ನಮ್ಮೂರ ಬುಲ್ಸ್ ತಂಡದಲ್ಲಿ `ಕನ್ನಡಿಗರೇ ಇಲ್ಲ’.. bengaluru bulls saaksha tv
ಬೆಂಗಳೂರು : ಕೊರೊನಾ ಕಾರಣದಿಂದ ಎರಡು ವರ್ಷಗಳ ಬಳಿಕ ದೇಸಿ ಕ್ರೀಡೆ ಕಬಡ್ಡಿ ಹಂಗಾಮ ಶುರುವಾಗಿದೆ. ಈ ಬಾರಿ ಎಲ್ಲಾ ಪಂದ್ಯಗಳು ಬೆಂಗಳೂರಿನಲ್ಲಿಯೇ ನಡೆಯಲಿದ್ದು, ಪ್ರತಿತಂಡವೂ 22 ಪಂದ್ಯಗಳನ್ನ ಆಡಲಿದೆ. ಪ್ರೋ ಕಬಡ್ಡಿ ಲೀಗ್ ಗೆ ಭಾರತದಲ್ಲಿ ಹೆಚ್ಚು ಕಡಿಮೆ ಐಪಿಎಲ್ ಗೆ ಇರುವ ಕ್ರೇಜ್ ಯೇ ಇದೆ.
ಇನ್ನು ಎರಡು ವರ್ಷಗಳ ಕೊರೊನಾ ಬ್ರೇಕ್ ಬಳಿಕ ಆರಂಭವಾಗಿರುವ ಪ್ರೋ ಕಬಡ್ಡಿ ಲೀಗ್ ನಲ್ಲಿ ಒಟ್ಟು 15 ಮಂದಿ ಕನ್ನಡಿಗ ಕಲಿಗಳು ಅಖಾಡಕ್ಕೆ ಧುಮುಕುತ್ತಿದ್ದಾರೆ. ಆದ್ರೆ ವಿಪರ್ಯಾಸವೆಂದರೆ ನಮ್ಮೂರ ತಂಡವಾಗಿರುವ ಬೆಂಗಳೂರು ಬುಲ್ಸ್ನಲ್ಲಿ ಒಬ್ಬನೇ ಒಬ್ಬ ಕನ್ನಡಿಗನಿಲ್ಲ.
ಹೌದು..! ಬೆಂಗಳೂರು ಬುಲ್ಸ್ ತಂಡ ಪ್ರತಿ ಬಾರಿಯೂ ಪ್ರಶಸ್ತಿ ಗೆಲ್ಲುವ ಫೇವರೇಟ್ ತಂಡ. ಬೆಂಗಳೂರು ತಂಡಕ್ಕೆ ಕರ್ನಾಟಕದ ಮಂದಿ ಸಾಕಷ್ಟು ಬೆಂಬಲ ಕೊಡ್ತಾರೆ. ನಮ್ಮೂರ ತಂಡ.. ಗುಮ್ಮೋಕೆ ನಾವು ರೆಡಿ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡ್ತಾರೆ. ಬುಲ್ಸ್ ಬಳಗದಲ್ಲಿ ಪವನ್ ಶರಾವತ್ ರಂತಹ ಸ್ಟಾರ್ ಆಟಗಾರರಿದ್ದಾರೆ. ಆದ್ರೆ ಒಬ್ಬೇ ಒಬ್ಬ ಕನ್ನಡಿಗರನಿಲ್ಲ.
ಇದು ಬಿಟ್ಟರೇ ಇತರ 9 ತಂಡಗಳಲ್ಲಿ ಕನ್ನಡದ ಕಲಿಗಳಿದ್ದಾರೆ. ನಮ್ಮೂರ ತಂಡದಲ್ಲಿ ಬಿಟ್ಟು ಉಳಿದ ಎಲ್ಲ ತಂಡಗಳಲ್ಲಿ ಕನ್ನಡಿಗರು ಕಮಾಲ್ ಮಾಡ್ತಿದ್ದಾರೆ. ಬೆಂಗಾಲ್ ವಾರಿಯಸ್ ನಲ್ಲಿ ಸುಕೇಶ್ ಹೆಗ್ಡೆ, ರಿಷಾಂಕ್ ದೇವಾಡಿಗ, ಸಚಿನ್ ವಿ, ದರ್ಶನ್, ಮನೋಜ್ ಗೌಡ, ಆನಂದ್.
ಪಾಟ್ನಾ ಪೈರೇಟ್ಸ್ನ ನಾಯಕರಾಗಿ ಪುತ್ತೂರಿನ ಪ್ರಶಾಂತ್ ಕುಮಾರ್ ರೈ ರೈಸ್ ಆಗುತ್ತಿದ್ದಾರೆ. ನೆರೆಯ ತೆಲುಗು ಟೈಟಾನ್ಸ್ನಲ್ಲಿ ರಾಕೇಶ್ ಕುಮಾರ್, ದಬಾಂಗ್ ಡೆಲ್ಲಿಯಲ್ಲಿ ಜೀವಾ ಕುಮಾರ್, ಜೈಪುರ್ ಪಿಂಕ್ ಪ್ಯಾಂಥರ್ಸ್ನಲ್ಲಿ ಪವನ್ ಕುಮಾರ್, ತಮಿಳ್ ತಲೈವಾಸ್ಗೆ ಕನ್ನಡಿಗ ಪ್ರಪಂಚನ್ ಮಿಂಚುತ್ತಿದ್ದಾರೆ.
ಇನ್ನು ಪುಣೇರಿ ಪಲ್ಟನ್ ನಲ್ಲಿ ಚೇತನ್ ಮತ್ತು ವಿಶ್ವಾಸ್ ಕಾಣಿಸಿಕೊಂಡಿದ್ದು, ಗುಜರಾತ್ ತಂಡಲದಲ್ಲಿ ರತನ್.ಕೆ ಮತ್ತು ಯು ಮುಂಬಾದಲ್ಲಿ ಸಚಿನ್ ಪ್ರತಾಪ ಸ್ಥಾನ ಪಡೆದಿದ್ದಾರೆ.
ಹೀಗೆ ಬೆಂಗಳೂರು ಬುಲ್ಸ್ ತಂಡವನ್ನು ಹೊರತು ಪಡಿಸಿ ಪ್ರೋ ಕಬ್ಬಡ್ಡಿಯ ಎಲ್ಲ ತಂಡಗಳಲ್ಲೂ ಕನ್ನಡಿಗರು ಮಿಂಚುತ್ತಿದ್ದಾರೆ.