಿ ಕರೆ ಮಾಡಿದ್ದಾನೆ. ರೈಲ್ವೇ ಸಹಾಯವಾಣಿಗೆ ಕರೆ ಮಾಡಿ ಕಾಚಿಗುಡ್ಡ ಎಕ್ಸ್‌ಪ್ರೆಸ್‌ನಲ್ಲಿ ಬಾಂಬ್ ಇದೆ ಎಂದು ಬಾಲಕ ಹೇಳಿದ್ದಾನೆ.
ನಂತರ ಪ್ರಯಾಣಿಕರನ್ನ ಇಳಿಸಿ ಪೊಲೀಸರು 90 ನಿಮಿಷ ಪರಿಶೀಲಿಸಿದ್ದಾರೆ. ಸುಳ್ಳೆಂದು ತಿಳಿದ ಮೇಲೆ ಹುಸಿ ಕರೆಯ ಮೂಲ ಹುಡುಕಾಡಿದ್ದರು. ಬಳಿಕ ಅಪ್ರಾಪ್ತ ಬಾಲಕ ಹೇಳಿದ ಅಸಲಿ ಸುಳ್ಳಿನ ಕಹಾನಿ ಬಯಲಾಗಿದೆ. ಅಪ್ರಾಪ್ತ ಬಾಲಕನಾದ್ದರಿಂದ ಪೊಲೀಸರು ಪ್ರಕರಣ ದಾಖಲಿಸದೇ ಬುದ್ಧಿವಾದ ಹೇಳಿದ್ದಾರೆ.








