ಬೆಂಗಳೂರು: ರಾಜ್ಯಾದ್ಯಂತ ಬಾರ್ ಬಂದ್ಗೆ ಮದ್ಯ ಮಾರಾಟಗಾರರ ಸಂಘ ಕರೆ ನೀಡಿತ್ತು. ಆದರೆ, ಸಿಎಂ ಅವರೊಂದಿಗೆ ನಡೆದ ಸಭೆಯಲ್ಲಿ ಭರವಸೆ ಸಿಕ್ಕ ನಂತರ ಹೋರಾಟ ಹಿಂಪಡೆಯಲಾಗಿದೆ.
ನ.20 ರಂದು ರಾಜ್ಯಾದ್ಯಂತ ಬಾರ್ಗಳನ್ನು ಬಂದ್ ಮಾಡುವ ಕರೆಯನ್ನು ಮದ್ಯ ಮಾರಾಟಗಾರರ ಸಂಘ ನೀಡಿತ್ತು. ಬಂದ್ಗೂ ಮುನ್ನಾ ದಿನವಾದ ಇಂದು ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಸಂಘದ ಸದಸ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಸಿಎಂ ಭರವಸೆ ಈಡೇರಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಸಭೆ ನಂತರ ಪ್ರಕಟಣೆ ಹೊರಡಿಸಿರುವ ಮದ್ಯ ಮಾರಾಟಗಾರರ ಸಂಘ, ಮುಖ್ಯಮಂತ್ರಿಗಳು ನಮ್ಮ ಸಂಘದ ಬೇಡಿಕೆ ಈಡೇರಿಸುವ ಆಶ್ವಾಸನೆ ನೀಡಿದ್ದಾರೆ. ಹೀಗಾಗಿ, ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್ಗೆ ನೀಡಿದ್ದ ಕರೆಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದೇವೆ ಎಂದು ಹೇಳಿದೆ.