ಬೆಂಗಳೂರು :ಲಾಕ್ ಡೌನ್ ನಿಂದಾಗಿ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ನೀಡಲು ಹಣವಿಲ್ಲ. ಒಂದು ರೂಪಾಯಿಯನ್ನೂ ಕೂಡ ದುಂದುವೆಚ್ಚ ಮಾಡಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಆದರೆ ಅವರ ಸಂಪುಟದ ಕ್ರಿಯಾಶೀಲ ಸಚಿವರೊಬ್ಬರ ಮನೆ ಹೊಸ ಹೈಟೆಕ್ ರೂಪ ಪಡೆದುಕೊಳ್ಳುತ್ತಿದೆ. ಹೊಸ ರೂಪ ನೀಡಲು ಕೋಟ್ಯಂತರ ರೂಪಾಯಿ ಹಣವನ್ನು ಖರ್ಚು ಮಾಡಲಾಗುತ್ತಿದೆ.ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರ ಸರ್ಕಾರಿ ನಿವಾಸ ಇದೀಗ ಹೊಸ ರೂಪ ಪಡೆಯುತ್ತಿದೆ. ಈ ಹಿಂದೆ ರಮೇಶ್ ಜಾರಕಿಹೊಳಿ ಇದ್ದ ನಿವಾಸದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಇದ್ದಾರೆ.
ಅಭಿವೃದ್ದಿ ಕಾರ್ಯಗಳಿಗೆ ಸರ್ಕಾರ ಬಳಿ ಹಣವಿಲ್ಲ. ಸಚಿವರೊಬ್ಬರ ಮನೆಗೆ ಹೊಸ ರೂಪ ನೀಡಲು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ರಾಜ್ಯದ ಸಂಕಷ್ಟವನ್ನು ತುಂಬ ಹತ್ತಿರದಿಂದ ಗಮನಿಸಿದ ಸಚಿವರೇ ಹೀಗೆ ಮಾಡಿದರೇ ಹೇಗೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.








