ನವದೆಹಲಿ: ಅಕ್ಟೋಬರ್ 1 ರಿಂದ ಅನ್ಲಾಕ್ 5.0 ಆರಂಭವಾಗಲಿದ್ದು, ನೂತನ ಮಾರ್ಗಸೂಚಿಯಲ್ಲಿ ಚಿತ್ರಮಂದಿರಗಳ ಪುನಾರಂಭಕ್ಕೆ ಸರ್ಕಾರ ಅವಕಾಶ ನೀಡುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಅನ್ಲಾಕ್ 5.0 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದ್ದು, ಅಕ್ಟೋಬರ್ 1 ರಿಂದ ಸಿನಿಮಾ ಮಂದಿರ ಪುನಾರಂಭಕ್ಕೆ ಅವಕಾಶ ನೀಡಬಹುದು ಎಂದು ಹೇಳಲಾಗ್ತಿದೆ.
ಸೆಪ್ಟಂಬರ್ 30ಕ್ಕೆ ಅನ್ಲಾಕ್ 4.0 ಮುಕ್ತಾಯವಾಗಲಿದ್ದು, ಅಕ್ಟೋಬರ್ 1 ರಿಂದ ಅನ್ವಯವಾಗುವಂತೆ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು. ಹಲವು ಕಟ್ಟುನಿಟ್ಟಿನ ಕೊರೊನಾ ನಿಯಮಾವಳಿಗಳ ವಿಧಿಸಿ ಚಿತ್ರಮಂದಿರಗಳ ರೀಓಪನ್ ಗೆ ಗ್ರೀನ್ ಸಿಗ್ನಲ್ ಕೊಡುವ ನಿರೀಕ್ಷೆಯಿದೆ.