ದುಃಖದಲ್ಲಿದ್ದರೂ ಆಗ ತಾನೆ ಹುಟ್ಟಿದ ಮಗುವನ್ನು ಪೋಷಕರು ದಾನ ಮಾಡಿ ಶ್ರೇಷ್ಠತೆ ಮೆರೆದಿದ್ದಾರೆ,
ಈ ಘಟನೆ ಹರಿದ್ವಾರದಲ್ಲಿ ನಡೆದಿದೆ. ಈ ಮೂಲಕ ಭಾರತದ ಅತ್ಯಂತ ಕಿರಿಯ ದೇಹದಾನಿ ಎಂಬ ಹೆಸರನ್ನು ಆ ಮಗು ಪಡೆದಿದೆ. ಡಿ. 8 ರಂದು ಮಗು ಜನಿಸಿದ ಸ್ವಲ್ಪ ಸಮಯದಲ್ಲೇ ಸಾವನ್ನಪ್ಪಿತ್ತು. ತೀವ್ರ ಉಸಿರಾಟದ ತೊಂದರೆಯನ್ನು ಅನುಭವಿಸಿತ್ತು. ಮಗು ಹೈಪೋಕ್ಸಿಕ್-ಇಸ್ಕೆಮಿಕ್ ಎನ್ಸೆಫಲೋಪತಿ (HIE) ಯಿಂದ ಬಳಲುತ್ತಿದ್ದಳು. ಈ ರೋಗ ಒಂದು ರೀತಿಯ ಮೆದುಳಿನ ಹಾನಿ ಉಂಟು ಮಾಡುತ್ತದೆ. ಆದರೂ ವೈದ್ಯರಿಗೆ ಅವಳನ್ನು ಉಳಿಸಲು ಸಾಧ್ಯವಾಗಲಿಲ್ಲ.
ಮಗು ಸಾವನ್ನಪ್ಪುತ್ತಿದ್ದಂತೆ ಪೋಷಕರು, ಹರಿದ್ವಾರದ ನಿವಾಸಿಗಳಾದ ರಾಮ್ ಮೆಹರ್ ಕಶ್ಯಪ್ ಮತ್ತು ಅವರ ಪತ್ನಿ ನ್ಯಾನ್ಸಿ, ತಮ್ಮ ಮಗಳ ದೇಹವನ್ನು ಡೆಹ್ರಾಡೂನ್‌ನ ಡೂನ್ ಮೆಡಿಕಲ್ ಕಾಲೇಜಿಗೆ ದಾನ ಮಾಡಿದ್ದಾರೆ.








